ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ – ಕೊಟ್ಟಿರಬಹುದೇನೋ ಎಂದ ಆರಗ ಜ್ಞಾನೇಂದ್ರ

Public TV
1 Min Read

ಶಿವಮೊಗ್ಗ: ನನಗೆ ಗೊತ್ತಿರುವ ಹಾಗೆ ಸ್ವೀಟ್ಸ್, ಈ ಗಿಫ್ಟ್‌ಗಳನ್ನ (Diwali Gift) ಎಲ್ಲಾ ಸರ್ಕಾರದಲ್ಲೂ (Government) ಯಾವುದಾರೂ ಒಂದು ಸಂದರ್ಭದಲ್ಲಿ ಕೊಡ್ತಾರೆ. ಹಾಗೆ ಕೊಟ್ಟಿರಬಹುದೇನೋ ನನಗೆ ಏನೂ ಅರಿವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

ಸಿಎಂ ಕಚೇರಿಯಿಂದ ಪತ್ರಕರ್ತರಿಗೆ (Journalists) ಗಿಫ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ಗಿಫ್ಟ್ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು (Chief Minister) ಈಗಾಗಲೇ ಎಲ್ಲಾ ಹೇಳಿದ್ದಾರೆ, ನಾನೇನು ಪ್ರತಿಕ್ರಿಯೆ ನೀಡಲ್ಲ. ಅದರ ಬಗ್ಗೆ ನನಗೆ ಮಾಹಿತಿಯೂ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ನಾನು ಯಾರಿಗೂ ಹಣ ನೀಡುವಂತೆ ಸೂಚನೆ ಕೊಟ್ಟಿಲ್ಲ : ಬೊಮ್ಮಾಯಿ

ನನಗೆ ಗೊತ್ತಿರುವ ಹಾಗೆ ಸ್ವೀಟ್ಸ್ (Sweets), ಅದು-ಇದು ಗಿಫ್ಟ್‌ಗಳನ್ನ ಎಲ್ಲಾ ಸರ್ಕಾರಗಳು ನೀಡಿವೆ. ಯಾವುದಾರೂ ಸಂದರ್ಭದಲ್ಲಿ ಕೊಡ್ತಾರೆ. ಹಾಗೇ ಕೊಟ್ಟಿರಬಹುದೇನೋ ನನಗೆ ಏನೂ ಅರಿವಿಲ್ಲ. ಹಣ ಕೊಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಇನ್ಸ್ಪೆಕ್ಟರ್ ನಂದೀಶ್ ಹೃದಯಾಘಾತ (Heart Attack) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಿಪಿಐ (CPI) ಅನಾರೋಗ್ಯದಿಂದ ತೀರಿ ಹೋಗಿದ್ದಾರೆ. ನನಗೆ ಬಂದಿರೋ ಮಾಹಿತಿ ಪ್ರಕಾರ, ಅವರ ಆರೋಗ್ಯ ಸರಿ ಇರಲಿಲ್ಲ ಎಂದು ಜಾರಿಕೊಂಡಿದ್ದಾರೆ.

ಇನ್ನೂ `ಪೊಲೀಸ್ (Polic) ಹುದ್ದೆಗೆ 70-80 ಲಕ್ಷಕೊಟ್ಟು ಬರಬೇಕಿದೆ’ ಎನ್ನುವ ಎಂಟಿಬಿ ನಾಗರಾಜ್ ಆಡಿಯೋ ಹೇಳಿಕೆ ಬಗ್ಗೆ ಅವರೇ ಹೇಳಬೇಕು. ಲಂಚ ಕೊಟ್ಟಿರೋ ಬಗ್ಗೆ ನಿರ್ದಿಷ್ಟವಾಗಿ ಯಾರಾದರೂ ದೂರು ಕೊಟ್ಟರೆ ಪೊಲೀಸರಿಂದ ತನಿಖೆ ಮಾಡಿಸಬಹುದು ಎಂದು ಹಾರಿಕೆ ಉತ್ತರ ನೀಡಿದರು. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್ ನಾಟಕವಾಡಿದ 12ರ ಬಾಲಕ

ಶಿವಮೊಗ್ಗದಲ್ಲಿನ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಇಲ್ಲಿನ ಕೆಲವು ಶಕ್ತಿಗಳಿಗೆ ಕಾನೂನು ಅಂದ್ರೆ ಭಯ ಇಲ್ಲದಂತಾಗಿದೆ. ಅವರನ್ನು ಕಾನೂನು ವ್ಯಾಪ್ತಿಗೆ ತಂದು ಧಮನ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಹಿಂದೆ ಶಿವಮೊಗ್ಗ ರೌಡಿಗಳ ಟ್ರೈನಿಂಗ್‌ ಸೆಂಟರ್ ಆಗಿತ್ತು. ಈಗ ಕಡಿಮೆ ಆಗಿದೆ ಎಂದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *