ನ್ಯಾಯಾಂಗದ ಮೇಲೆ ನಂಬಿಕೆಯಿದೆ, ದರ್ಶನ್ ಆಚೆ ಬರುತ್ತಾರೆ: ನಟ ರಾಜವರ್ಧನ್

Public TV
1 Min Read

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣವಾಗಿ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದ ಬಗ್ಗೆ ಒಬ್ಬೊಬ್ಬರೇ ನಟ, ನಟಿಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈಗ ಡಿಂಗ್ರಿ ನಾಗರಾಜ್ ಪುತ್ರ ನಟ ರಾಜವರ್ಧನ್ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಗಾಯಕಿ ಕೆ.ಎಸ್.ಚಿತ್ರಾ ಕಂಠಸಿರಿಯಲ್ಲಿ ವಸಿಷ್ಠ ಸಿಂಹ ನಟನೆಯ ‘ವಿಐಪಿ’ ಚಿತ್ರದ ಸಾಂಗ್

ಈ ಪ್ರಕರಣದ ಬಗ್ಗೆ ಬೇಜಾರಿದೆ. ನ್ಯಾಯ ಸಿಕ್ಕೇ ಸಿಗುತ್ತೆ ಎಂಬ ನಂಬಿಕೆಯಿದೆ. ದರ್ಶನ್ ಅಣ್ಣ ಹೊರಗಡೆ ಬಂದೇ ಬರುತ್ತಾರೆ ಎಂಬ ನಂಬಿಕೆ ಇದೆ. ಸೋಷಿಯಲ್ ಮೀಡಿಯಾ ಅಂದ್ಮೇಲೆ ಪರ ಮತ್ತು ವಿರೋಧ ಇದ್ದೇ ಇರುತ್ತದೆ.ಫ್ಯಾಮಿಲಿ ಅವರಿಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಬಂದೇ ಬರುತ್ತದೆ. ಅದನ್ನು ನಾವು ಎದುರಿಸಬೇಕು ಎಂದು ರಾಜವರ್ಧನ್ (Actor Rajavardan) ಮಾತನಾಡಿದ್ದಾರೆ.

ತುಂಬಾ ಟ್ರಾವೆಲ್ ಮಾಡಿದ್ದೀನಿ ದರ್ಶನ್ ಅಣ್ಣ ಜೊತೆ ಬೆಸ್ಟ್ ದಿನಗಳನ್ನು ಕಳೆದಿದ್ದೇವೆ. ಆ್ಯಕ್ಷನ್ ಸೀನ್ಸ್ ಮಾಡುವ ಬಗ್ಗೆ ಸಲಹೆ ನೀಡಿದರು. ಒಂದು ಸಲ ನನಗೆ ಕಾಲಿಗೆ ಪೆಟ್ಟಾದಾಗ ಚೆನ್ನಾಗಿ ನೋಡಿಕೊಂಡಿದ್ದರು. ಲಾಕ್‌ಡೌನ್ ಆಗಿದ್ರು ಮನೆಗೆ ಡಾಕ್ಟರ್‌ನ ಕಳುಹಿಸಿದ್ದರು. ಈಗ ಅವರನ್ನು ನೋಡಿದ್ರೆ ನಿಜಕ್ಕೂ ಬೇಜಾರಾಗುತ್ತದೆ ಎಂದು ನಟ ಮಾತನಾಡಿದ್ದಾರೆ.

ನ್ಯಾಯಾಂಗದ (Court) ಮೇಲೆ ನಂಬಿಕೆಯಿದೆ. ಲಕ್ಷಾಂತರ ಅಭಿಮಾನಿಗಳ ಪ್ರಾರ್ಥನೆಯಿದೆ. 100% ದರ್ಶನ್ ಹೊರಗಡೆ ಬರುತ್ತಾರೆ. ಬಂದು ಇಂಡಸ್ಟ್ರಿ ಮೊದಲು ಹೇಗೆ ಇತ್ತೋ ಹಾಗೆ ಆಗುತ್ತದೆ. ದರ್ಶನ್ ಅಣ್ಣ ಇದ್ದಿದ್ರೆ ನನ್ನ ಸಿನಿಮಾಗೆ ತುಂಬಾ ಸಪೋರ್ಟ್ ಮಾಡ್ತಿದ್ದರು. ದರ್ಶನ್ ಅಣ್ಣನ ಸಾಕಷ್ಟು ಸಿನಿಮಾದಲ್ಲಿ ನಟಿಸುವ ಅವಕಾಶ ಇತ್ತು. ಮುಂದೆ ಅವರ ಜೊತೆ ನಟಿಸ್ತಿವೋ ಬಿಡ್ತಿವೋ ಗೊತ್ತಿಲ್ಲ ಆದರೆ ಆಚೆ ಬಂದರೆ ಅಷ್ಟೇ ಸಾಕು ಎಂದು ರಾಜವರ್ಧನ್ ಮಾತನಾಡಿದ್ದಾರೆ.

Share This Article