ಮೂವರನ್ನು ಅರೆಸ್ಟ್ ಮಾಡಿದ್ದು, ಶಿವಮೊಗ್ಗದಿಂದ ಸ್ಪ್ರೆಡ್ ಆಗಲು ಬಿಡಲ್ಲ: ಆರಗ

Public TV
1 Min Read

ಬೆಂಗಳೂರು: ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಪ್ರಕರಣವನ್ನು ಶಿವಮೊಗ್ಗದಿಂದ ಸ್ಪ್ರೆಡ್ ಆಗೋಕೆ ಬಿಡಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಹರ್ಷ ಕೊಲೆ ಪ್ರಕರಣ ನಡೆದಿದೆ. ಹರ್ಷನ ಅಂತಿಮ ವಿದಿವಿಧಾನ ನೆರವೇರುತ್ತಿದೆ. ಮೆರವಣಿಗೆ ವೇಳೆ ಸ್ವಲ್ಪ ಗಲಾಟೆ ನಡೆದಿದೆ. ಮುರುಗನ್ ಹಿರಿಯ ಅಧಿಕಾರಿ ಸ್ಥಳದಲ್ಲಿ ಇದ್ದಾರೆ. ಅರೆಸ್ಟ್ ಮಾಡಿರೋದನ್ನು ಇನ್ನು ಮಾಹಿತಿ ಸದ್ಯ ಕಸ್ಟಡಿ ತೆಗೆದುಕೊಂಡಿದ್ದಾರೆ ಎಂದರು.

ತಂದೆ-ತಾಯಿಗೆ ಸಾಂತ್ವನ ಹೇಳಿದ್ದೇನೆ. ನ್ಯಾಯ ದೊರಕಿಸಿ ಅಂತಾ ಹೇಳಿದ್ದಾರೆ. ಘಟನೆ ಸಂಬಂಧ ಅರೆಸ್ಟ್ ಆದವರು ಮೂರು ಜನ, ಎಲ್ಲಿಯವರು ಅಂತಾ ಹೇಳಲ್ಲ. ಐದು ಜನ ಕೊಲೆ ಮಾಡಿದ್ದಾರೆ. ಇದರ ಹಿಂದೆ ಏನಾಗಿದೆ ಅಂತಾ ನೋಡಬೇಕು. ಶಿವಮೊಗ್ಗದಿಂದ ಸ್ಪ್ರೆಡ್ ಆಗೋಕೆ ಬಿಡಲ್ಲ ಎಂದರು.  ಇದನ್ನೂ ಓದಿ: ಮುಸ್ಲಿಂ ಗೂಂಡಾಗಳಿಂದ ಕೊಲೆ – ಈಶ್ವರಪ್ಪ ಹೇಳಿಕೆಗೆ ಸತೀಶ್ ಜಾರಕಿಹೊಳಿ ಕಿಡಿ

ಪೊಲೀಸರ ಕೈಯಲ್ಲಿ ಲಾಠಿ ಇತ್ತು. ಇನ್ನಷ್ಟು ಅಟ್ಯಾಕ್ ಮಾಡಿದರೆ ಹಾನಿ ಆಗುತ್ತೆ. ಕೊಲೆ ಮಾಡಿದವರ ಎಲ್ಲರ ಬಗ್ಗೆ ಮಾಹಿತಿ ಇದೆ. ಎಲ್ಲಾ ಜಿಲ್ಲೆಗಳಿಗೆ ಅಲರ್ಟ್ ಇರುವಂತೆ ಸೂಚನೆ ಕೊಟ್ಟಿದ್ದೇವೆ. ಎಂದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ- ಮೂವರು ಆರೋಪಿಗಳ ಬಂಧನ

ಸಂಘಟನೆ ಬ್ಯಾನ್ ವಿಚಾರ ಅನೇಕ ಕ್ರೈಟಿರಿಯಾ ಇದೆ. ಸಮಯ ಬಂದಾಗ ಬ್ಯಾನ್ ಮಾಡುವ ಬಗ್ಗೆ ನೋಡೋಣ, ಮಾಡಿ ತೋರಿಸ್ತೇವೆ. ಈ ಪ್ರಕರಣ ಸಂಬಂಧ ಎನ್‍ಐಎ ತನಿಖೆಗೆ ಶೋಭಾ ಕರಂದ್ಲಾಜೆ ಹಾಗೂ ಮೈಸೂರು ಸಂಸದರು ಹೇಳಿದ್ದಾರೆ ನೋಡೋಣ ಎಂದು ಹೇಳಿದ್ದಾರೆ. ಇದೇ ವೇಳೆ ಸಚಿವ ಈಶ್ವರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಈ ಸಂದರ್ಭದಲ್ಲಿ ಭಾವುಕರಾಗಿ ಮಾತಾನಾಡಿದ್ದಾರೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *