ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು

By
1 Min Read

ಹಾಸನ: ಇಬ್ಬರು ವ್ಯಕ್ತಿಗಳ ನಡುವೆ ಮದ್ಯ ಕುಡಿಯುವ ಸ್ಪರ್ಧೆ ನಡೆದು ಮಿತಿ ಮೀರಿ ಕುಡಿದ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಹೊಳೆನರಸೀಪುರದ (Holenarasipur) ಸಿಗರನಹಳ್ಳಿಯಲ್ಲಿ ನಡೆದಿದೆ.

ಒಂದೇ ಗ್ರಾಮದ ಇಬ್ಬರು ವ್ಯಕ್ತಿಗಳ ನಡುವೆ ಅರ್ಧ ಗಂಟೆಯಲ್ಲಿ ಒಂದು ಲೀಟರ್ ಮದ್ಯ ಕುಡಿಯುವ ಸ್ಪರ್ಧೆ ಏರ್ಪಟ್ಟಿದೆ. ಸ್ಪರ್ಧೆಯಲ್ಲಿ ಹೆಚ್ಚು ಮದ್ಯ ಸೇವನೆ ಮಾಡಿದ ತಿಮ್ಮೇಗೌಡ (60) ಎಂಬಾತ ಸಾವಿಗೀಡಾಗಿದ್ದಾನೆ. ಮೃತ ತಿಮ್ಮೇಗೌಡ ಹಾಗೂ ದೇವರಾಜ ಎಂಬಾತನ ನಡುವೆ ಈ ಸ್ಪರ್ಧೆ ಏರ್ಪಟ್ಟಿತ್ತು. ಈ ಇಬ್ಬರಿಗೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕೃಷ್ಣೇಗೌಡ ಮದ್ಯದ ಪ್ಯಾಕೆಟ್‍ಗಳನ್ನು ನೀಡಿದ್ದ ಎನ್ನಲಾಗಿದೆ. ಇದನ್ನೂ ಓದಿ: ಅಭಿನವ ಹಾಲಶ್ರೀಗಿಲ್ಲ ಜಾಮೀನು – 10 ದಿನ ಪೊಲೀಸ್‌ ಕಸ್ಟಡಿಗೆ

ತಿಮ್ಮೇಗೌಡನಿಗೆ ಮದ್ಯ ವಿಪರೀತವಾಗುತ್ತಿದ್ದಂತೆ ಬಾಯಲ್ಲಿ ರಕ್ತ ಬರಲಾರಂಭಿಸಿದೆ. ಬಳಿಕ ದೇವರಾಜು ಮತ್ತು ಕೃಷ್ಣೇಗೌಡ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಅಸ್ವಸ್ಥವಾಗಿ ಬಿದ್ದಿದ್ದ ಆತನನ್ನು ಗ್ರಾಮಸ್ಥರು ಎತ್ತಿಕೊಂಡು ಬಂದು ಮನೆಯಲ್ಲಿ ಮಲಗಿಸಿದ್ದರು. ಈ ವೇಳೆ ಆತ ಸಾವಿಗೀಡಾಗಿದ್ದಾನೆ.

ಈ ಸಂಬಂಧ ತಿಮ್ಮೇಗೌಡನ ಪುತ್ರಿ, ದೇವರಾಜು ಹಾಗೂ ಕೃಷ್ಣೇಗೌಡನ ವಿರುದ್ಧ ದೂರು ದಾಖಲಿಸಿದ್ದಾಳೆ. ಅಲ್ಲದೇ ಅಕ್ರಮ ಮದ್ಯ ಮಾರಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ವಾಟ್ಸಪ್ ಗ್ರೂಪ್‍ನಲ್ಲೇ ದರೋಡೆಗೆ ಪ್ಲಾನ್- ಡಿಫರೆಂಟ್ ಗ್ಯಾಂಗ್ ಅರೆಸ್ಟ್

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್