ಸಂತರನ್ನು ಸಮಭಾವದಿಂದ ನೋಡುವವರು ಟೆರರಿಸ್ಟಾ?: ಹೆಚ್‌ಕೆ ಪಾಟೀಲ್

Public TV
1 Min Read

ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿ ಕಾರ್ಯಕ್ರಮಕ್ಕೆ ಐಸಿಸ್ ನಂಟು ಇದೆ ಎಂದು ಶಾಸಕ ಯತ್ನಾಳ್ (Basangouda Patil Yatnal) ಆರೋಪಕ್ಕೆ ಸಚಿವ ಹೆಚ್‌ಕೆ ಪಾಟೀಲ್ (HK Patil) ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿಯ (Belagavi) ಕೊಂಡಸಕೊಪ್ಪದಲ್ಲಿ ಸಚಿವ ಹೆಚ್‌ಕೆ ಪಾಟೀಲ್ ಪ್ರತಿಕ್ರಿಯೆ ನೀಡಿ, ಸಂತ ಸೂಫಿಗಳ ಪ್ರಭಾವಕ್ಕೆ ಒಳಗಾದವರು ಉಗ್ರಗಾಮಿ ಆಗ್ತಾರಾ? ಭ್ರಾತೃತ್ವ ಭಾವನೆ ಬೆಳೆಸಲು ಪ್ರಯತ್ನ ಮಾಡುವವರು, ಸಂತರನ್ನು ಸಮ ಭಾವನೆಯಿಂದ ನೋಡುವವರು, ಟೆರರಿಸ್ಟ್ ಮತ್ತು ಉಗ್ರಗಾಮಿ ಅಂತ ಹೇಳುವುದು ಸರಿಯಲ್ಲ. ತಪ್ಪು ಗ್ರಹಿಕೆ ಮತ್ತು ಮಾಹಿತಿ ಕೊರತೆ ಮೂಲಕ ಹಾಗೆ ಹೇಳುವುದು ಸರಿಯಲ್ಲ ಎಂದರು.

ಇದೇ ವೇಳೆ ಕೊಂಡಸಕೊಪ್ಪದ ಪ್ರತಿಭಟನೆ ಸ್ಥಳದಲ್ಲಿ ಅಕ್ರಮ ಸಾರಾಯಿ ನಿಷೇಧಕ್ಕೆ ಮಹಿಳೆಯ ಒತ್ತಾಯದ ಬಗ್ಗೆ ಮಾತನಾಡಿ, ಅಕ್ರಮ ಮಾರಾಟದ ಬಗ್ಗೆ ತಕರಾರು ಮಾಡಿದ್ರು. ಆಗ ನಾನು ನೀನು ಹೆಣ್ಣು ಮಗಳಮ್ಮ, ನೀನು ಮದ್ಯ ನಿಷೇಧಕ್ಕೆ ಒತ್ತಾಯ ಮಾಡು. ಕೇವಲ ಅಕ್ರಮ ಮಾರಾಟಕ್ಕೆ ಒತ್ತು ಕೊಡಬೇಡ ಅಂತ ಹೇಳಿದೆ ಎಂದರು. ಇದನ್ನೂ ಓದಿ: ಸಿಎಂ ಐಸಿಸ್‌ ಉಗ್ರನ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ: ಯತ್ನಾಳ್‌

ರಾಜ್ಯದಲ್ಲಿ ಮದ್ಯ ನಿಷೇಧ ಆಗಬೇಕು, ಅದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ ಆರ್ಥಿಕ ಮೂಲ ಎನಿಸುತ್ತದೆ ಆದರೂ ಅದು ಆಗಬೇಕು. ಅಕ್ರಮ ಮದ್ಯ ಮಾರಾಟ ವಿಚಾರಕ್ಕೆ ಧಾರವಾಡ ಎಸ್‌ಪಿ ಜೊತೆ ಚರ್ಚೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಹಣ ಕೊಡಲು ನಮ್ಮ ಅಭ್ಯಂತರ ಇಲ್ಲ, ಓಲೈಕೆ ಮಾಡ್ತಿರೋದು ಸರಿಯಲ್ಲ: ಬಿಎಸ್‌ವೈ

Share This Article