ಹೊರಗಡೆ ನಾಯಿಗಳಿದೆ ಎಂದು ಮಕ್ಕಳನ್ನು ಆಚೆ ಬಿಡದೇ ಇರಬೇಕೇ: ಎಚ್.ಕೆ.ಕುಮಾರಸ್ವಾಮಿ

Public TV
1 Min Read

ಹಾಸನ: ಹೊರಗಡೆ ನಾಯಿಗಳು ಇದೆ ಎಂದು ಮಕ್ಕಳನ್ನು ಆಚೆ ಬಿಡದೇ ಇರಬೇಕೇ? ಹಾಗಂತ ಮಕ್ಕಳನ್ನು ತಡೆಯುವುದೋ, ನಾಯಿಗಳನ್ನೋ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಅತ್ಯಂತ ಖಂಡನೀಯವಾದದ್ದು ವೈಯಕ್ತಿಕವಾಗಿ ಪಕ್ಷದ ಪರವಾಗಿ ಉಗ್ರವಾಗಿ ಖಂಡಿಸುತ್ತೇನೆ. ನೈತಿಕತೆ ಇದ್ದರೆ ಗೃಹ ಸಚಿವರು ಪ್ರಕರಣ ಸಂಬಂಧ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯ ಹೊಣೆಯನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಹೊರಬೇಕಾಗುತ್ತದೆ. ಪೊಲೀಸ್ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ದೆಹಲಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ರೀತಿ ನಡೆದಿದೆ. ಈ ಘಟನೆ ರಾಜ್ಯಕ್ಕೆ ಹಾಗೂ ಮೈಸೂರಿಗೆ ದೊಡ್ಡ ಕಪ್ಪುಚುಕ್ಕೆ ಎಂದ ಅವರು ಪ್ರಕರಣ ಸಂಬಂಧ ಪೊಲೀಸರನ್ನು ಗೃಹಸಚಿವರು ಸಮರ್ಥಿಸಿಕೊಳ್ಳುತ್ತಿರುವುದು ಹೇಸಿಗೆ ತರುತ್ತಿದೆ ಅವರ ವೈಯಕ್ತಿಕ ಲಾಭಕ್ಕಾಗಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವಂತಹದ್ದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಅರಗ ಜ್ಞಾನೇಂದ್ರ ನೆಗೆಟಿವ್ ಆಗಿ ಹೇಳಿಕೆ ಕೊಟ್ಟಿಲ್ಲ: ಪೂರ್ಣಿಮಾ ಶ್ರೀನಿವಾಸ್

ಹೆಣ್ಣುಮಕ್ಕಳು ಸಂಜೆ 7 ಮೇಲೆ ಹೊರಬರಬಾರದು ಎಂದಾದರೆ, ಸಂಜೆ 6:00 ರ ಮೇಲೆ ಹೆಣ್ಣು ಮಕ್ಕಳು ಹೊರ ಬಾರದಂತೆ ಆದೇಶ ಹೊರಡಿಸಲಿ. ಈಗಾಗಲೇ ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಅಮಾನತ್ತಿನಲ್ಲಿ ಇಡಬೇಕಿತ್ತು ಘಟನೆ ನಡೆದ ಸ್ಥಳ ನಗರ ಪ್ರದೇಶದಿಂದ ಆರೇಳು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಪೊಲೀಸರ ಗಸ್ತು ಮಾಡುವುದು ಕಷ್ಟಕರವಲ್ಲ ಎಂದಿದ್ದಾರೆ.

ಈ ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿದು ತಿಂದು ಅನಾಗರಿಕವಾಗಿ ವರ್ತಿಸುತ್ತಿದ್ದಾರೆ. ಪೊಲೀಸರು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಹಾಗೂ ಬಿಜೆಪಿ ಸರ್ಕಾರ ಬಂದ ಮೇಲೆ ದಲಿತರು ಮಹಿಳೆಯರು ಮಕ್ಕಳು ಅಸಹಾಯಕರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದೆ. ನಿರ್ಭಯಾ ಪ್ರಕರಣದಲ್ಲಿ ದೆಹಲಿ ಸರ್ಕಾರ ಹೇಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ಶಿಕ್ಷೆ ನೀಡಿತು. ಅದೇ ರೀತಿ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ:ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

Share This Article
Leave a Comment

Leave a Reply

Your email address will not be published. Required fields are marked *