ಮಿಡ್ಲ್ ಫಿಂಗರ್ ತೋರಿಸಿ ಅಸಭ್ಯ ವರ್ತಿಸಿದ್ದಾರೆ, ರೇವಣ್ಣನನ್ನು ಬಂಧಿಸಿ – ಕೈ ಕಾರ್ಯಕರ್ತೆ ನಂದಿನಿ

Public TV
1 Min Read

ಬೆಂಗಳೂರು: ಮಿಡ್ಲ್ ಫಿಂಗರ್ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ, ರೇವಣ್ಣನನ್ನು ಬಂಧಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತೆ ನಂದಿನಿ ನಾಗರಾಜ್ (Nandini Nagaraj) ಆಗ್ರಹಿಸಿದ್ದಾರೆ.

ʻಪಬ್ಲಿಕ್ ಟಿವಿ’ ಜೊತೆ ರೇವಣ್ಣ ತಮ್ಮ ಮೇಲೆ ಹಲ್ಲೆ ನಡೆಸಿದ್ದಕ್ಕೆ ದೂರು ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಸೋಮವಾರ ಮಧ್ಯಾಹ್ನ ಕುಮಾರಕೃಪಾದಲ್ಲಿ ಹಲ್ಲೆ ನಡೆಸಿದ್ದಾರೆ. ಮಧ್ಯಾಹ್ನ 3:30ರ ಸುಮಾರಿಗೆ ರೂಂ.ನಂಬರ್ 2ರಲ್ಲಿ ರೇವಣ್ಣ ಊಟ ಮಾಡುತ್ತಿದ್ದರು. ಈ ವೇಳೆ ಅವರನ್ನು ಭೇಟಿಯಾಗಿ ಮಾತನಾಡಿಸಲು ತೆರಳಿದ್ದೆ. ಆಗ ನನ್ನ ಜೊತೆ ಅಸಭ್ಯವಾಗಿ ವರ್ತನೆ ಮಾಡಿ, ಮಿಡ್ಲ್ ಫಿಂಗರ್ ತೋರಿಸಿದ್ದಾರೆ. ಮಹಿಳಾ ಕಾರ್ಯಕರ್ತರ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಾರೆ. ಕೈ ಮುಟ್ಟೋದು, ಟಚ್ ಮಾಡ್ತಾರೆ. ಹೀಗೆ ಮಾಡಿದಾಗ ಇವರುಂ ಈ ರೀತಿನಾ ಅನಿಸಿತು ಎಂದು ಬೇಸರ ಹೊರಹಾಕಿದರು.ಇದನ್ನೂ ಓದಿ: ವರದಕ್ಷಿಣೆಗಾಗಿ ಪತ್ನಿಯನ್ನೇ ಕೊಂದ ಪಾಪಿ ಗಂಡ

ಇನ್ನೂ ಕರೆ ಮಾಡಿ, ಏನೆನೋ ಮಾತನಾಡುತ್ತಾರೆ. ಸ್ಲಂ ಜಾತಿ ಎಂದು ಜಾತಿ ನಿಂದನೆ ಮಾಡಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಗಿರೋದಕ್ಕೆ ರೇವಣ್ಣ ಅವರು ಅನ್‌ಫಿಟ್. ಜಾತಿನಿಂದನೆ ಮಾಡಿದ್ದಕ್ಕೆ ಮುನಿರತ್ನ ಅವರನ್ನು ಅರೆಸ್ಟ್ ಮಾಡಿದ್ರಿ. ಈಗ ರೇವಣ್ಣನನ್ನು ಬಂಧಿಸಿ. ಆದರೆ ಇದಕ್ಕೆ ಪೊಲೀಸರು ಸಹಕರಿಸುತ್ತಿಲ್ಲ. ನಾನು ಹೈಕಮಾಂಡ್‌ಗೆ ದೂರು ಕೊಟ್ಟಿದ್ದೇನೆ. ಇನ್ನೂ ಮಹಿಳಾ ಆಯೋಗಕ್ಕೂ ದೂರು ಕೊಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಸಭ್ಯವಾಗಿ ವರ್ತನೆ ಮಾಡಿದಾಗ ಉಗ್ರಪ್ಪ ಅವರು ಕೂಡ ಜೊತೆಯಲ್ಲಿ ಇದ್ದರು. ಜೊತೆಗೆ ಅಲ್ಲಿದ್ದ ಇನ್ನೊಬ್ಬರು ನನಗೆ ಬೆರಳು ತೋರಿಸಿದ್ದಾರೆ ಆದರೆ ಅವರು ಹೆಸರು ಗೊತ್ತಾಗುತ್ತಿಲ್ಲ. ರೇವಣ್ಣನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: Gold Smuggling Case | ಸ್ವಂತ ಚಿನ್ನಾಭರಣ ಮಳಿಗೆ ಆರಂಭಿಸಲು ಪ್ಲ್ಯಾನ್‌ ಮಾಡಿದ್ದ ರನ್ಯಾ

Share This Article