ರಾಜೀವ್‌ ಗೌಡ ಎಷ್ಟು ದಿನ ತಪ್ಪಿಸಿಕೊಂಡು ಹೋಗ್ತಾರೆ? ಮುಲಾಜಿಲ್ಲದೇ ಬಂಧಿಸುತ್ತೇವೆ – ಪರಮೇಶ್ವರ್‌

1 Min Read

– ರಾಬರಿ ಪ್ರಕರಣದ ತನಿಖೆಗೆ ನಮ್ಮ ಸರ್ಕಾರದ ಸಹಾಯ ಕೋರಿದ್ದಾರೆ

ಬೆಂಗಳೂರು: ರಾಜೀವ್‌ ಗೌಡ (Rajeev Gowda) ಬಂಧನಕ್ಕೆ ಮೊದಲ ದಿನವೇ ಆದೇಶ ನೀಡಿದ್ದೆ. ಬಂಧಿಸುವಷ್ಟರಲ್ಲಿ ತಪ್ಪಿಸಿಕೊಂಡು ಹೋಗಿದ್ದಾರೆ. ಎಷ್ಟು ದಿನ ಅಂತ ತಪ್ಪಿಸಿಕೊಂಡು ಹೋಗ್ತಾರೆ. ಖಂಡಿತವಾಗಿಯೂ ಹಿಡಿದೇ ಹಿಡಿಯುತ್ತೇವೆ ಎಂದು ಗೃಹಸಚಿವ ಜಿ. ಪರಮೇಶ್ವರ್‌ (G Parameshwar) ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜೀವ್‌ಗೌಡನನ್ನ ತಕ್ಷಣ ಬಂಧಿಸುತ್ತೇವೆ. ಯಾವುದೇ ಮುಲಾಜಿಲ್ಲ, ಯಾರ ಒತ್ತಡಕ್ಕೂ ಮಣಿಯೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಕೇಸ್; ಆರೋಪಿ ರಾಜೀವ್ ಗೌಡ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Rajeev Gowda 1

ಇನ್ನೂ ಬೆಳಗಾವಿಯಲ್ಲಿ (Belagavi) 400 ಕೋಟಿ ರೂ. ರಾಬರಿ ಪ್ರಕರಣದ (Biggest Robbery Case) ಕುರಿತು ಮಾತನಾಡಿ, ಮಹಾರಾಷ್ಟ್ರ ಪೊಲೀಸ್ರು ನಮ್ಮ ಪೊಲೀಸರಿಗೆ ಪತ್ರ ಬರೆದಿದ್ದಾರೆ. ತನಿಖೆಯಲ್ಲಿ ನಮ್ಮ ಸರ್ಕಾರದ ಸಹಾಯ ಬೇಕಾಗುತ್ತೆ ಎಂದು ಮಾಹಿತಿ ಕೇಳಿದ್ದಾರೆ. ಅದರ ಬಗ್ಗೆ ಹೆಚ್ಚು ಮಾಹಿತಿ ಕೇಳಿದ್ದೇನೆ. ತನಿಖೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಹೆಚ್ಚಿನ ಮಾಹಿತಿ ಸಿಕ್ಕಿದ ಮೇಲೆ ನಮ್ಮ ರಾಜ್ಯದ ಪೊಲೀಸರು ಏನು ಕ್ರಮ ತಗೋಬೇಕು ಅನ್ನೋದನ್ನ ನೋಡ್ತಾರೆ. ಪರಿಶೀಲಿಸಿ ಮಾಹಿತಿ ಕೊಡುವಂತೆ ಹೇಳಿದ್ದೇನೆ ಎಂದು ವಿವರಿಸಿದ್ದಾರೆ.

ಗಣರಾಜ್ಯೋತ್ಸವದಲ್ಲಿ ರಾಜ್ಯಪಾಲರು ಭಾಷಣ ಮಾಡ್ತಾರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂದು ಸಂಜೆಯೊಳಗೆ ಗೊತ್ತಾಗುತ್ತೆ, ನಮ್ಮ ಭಾಷಣದ ಪ್ರತಿಯನ್ನು ನಾನು ನೋಡಿಲ್ಲ. ಗವರ್ನರ್ ಯಾವ ರೀತಿ ತೀರ್ಮಾನ ಮಾಡ್ತಾರೆ ಗೊತ್ತಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಬೆಳಗಾವಿ | ದೇಶದ ಅತಿದೊಡ್ಡ ರಾಬರಿ ಪ್ರಕರಣ ಬೆಳಕಿಗೆ – ಚಲಾವಣೆ ಇಲ್ಲದ 400 ಕೋಟಿ ದರೋಡೆ

Share This Article