ಮಲೆನಾಡಲ್ಲಿ ಮುಂದುವರೆದ ಕಳ್ಳತನ – ಮನೆ ಹೆಂಚು ಇಳಿಸಿ ಚಿನ್ನ, ಹಣ ದೋಚಿದ ಕಳ್ಳರು

Public TV
1 Min Read

ಚಿಕ್ಕಮಗಳೂರು: ಹಾಡಹಗಲೇ ಮನೆಯೊಂದರ ಹೆಂಚು ತೆಗೆದು ಕಳ್ಳತನ ಎಸಗಿದ ಪ್ರಕರಣ ಗೋಣಿಬೀಡು (Gonibeedu) ಪೊಲೀಸ್ (Police) ಠಾಣಾ ವ್ಯಾಪ್ತಿಯ ಕಣಚೂರಿನಲ್ಲಿ ನಡೆದಿದೆ.

ಗ್ರಾಮದ ವೇದಾವತಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. 120 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಹಾಗೂ 25 ಸಾವಿರ ರೂ. ಹಣವನ್ನ ಕಳ್ಳರು ದೋಚಿದ್ದಾರೆ. ವೇದಾವತಿಯವರು ಬೆಳಗ್ಗೆ ತಮ್ಮ ಕಾಫಿ ತೋಟಕ್ಕೆ ಹೋಗಿದ್ದರು. ಈ ವೇಳೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಮಧ್ಯಾಹ್ನ ಊಟಕ್ಕೆ ಬಂದಾಗ ಕಳ್ಳತನ ಎಸಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಹೆಚ್‌.ಡಿ.ರೇವಣ್ಣ ಆಪ್ತ, ಉದ್ಯಮಿ ಹಾಡಹಗಲೇ ಬರ್ಬರ ಹತ್ಯೆ

ಮೂರು ದಿನದ ಹಿಂದಷ್ಟೆ ಮೂಡಿಗೆರೆ (Mudigere) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 173ರ ಬಳಿಯ ಮೂರು ಅಂಗಡಿಗಳ ಬೀಗ ಒಡೆದು ಲಕ್ಷಾಂತರ ರೂ. ಹಣ ಹಾಗೂ ವಸ್ತುಗಳನ್ನ ಕಳ್ಳತನ ಮಾಡಲಾಗಿತ್ತು. ಆ ಪ್ರಕರಣ ಮಾಸುವ ಮುನ್ನವೇ ಹಾಡಹಗಲೇ ಮತ್ತೊಂದು ಮನೆ ಕಳ್ಳತನ ನಡೆದಿದೆ. ಮೂಡಿಗೆರೆಯ ಅಕ್ಕಪಕ್ಕದ ಊರುಗಳಲ್ಲಿ ಹೀಗೆ ಮೇಲಿಂದ ಮೇಲೆ ಕಳ್ಳತನ ನಡೆಯುತ್ತಿದೆ. ಹೊರಗಡೆಯವರು ಕಳ್ಳತನ ಮಾಡುತ್ತಿದ್ದಾರೋ ಅಥವಾ ಊರ ಒಳಗಿನವರೇ ಕಳ್ಳತನ ಮಾಡುತ್ತಿದ್ದಾರೋ ಅರ್ಥವಾಗದಂತಾಗಿದೆ ಎಂದು ಗ್ರಾಮಸ್ಥರು ಆತಂಕ ಹೊರ ಹಾಕಿದ್ದಾರೆ.

ವಿಷಯ ತಿಳಿದು ಮೂಡಿಗೆರೆ ಸರ್ಕಲ್ ಇನ್ಸ್‌ಪೆಕ್ಟರ್, ಗೋಣಿಬೀಡು ಪಿಎಸ್‍ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಮತ ಬ್ಯಾಂಕಿಗೆ ಸಿದ್ದರಾಮಯ್ಯ ಸರ್ಕಾರ ಬೊಕ್ಕಸವನ್ನು ಲೂಟಿ ಮಾಡಿ ರೈತರ ನಾಶಕ್ಕೆ ಮುಂದಾಗುತ್ತಿದೆ: ಸಿ.ಟಿ.ರವಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್