ದುಬಾರಿ ನೆಕ್ಲೇಸ್ ಧರಿಸಿ ಮಿಂಚಿದ ಪ್ರಿಯಾಂಕಾ ಚೋಪ್ರಾ

Public TV
1 Min Read

ಹಾಲಿವುಡ್ (Hollywood) ಬೆಡಗಿ ಪ್ರಿಯಾಂಕಾ ಚೋಪ್ರಾ (Priyanka Chopra) ಇದೀಗ ಮುಂಬೈನಲ್ಲಿ ಅಂಬಾನಿ ಕುಟುಂಬದ ಪಾರ್ಟಿಯೊಂದರಲ್ಲಿ ಮಿಂಚಿದ್ದಾರೆ. ದುಬಾರಿ ನೆಕ್ಲೇಸ್ ಧರಿಸುವ ಮೂಲಕ ನಟಿ ಸದ್ದು ಮಾಡುತ್ತಿದ್ದಾರೆ. ಆ ನೆಕ್ಲೇಸ್ ಬೆಲೆ ಕೇಳಿದ್ರೆ, ನಿಜಕ್ಕೂ ನೀವು ಶಾಕ್ ಆಗುತ್ತೀರಾ.

 

View this post on Instagram

 

A post shared by Patty Cardona (@jerryxmimi)

ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದ ನಟಿ ಪ್ರಿಯಾಂಕಾ ಇದೀಗ ಹಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ. ಸದ್ಯ ಕೆಲಸಕ್ಕೆ ಬ್ರೇಕ್ ನೀಡಿ ಮುಂಬೈ ನಗರಕ್ಕೆ ನಟಿ ಲಗ್ಗೆ ಇಟ್ಟಿದ್ದಾರೆ. ಈ ಬಾರಿ ದೇಸಿ ಗರ್ಲ್ ಪ್ರಿಯಾಂಕಾ ಆಭರಣದ ವಿಚಾರವಾಗಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ ನಡೆಯಿತು ವೆಂಕಟೇಶ್ ದಗ್ಗುಬಾಟಿ ಪುತ್ರಿಯ ಮದುವೆ

ಅಂಬಾನಿ ಕುಟುಂಬ ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಪ್ರಿಯಾಂಕಾ, ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ಕಂಗೊಳಿಸಿದ್ದರು. ಅದಕ್ಕೆ ಆಕರ್ಷಕವಾದ 8 ಕೋಟಿ ರೂ. ಮೌಲ್ಯದ ಡೈಮೆಂಡ್‌ ನೆಕ್ಲೇಸ್ ಧರಿಸಿ ಬಂದಿದ್ದರು. ಈ ನೆಕ್ಲೇಸ್‌ ಎಲ್ಲರ ಗಮನ ಸೆಳೆದಿದೆ. ಅದರ ಬೆಲೆ ಕೇಳಿ ಮಂದಿ ಬೆಚ್ಚಿಬಿದ್ದಿದ್ದಾರೆ.

 

View this post on Instagram

 

A post shared by Patty Cardona (@jerryxmimi)

ಬಳಿಕ ಆಭರಣ ಲಾಂಚ್‌ ಕಾರ್ಯಕ್ರಮವೊಂದರಲ್ಲಿ ನಟಿ ಬಿಳಿ ಬಣ್ಣದ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದರು. ಸರ್ಪದ ನೆಕ್ಲೇಸ್ ಧರಿಸಿ ನಟಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ, 59 ಲಕ್ಷ ರೂ. ಮೌಲ್ಯದ ನೆಕ್ಲೇಸ್ ಧರಿಸಿ ಹೈಲೆಟ್‌ ಆಗಿದ್ದಾರೆ.

ಇನ್ನೂ ಪ್ರಿಯಾಂಕಾ ಚೋಪ್ರಾ ಕೈಯಲ್ಲಿ ಕೆಲ ಹಾಲಿವುಡ್ ಸಿನಿಮಾಗಳು, ವೆಬ್ ಸಿರೀಸ್ ಪ್ರಾಜೆಕ್ಟ್‌ಗಳಿವೆ ಮತ್ತೆ ಅದ್ಯಾವಾಗ ಬಾಲಿವುಡ್ ಸಿನಿಮಾ ಬರುತ್ತಾರೆ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

Share This Article