ಎಎಸ್‌ಪಿ ನಾರಾಯಣ ಬರಮಣ್ಣಿ ಅವ್ರಿಗೆ ಮತ್ತೆ ಪೋಸ್ಟಿಂಗ್ ಮಾಡ್ತೇವೆ: ಪರಮೇಶ್ವರ್

Public TV
1 Min Read

ಬೆಂಗಳೂರು: ಧಾರವಾಡ ಎಎಸ್‌ಪಿ (Dharwad ASP) ಸ್ವಯಂಪ್ರೇರಿತ ನಿವೃತ್ತಿಯನ್ನು ನಾವು ತೆಗೆದುಕೊಳ್ಳುವುದಿಲ್ಲ, ಅವರಿಗೆ ಮತ್ತೆ ಪೋಸ್ಟಿಂಗ್ ಕೊಡುತ್ತೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧಾರವಾಡ ಎಎಸ್‌ಪಿ ನಾರಾಯಣ ಬರಮಣ್ಣಿಗೆ ಮತ್ತೆ ಪೋಸ್ಟಿಂಗ್ ಮಾಡುತ್ತೇವೆ. ನಾರಾಯಣ್ ಅವರ ಸ್ವಯಂಪ್ರೇರಿತ ನಿವೃತ್ತಿ (VRS) ತೆಗೆದುಕೊಳ್ಳುವುದಿಲ್ಲ. ನಾನು ಹಾಗೂ ಹೆಚ್.ಕೆ ಪಾಟೀಲ್ ಅವರ ಜೊತೆ ಮಾತಾಡಿದ್ದೇವೆ. ಅವರು ಹಾಗೇನೂ ಮಾಡಲ್ಲ. ಅವರಿಗೆ ಪೋಸ್ಟಿಂಗ್ ಕೊಡ್ತೇವೆ ಎಂದಿದ್ದಾರೆ. ಇನ್ನು ಸಿಎಂ ಆವತ್ತು ಉದ್ದೇಶಪೂರ್ವಕವಾಗಿ ಹಾಗೆ ಮಾಡಲಿಲ್ಲ. ಆ ಸಂದರ್ಭಕ್ಕೆ ಸಿಎಂ ಹಾಗೆ ನಡೆದುಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಸಿಎಂ ಕಾರ್ಯಕ್ರಮದಲ್ಲಿ ಅಪಮಾನ – ಸ್ವಯಂ ನಿವೃತ್ತಿಗೆ ಮುಂದಾದ ಎಎಸ್‌ಪಿ ಬರಮಣ್ಣಿ

ಇದೇ ವೇಳೆ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅಮಾನತು ಆದೇಶವನ್ನು ಕೇಂದ್ರೀಯ ಆಡಳಿತ ನ್ಯಾಯಮಂಡಳಿ ರದ್ದುಪಡಿಸಿರುವ ಬಗ್ಗೆ ಮಾತನಾಡಿ, ನಾವು ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಸರ್ಕಾರದ ಅಮಾನತು ಆದೇಶ ಸರಿಯಿದೆ ಎನ್ನುವುದು ನಮ್ಮ ವಾದ ಎಂದು ಹೇಳಿರಬಹುದು. ಇದನ್ನೂ ಓದಿ: ನೆಹರೂ ಕೈಯಿಂದ್ಲೇ RSS ಬ್ಯಾನ್‌ ಮಾಡೋಕೆ ಆಗ್ಲಿಲ್ಲ, ಪ್ರಿಯಾಂಕ್‌ ಖರ್ಗೆಯಿಂದ ಸಾಧ್ಯನಾ?: ಯತ್ನಾಳ್‌

ವಾಲ್ಮೀಕಿ ನಿಗಮದ ಅಕ್ರಮದ ತನಿಖೆ ಸಿಬಿಐ ನಡೆಸಬೇಕೆಂಬ ಹೈಕೋರ್ಟ್ ಆದೇಶದ ಬಗ್ಗೆ ಮಾತನಾಡಿದ ಅವರು, ಹೈಕೋರ್ಟ್ ಮೆರಿಟ್ ಆಫ್ ದಿ ಕೇಸ್ ನೋಡಿ ಆದೇಶ ಕೊಟ್ಟಿರಬಹುದು. ಯಾವುದೇ ತನಿಖೆ ಆಗಲಿ. ಅದಕ್ಕೆ ನಮ್ಮ ತಕರಾರಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ:

Share This Article