ಹನಿಟ್ರ್ಯಾಪ್‌ ಆಗಿದ್ರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಿ: ಡಿಕೆಶಿ

Public TV
1 Min Read

ಮಡಿಕೇರಿ: ಹನಿಟ್ರ್ಯಾಪ್‌ (Honeytrap) ಆಗಿದ್ದರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ಕೊಡಗಿನ ಭಾಗಮಂಡಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹನಿ ಟ್ರ‍್ಯಾಪ್ ಮಾಡುವುದು ಅಲ್ಲ. ಹನಿಟ್ರ‍್ಯಾಪ್ ಆಗುವುದು. ಮಾಡಿದ್ದುಣ್ಣೋ ಮಹರಾಯ, ಅವರು ಮಾಡಿದ್ದು ಅವರಿಗೆ . ಹಾಗೇನಾದರೂ ಆಗಿದ್ದರೆ ದೂರು ನೀಡಲಿ ಕೊಡಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಮುನಿರತ್ನ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿವೇಶನದಲ್ಲಿ ಅವರು ಏನು ಮಾಡಿದ್ದಾರೆ ಎನ್ನುವುದು ದೂರಿನಲ್ಲಿ ಇದೆ. ಬಿಜೆಪಿಯವರೇ ಹೇಳ್ತಿದ್ದಾರೆ ಅಲ್ವಾ ಅಶೋಕ್‌ಗೆ ಏನೋ ಮಾಡಿದ್ದಾರೆ ಅಂತ, ಸುಮ್ಮ ಸುಮ್ಮನೆ ಯಾರಾದರೂ ನಿಮ್ಮ ಹತ್ತಿರಕ್ಕೆ ಬರುತ್ತಾರಾ? ನೀವು ಹಾಯ್ ಎಂದ್ರೆ ಅವರು ಹಾಯ್ ಅಂತಾರೆ ಎಂದು ತಿರುಗೇಟು ನೀಡಿದರು.

ಬೆಂಗಳೂರಿನ ಸ್ಯಾಂಕಿಕೆರೆಯಲ್ಲಿ ಕಾವೇರಿ ಆರತಿ ಹಿನ್ನೆಲೆಯಲ್ಲಿ ಕಾವೇರಿಗೆ ಪೂಜೆ ಸಲ್ಲಿಸಲು ಭಾಗಮಂಡಲಕ್ಕೆ ಹೆಲಿಕಾಪ್ಟರ್‌ನಲ್ಲಿ ಡಿಕೆಶಿ ಬಂದಿದ್ದಾರೆ. ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಾವೇರಿ ತೀರ್ಥವನ್ನು ಸಂಗ್ರಹ ಮಾಡಿದ್ದಾರೆ. ಕಾವೇರಿ ತೀರ್ಥವನ್ನು ನೇರವಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಸ್ಯಾಂಕಿ ಕೆರೆಯ ಪೂಜೆಯಲ್ಲಿ ಇಂದು ಸಂಜೆ ಡಿಕೆಶಿ ಭಾಗಿಯಾಗಲಿದ್ದಾರೆ.

Share This Article