ಹಾಲಿವುಡ್ #MeToo ಅಭಿಯಾನಕ್ಕೆ ಹಿನ್ನಡೆ: ಹಾರ್ವಿಗೆ ವಿಧಿಸಿದ್ದ ಶಿಕ್ಷೆ ರದ್ದು

Public TV
1 Min Read

ಗತ್ತಿನಾದ್ಯಂತ ಮಿಟೂ (MeToo) ಅಭಿಯಾನಕ್ಕೆ ನಾಂದಿ ಹಾಡಿದ್ದ ಹಾಲಿವುಡ್ ಸಿನಿ ರಂಗದ ಖ್ಯಾತ ನಿರ್ಮಾಪಕ ಹಾರ್ವಿ ವೈನ್ ಸ್ಟೀನ್ (Harvey Weinstein) ಮೇಲಿನ ಅತ್ಯಾಚಾರ ಆರೋಪಕ್ಕೆ ತಾತ್ಕಾಲಿನ ಜಯ ಸಿಕ್ಕಿದೆ. ಹಾರ್ವಿ ವೈನ್ ಸ್ಟೀನ್ ಗೆ ವಿಧಿಸಿದ್ದ ಶಿಕ್ಷೆಯನ್ನು ನ್ಯೂಯಾರ್ಕ್ ನ ಮೇಲ್ಮನವಿ ನ್ಯಾಯಾಲಯವು ರದ್ದು ಮಾಡಿದೆ.

ಸಾವಿರಾರು ಕೋಟಿ ರೂಪಾಯಿಯನ್ನು ಸಿನಿಮಾಗಳಿಗೆ ಹೂಡಿಕೆ ಮಾಡಿ, ಹಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದ ಹಾರ್ವಿ ಮೇಲೆ 80ಕ್ಕೂ ಅಧಿಕ ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಕೆಲವರು ಅತ್ಯಾಚಾರದಂತಹ ಗಂಭೀರ ಆರೋಪವನ್ನೂ ಮಾಡಿದ್ದರು. ಇಲ್ಲಿಂದ ಮಿಟೂ ಅಭಿಯಾನ ಶುರುವಾಗಿತ್ತು. ಅದು ಜಗತ್ತಿನಾದ್ಯಂತ ಹೋರಾಟಕ್ಕೂ ಕಾರಣವಾಗಿತ್ತು.

2018ರಲ್ಲಿ ಅತ್ಯಾಚಾರದ ಆರೋಪದ ಮೇಲೆ ಹಾರ್ವಿಯನ್ನು ಬಂಧಿಸಲಾಗಿತ್ತು. ಆನಂತರ ಅವರಿಗೆ 23 ವರ್ಷಗಳ ಜೈಲು ಶಿಕ್ಷೆಯೂ ಪ್ರಕಟವಾಗಿತ್ತು. ಈ ತೀರ್ಪಿನ ವಿರುದ್ಧ ಹಾರ್ವಿ ವಕೀಲರು ಮೇಲ್ಮನೆ ಸಲ್ಲಿಸಿದ್ದರು. ಸಂಬಂಧವೇ ಇಲ್ಲದ ಸಾಕ್ಷಿಗಳನ್ನು ಪರಿಗಣಿಸಲಾಗಿದೆ ಮತ್ತು ನ್ಯಾಯಾಧೀಶರು ಹಾರ್ವಿ ಬಗ್ಗೆ ಪೂರ್ವಾಗ್ರಹ ಹೊಂದಿದ್ದರು ಎಂದು ವಾದ ಮಾಡಿದ್ದರು.

 

ಮೇಲ್ಮನೆಯನ್ನು ಪುರಸ್ಕರಿಸಿದ ನ್ಯೂಯಾರ್ಕ್ ನ್ಯಾಯಾಲಯವು ಶಿಕ್ಷೆ ರದ್ದು ಮಾಡಿ, ಈ ಆರೋಪದ ಕುರಿತಂತೆ ಹೊಸದಾಗಿ ವಿಚಾರಣೆ ಮಾಡಲು ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಹಾರ್ವಿಗೆ ರಿಲೀಫ್ ಸಿಕ್ಕಿದೆ. ಆದರೆ, ಮತ್ತೊಂದು ಲೈಂಗಿಕ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು, ಅವರು ಜೈಲಿನಲ್ಲಿ ಇರಬೇಕಾಗಿದೆ. ಯಾಕೆಂದರೆ, ಈ ಪ್ರಕರಣಕ್ಕೆ ಅವರಿಗೆ 16 ವರ್ಷ ಜೈಲು ಶಿಕ್ಷೆಯಾಗಿದೆ.

Share This Article