ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಸಿಹಿ ಮಾಡಿ ತಿನ್ನಬೇಕೆನ್ನುವ ಆಸೆ ಇದ್ದರೂ ಕೂಡ ಸಿಹಿ ಎಂದರೆ ಬೇಡ ಎನ್ನಿಸುತ್ತದೆ. ಇನ್ನು ಹೊರಗಡೆ ಬೇಕರಿಯಿಂದ ತರಿಸಿ ತಿನ್ನುವುದಾದರೂ ಬೇಡ ಎನ್ನಿಸುತ್ತದೆ. ಹೀಗಿರುವಾಗ ಮನೆಯಲ್ಲಿ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಈ ವೆನಿಲ್ಲಾ ಕೇಕ್ ತಯಾರಿಸಿ.
ಬೇಕಾಗುವ ಸಾಮಗ್ರಿಗಳು
ಮೈದಾ ಹಿಟ್ಟು
ಸಕ್ಕರೆ ಪುಡಿ
ಮೊಸರು
ಸೂರ್ಯಕಾಂತಿ ಎಣ್ಣೆ
ಹಾಲು
ವೆನಿಲ್ಲಾ ಎಸೆನ್ಸ್
ಬೇಕಿಂಗ್ ಪೌಡರ್
ಬೇಕಿಂಗ್ ಸೋಡಾ
ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಂದು ಕುಕ್ಕರ್ ಅಥವಾ ಅಗಲವಾದ ಪಾತ್ರೆಗೆ ತಳ ಭಾಗದಲ್ಲಿ ಉಪ್ಪು ಅಥವಾ ಮರಳನ್ನು ಹಾಕಿ ಅದರ ಮೇಲೆ ಒಂದು ಸ್ಟ್ಯಾಂಡ್ ಇರಿಸಿ. ಕುಕ್ಕರ್ ನ ಮುಚ್ಚಳದ ರಬ್ಬರ್ ಹಾಗೂ ವಿಸಿಲ್ ಅನ್ನು ತೆಗೆಯಿರಿ. ಕುಕ್ಕರನ್ನು 10 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿಟ್ಟು ಬಿಸಿ ಮಾಡಿ.
ಇನ್ನೊಂದು ಪಾತ್ರೆಗೆ ಮೊಸರು ಹಾಕಿ ಅದಕ್ಕೆ ಸಕ್ಕರೆ ಪುಡಿಯನ್ನು ಬೆರೆಸಿಕೊಳ್ಳಿ. ನಂತರ ಅದಕ್ಕೆ ಎಣ್ಣೆ ಮತ್ತು ವೆನಿಲ್ಲಾ ಸೇರಿಸಿಕೊಳ್ಳಿ.
ಕೇಕ್ ಮಾಡುವ ಪಾತ್ರೆಗೆ ಸ್ವಲ್ಪ ಎಣ್ಣೆ ಸವರಿ ಅದರ ಮೇಲೆ ಸ್ವಲ್ಪ ಮೈದಾಹಿಟ್ಟು ಉದರಿಸಿ. ಇದಕ್ಕೆ ಜರಡಿ ಮೂಲಕ ಮೈದಾ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಮತ್ತು ಒಂದು ಚಿಟಿಕೆ ಉಪ್ಪು ಹಾಕಿ, ಚೆನ್ನಾಗಿ ಕಲಸಿಕೊಳ್ಳಿ. ಈಗ ಹಿಟ್ಟು ಗಂಟಾಗದಂತೆ ಹಾಕುತ್ತಾ ಚೆನ್ನಾಗಿ ನಿಧಾನವಾಗಿ ಕಲಸಿ. ಮಿಶ್ರಣ ಸಂಪೂರ್ಣ ಗಟ್ಟಿ ಎನಿಸಿದರೆ ಅದಕ್ಕೆ ಸ್ವಲ್ಪ ಅಗತ್ಯಕ್ಕೆ ತಕ್ಕಷ್ಟು ಹಾಲು ಸೇರಿಸಿ. ತುಂಬಾ ದ್ರವರೂಪಕ್ಕೆ ಬರದಂತೆ ಹಾಗೂ ತುಂಬಾ ಗಟ್ಟಿಯಾಗದಂತೆ ನೋಡಿಕೊಳ್ಳಿ.
ತಯಾರಿಸಿದ ಮಿಶ್ರಣವನ್ನು ಫ್ರೀ ಬಿಸಿಯಾಗಿರುವ ಕುಕ್ಕರ್ ಒಳಗಿನ ಸ್ಟ್ಯಾಂಡ್ ಮೇಲೆ ಇರಿಸಿ. ಕುಕ್ಕರ್ ಮುಚ್ಚಿದ ಬಳಿಕ 30 ರಿಂದ 40 ನಿಮಿಷಗಳ ಕಾಲ ಬೇಯಿಸಿಕೊಂಡರೆ ಕೇಕ್ ತಯಾರಾಗುತ್ತದೆ




