ಬೆಂಗಳೂರು: ಯತೀಂದ್ರ ಹೇಳಿಕೆ ನಾಯಕತ್ವ ಕುರಿತಲ್ಲ, ಸತೀಶ್ ಜಾರಕಿಹೊಳಿಗಿರುವ (Satish Jarkiholi) ಸೈದ್ಧಾಂತಿಕ ಬದ್ಧತೆ ಹಿನ್ನೆಲೆಯಲ್ಲಿ ಮಾತಾಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಂದಿನ ನಾಯಕತ್ವ ದೃಷ್ಟಿಯಲ್ಲಿಟ್ಟುಕೊಂಡು ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಯತೀಂದ್ರ ಹೇಳಿಲ್ಲ. ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಅಂತ ಯತ್ರೀಂದ್ರ ಹೇಳಿಲ್ಲ. ಸೈದ್ಧಾಂತಿಕ ಹಿನ್ನೆಲೆಯಲ್ಲಿ ಹೇಳಿದ್ದಾರೆ. ಸೈದ್ಧಾಂತಿಕವಾಗಿ ಸಿದ್ದರಾಮಯ್ಯ ದಾರಿಯಲ್ಲೇ ಸತೀಶ್ ಹೋಗ್ತಾರೆ ಅಂತ ಹೇಳಿದ್ದಾರೆ. ಅಹಿಂದ ಪ್ರಾರಂಭವಾದಾಗ ಸತೀಶ್ ಜಾರಕಿಹೊಳಿ ಬಹಳ ಮುಖ್ಯ ಪಾತ್ರ ವಹಿಸಿದ್ದರು. ಆ ಹಿನ್ನೆಲೆಯಲ್ಲಿ ಹೇಳಿದ್ದಾರೆ ಅದರಲ್ಲಿ ತಪ್ಪೇನಿದೆ? ಲೀಡರ್‌ಶಿಪ್ ದೃಷ್ಟಿಯಿಂದ ಮಾತನಾಡಿಲ್ಲ. ಅವರು ಪಕ್ಷದ ಬದ್ಧತೆ, ಸಮಾಜದ ಬದ್ಧತೆ ಬಗ್ಗೆ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಸದ್ಯಕ್ಕೆ ಇಲ್ಲ: ಹೆಚ್‌ಡಿಕೆ
ಇನ್ನು ಸಿಎಂ ಬದಲಾವಣೆ ಮಾಡಿದರೆ ನೀವೂ ರೇಸ್‌ನಲ್ಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮಲ್ಲಿ ತೀರ್ಮಾನ ಮಾಡುವುದು ಹೈಕಮಾಂಡ್. ಆ ಸಂದರ್ಭ ಬಂದಾಗ ಸಿಎಲ್‌ಪಿ ಕರೀತಾರೆ. ಎಂಎಲ್‌ಎಗಳ ಅಭಿಪ್ರಾಯ ತೆಗೆದುಕೊಳ್ಳುತ್ತಾರೆ. ಹೈಕಮಾಂಡ್‌ನಿಂದ ಬರುವ ವೀಕ್ಷಕರು ಹೈಕಮಾಂಡ್‌ಗೆ ಮಾಹಿತಿ ಕೊಡ್ತಾರೆ. ತೆಗೆದುಕೊಂಡ ತೀರ್ಮಾನದ ಬಗ್ಗೆ ಆ ಸಂದರ್ಭದಲ್ಲಿ ಅನೌನ್ಸ್ ಮಾಡ್ತಾರೆ. ಇದು ನಮ್ಮಲ್ಲಿರುವ ಪದ್ಧತಿ ಅದನ್ನ ಶಾರ್ಟ್ಕಟ್ ಮಾಡೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
