ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ: ಪರಮೇಶ್ವರ್‌

Public TV
1 Min Read

ಬೆಂಗಳೂರು: ಈಗಾಗಲೇ ತೈಲ ದರ ಹೆಚ್ಚಳ ಆದೇಶ ಹೊರಡಿಸಿದ್ದೇವೆ. ದರ ಹೆಚ್ಚಾದ ಬಳಿಕ ಜನರೂ ಕೂಡ ಪೆಟ್ರೋಲ್, ಡೀಸೆಲ್ (Petrol, Diesel) ಹಾಕಿಸಿಕೊಳ್ತಿದ್ದಾರೆ. ಈಗ ಯಾವುದೇ ಕಾರಣಕ್ಕೂ ದರ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ (Parameshwara) ಹೇಳಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್ ದರ ಇಳಿಸ್ತೀರಾ ಎಂಬ ಪ್ರಶ್ನೆ ಉತ್ತರಿಸಿದರು. ಈಗಾಗಲೇ ದರ ಹೆಚ್ಚಳ ಆದೇಶ ಹೊರಡಿಸಿದ್ದೇವೆ. ದರ ಹೆಚ್ಚಾದ ಬಳಿಕ ಜನರೂ ಕೂಡ ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ತಿದ್ದಾರೆ. ನೆರೆಯ ರಾಜ್ಯದವರು ಕಡಿಮೆ ದರ ಇದೆ ಅಂತ ಇಲ್ಲಿಗೆ ಬಂದು ಪೆಟ್ರೋಲ್ ಹಾಕಿಸಿಕೊಳ್ತಿದ್ದಾರೆ. ಈಗ ದರ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಪೊಲೀಸರ ವಿಚಾರಣೆಯಲ್ಲಿ ಸತ್ಯ ಬಾಯ್ಬಿಟ್ಟ `ದಾಸ’ – 30 ಲಕ್ಷ ಹಣ ನೀಡಿರೋದಾಗಿ ಸ್ವ-ಇಚ್ಛಾ ಹೇಳಿಕೆ!

ಅಲ್ಲದೇ ನೀರು ಮತ್ತು ಬಸ್‌ ಟಿಕೆಟ್‌ ದರ ಹೆಚ್ಚಳ ಕುರಿತು ಪ್ರತಿಕ್ರಿಯಿಸಿ, ನೀರು ಮತ್ತು ಬಸ್‌ ಟಿಕೆಟ್‌ ದರ ಏರಿಸುವುದು ಆಯಾ ಇಲಾಖೆಗೆ ಸಂಬಂಧಿಸಿದ್ದು. ಅವರೇನಾದ್ರೂ ಇಂಥವರ ವಿರುದ್ಧ ಕೇಸ್‌ ಬುಕ್‌ ಮಾಡಿ ಅಂತ ದೂರು ಕೊಟ್ಟರೇ ನಮ್ಮ ವ್ಯಾಪ್ತಿಗೆ ಬರುತ್ತೆ. ಯಾರೂ ಕೇಸ್‌ ಕೊಟ್ಟರೂ ತಗೋತೀವಿ, ನಂತರ ಕ್ರಮ ವಹಿಸುತ್ತೇವೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಆರ್ಡರ್‌ ಮಾಡಿದ್ದು ಗೇಮಿಂಗ್‌ ವಸ್ತು, ಆದ್ರೆ ಬಂದಿದ್ದು ವಿಷಕಾರಿ ಹಾವು – ಬಾಕ್ಸ್‌ ಓಪನ್‌ ಮಾಡಿದ ಯುವತಿ ಜಸ್ಟ್‌ ಮಿಸ್‌!

ಇದೇ ವೇಳೆ ವಾಲ್ಮೀಕಿ ನಿಗಮದಲ್ಲಿ ಸಿಎಂ ಹಸ್ತಕ್ಷೇಪ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಹಸ್ತಕ್ಷೇಪ ಮಾಡಿದ್ದರೆ, ಬಿಜೆಪಿಯವರು ಸಾಬೀತು ಮಾಡಲಿ. ಇಷ್ಟು ದಿನ ಹಗರಣವನ್ನ ಸಿಬಿಐ ತನಿಖೆಗೆ ಕೊಡಿ ಅಂತ ಬಿಜೆಪಿಯವ್ರು ಕೂಗಾಡ್ತಿದ್ರು. ಈಗ ಸಿಬಿಐ ಕೂಡ ಎಂಟ್ರಿಯಾಗಿದೆ. ಬ್ಯಾಂಕ್ ಫ್ರಾಡ್ ಅನ್ನೋ ಕಾರಣಕ್ಕೆ ಸಿಬಿಐ ಎಂಟ್ರಿಯಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಕಾರು ಹರಿಸಿ ಹತ್ಯೆ – ರಾಜ್ಯಸಭಾ ಸಂಸದರ ಪುತ್ರಿಗೆ ಜಾಮೀನು! 

Share This Article