ಅವರು ರಾಜ್ಯದ ಹಣ ಲೂಟಿ ಮಾಡಲು ಬಂದಿರೋ ದೆಹಲಿ ಪ್ರತಿನಿಧಿ – `ಕೈ’ನಾಯಕನ ವಿರುದ್ಧ HDK ಕಿಡಿ

Public TV
2 Min Read

ಬೆಂಗಳೂರು: ಅವರು ರಾಜ್ಯದ ಹಣ ಲೂಟಿ ಮಾಡಲು ಬಂದಿರೋ ದೆಹಲಿ ಪ್ರತಿನಿಧಿ. ರಾಜ್ಯ ಸರ್ಕಾರ ಕಾಂಗ್ರೆಸ್ ಹೈಕಮಾಂಡ್‌ನ ಹಂಗಿನ ಸರ್ಕಾರ ಆಗಿದೆ ಅನ್ನೋದು ಇದರಿಂದ ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದರು.

BBMP ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ ಭಾಗಿಯಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರದ (Congress Government) ವಿರುದ್ಧ ಕಿಡಿಕಾರಿದರು. ರಾಜ್ಯ ಸರ್ಕಾರಕ್ಕೆ ಸಂಬಂಧವಿಲ್ಲದ ದೆಹಲಿಯ ಪ್ರತಿನಿಧಿ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ. ಇದನ್ನ ನೋಡಿದರೆ ಉಪಮುಖ್ಯಮಂತ್ರಿಗಳು ಎಷ್ಟು ಸುಳ್ಳು ಹೇಳಿದ್ದಾರೆ ಗೊತ್ತಾಗುತ್ತದೆ. ನಾಡಿನ ಜನತೆಯ ಮುಂದೆ ಅವರ ನಾಟಕೀಯವಾದ ಮಾತುಗಳಿಗೆ ಇದು ಒಂದು ಸಾಕ್ಷಿ. ಎಷ್ಟು ದಿನ ಈ ರೀತಿಯ ಸುಳ್ಳುಗಳನ್ನ ಹೇಳಿಕೊಂಡು ಬದುಕುತ್ತೀರಾ ಆಕ್ರೋಶ ಹೊರ ಹಾಕಿದರು.

ನಮ್ಮ ರಾಜ್ಯದ ಜನರ ಮತದಾನವನ್ನ ನಿಮ್ಮ ದೆಹಲಿ ಹೈಕಮಾಂಡ್‌ಗೆ ಗುಲಾಮರಾಗಿ ಇಟ್ಟುಕೊಂಡಿದ್ದೀರಾ. ಅಧಿಕಾರಿಗಳಿಗೆ, ಮಂತ್ರಿಗಳಿಗೆ ಸುರ್ಜೆವಾಲಾ ಏನು ಸೂಚನೆ ಕೊಟ್ಟಿದ್ದಾರೆ ಗೊತ್ತಿದೆ. ಜನ ಮತ ಹಾಕಿರೋದು ನಿಮಗೋ ಅಥವಾ ಕಾಂಗ್ರೆಸ್ ಹೈಕಮಾಂಡ್ ಗೋ? ಸರ್ಕಾರದ ತಿರ್ಮಾನಗಳ್ನ ಯಾರೋ ಬೀದಿಯಲ್ಲಿ ಹೋಗುವವರ ಜೊತೆ ಮೀಟಿಂಗ್ ಮಾಡುವುದನ್ನ ನೋಡಿದ್ರೆ ರಾಜ್ಯ ಎಂತ ದುರ್ಗತಿಗೆ ಬಂದಿದೆ ಅನ್ನೋದನ್ನ ನಾಡಿನ ಜನ ಅರ್ಥ ಮಾಡಿಕೊಳ್ಳಬೇಕು ಅಂತಾ ಕಿಡಿ ಕಾರಿದರು.

ರಾಜ್ಯ ಸರ್ಕಾರ ಕಾಂಗ್ರೆಸ್ ಹೈಕಮಾಂಡ್‌ನ ಹಂಗಿನಾ ಸರ್ಕಾರ ಆಗಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಸಭೆಯ ಫೋಟೋ ಬಿಡುಗಡೆ ಮಾಡಿರುವವರು ಯಾರು..? ಸಭೆಯಲ್ಲಿದ್ದ ನಿಮ್ಮ ಮಂತ್ರಿ ಒಬ್ಬ ಆ ಫೋಟೋಗಳನ್ನ ಬಿಡುಗಡೆ ಮಾಡಿರುವುದು. ಅಧಿಕಾರಿಗಳು ಕರೆದುಕೊಂಡು ಹೋಗಲು ಬಂದಿದ್ದಾರೆ ಅಂತ ಹೇಳುತ್ತೀರಾ? ಆ ಟೇಬಲ್ ನೋಡಿದರೆ ಸರ್ಕಾರದ ದಾಖಲೆಗಳನ್ನು ಇಟ್ಟುಕೊಂಡು ಕುಳಿತಿದ್ದಾರೆ. ರಾಜ್ಯವನ್ನ ಲೂಟಿ ಮಾಡಲು ದೆಹಲಿಯಿಂದ ಬಂದಿರುವ ಪ್ರತಿನಿಧಿ ಇವರು. ರಾಜ್ಯವನ್ನ ಲೂಟಿ ಹೊಡೆಯಲು ರಾಜ್ಯ ಕಾಂಗ್ರೆಸ್ ನಾಯಕರಿಗೆ ಡೈರಕ್ಷನ್ ಕೊಟ್ಟಿದೆ. ಹಣ ಲೂಟಿ ಮಾಡಲು ಬಂದಿರುವ ದೆಹಲಿ ಪ್ರತಿನಿಧಿ ಅವರು. ಸಂಪತ್ ಭರಿತ ರಾಜ್ಯವಾದ ಕರ್ನಾಟಕವನ್ನ ಲೂಟಿ ಹೊಡೆಯಲು ಎರಡು ರಾಷ್ಟ್ರೀಯ ಪಕ್ಷಗಳು ಇರುವುದು. ಸೋಲಿನಿಂದ ಹತಾಶರಾಗಿ ಇರುವವರು ನಾವಲ್ಲ. ಸೋಲು ಗೆಲುವನ್ನು ಎರಡನ್ನೂ ನೋಡಿದ್ದೇವೆ. ಜನರಿಗೆ ಗ್ಯಾರಂಟಿ ಭರವಸೆಗಳನ್ನು ಕೊಟ್ಟು ಈಡೇರಿಸಲು ಷರತ್ತು ಹಾಕಿ ನೀವು ಹತಾಶರಾಗಿದ್ದಾರೆ ಎಂದು ಕುಮಾರಸ್ವಾಮಿ ಕಾಂಗ್ರೆಸ್ ನಾಯಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

Share This Article