51ನೇ ವಯಸ್ಸಿಗೆ ಗಂಡು ಮಗುವಿಗೆ ಜನ್ಮ ನೀಡಿದ ಹಾಲಿವುಡ್‌ ನಟಿ

Public TV
1 Min Read

ಹಾಲಿವುಡ್‌ನ (Hollywood) ನಟಿ ಕ್ಯಾಮೆರಾನ್ ಡಿಯಾಜ್ (Cameron Diaz) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. 51ನೇ ವಯಸ್ಸಿನ ನಟಿಯು ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ಮಾಹಿತಿ ನೀಡಿದ್ದಾರೆ. ಕ್ಯಾಮೆರಾನ್ ಡಿಯಾಜ್ ಅವರ ಪತಿ ಬೆಂಜಿ ಮ್ಯಾಡೆನ್ ಕೂಡ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಕ್ಯಾಮೆರಾನ್ ಡಿಯಾಜ್ ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ಪತಿ ಬೆಂಜಿ ಮ್ಯಾಡೆನ್ ಅವರು ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ತಿಳಿಸಿದ್ದಾರೆ. ನಮ್ಮ ಕುಟುಂಬಕ್ಕೆ ಮಗನ ಆಗಮನವಾಗಿದೆ. ಅವನಿಗೆ ಕಾರ್ಡಿನಲ್ ಮ್ಯಾಡೆನ್ ಎಂಬುದಾಗಿ ಹೆಸರಿಡಲು ತೀರ್ಮಾನಿಸಿದ್ದೇವೆ. ಅವನು ನೋಡಲು ತುಂಬ ಮುದ್ದಾಗಿದ್ದಾನೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಾವು ಆತನ ಫೋಟೋ ಪೋಸ್ಟ್ ಮಾಡಿಲ್ಲ. ಆದರೂ, ಆತ ತುಂಬ ಕ್ಯೂಟ್ ಆಗಿದ್ದಾನೆ ಎಂದು ಹೇಳಲು ಬಯಸುತ್ತೇವೆ. ನಿಮ್ಮ ಆಶೀರ್ವಾದ, ಹಾರೈಕೆ ಇರಲಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕ್ಯಾಮೆರಾನ್ ಡಿಯಾಜ್ ಹಾಗೂ ಬೆಂಜಿ ಮ್ಯಾಡೆನ್ ಅವರು 2015ರಲ್ಲಿ ಮದುವೆಯಾಗಿದ್ದರು. 2019ರಲ್ಲಿ ನಟಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಎರಡನೇ ಮಗುವಿಗೆ ಕ್ಯಾಮೆರಾನ್ ಡಿಯಾಜ್ ಅವರು ತಾಯಿಯಾಗಿದ್ದಾರೆ.

Share This Article