ಈದ್‌ನಲ್ಲಿ 1 ದಿನ ಹಸು ತಿನ್ನದಿದ್ರೆ ನೀವು ಸಾಯಲ್ಲ; ಗೋಹತ್ಯೆ ಮಾಡದೇ ಬಕ್ರೀದ್‌ ಆಚರಿಸೋಣ – ಮುಸ್ಲಿಮರಿಗೆ ಅಜ್ಮಲ್‌ ಕರೆ

Public TV
1 Min Read

ಗುವಾಹಟಿ: ಈ ಬಾರಿ ಬಕ್ರೀದ್‌ ಆಚರಣೆ ವೇಳೆ ಹಿಂದೂಗಳ ಭಾವನೆಯನ್ನು ಗೌರವಿಸೋಣ. ಗೋವುಗಳ ಹತ್ಯೆ ಮಾಡದಿರೋಣ ಎಂದು ಅಸ್ಸಾಂ ಸಂಸದ ಹಾಗೂ ಆಲ್‌ ಇಂಡಿಯಾ ಯುನೈಟೆಡ್‌ ಡೆಮೊಕ್ರಾಟಿಕ್‌ ಫ್ರಂಟ್‌ (ಎಐಯುಡಿಎಫ್‌) ಮುಖ್ಯಸ್ಥ ಮೌಲಾನಾ ಬದ್ರುದ್ದಿನ್‌ ಅಜ್ಮಲ್‌ ಅವರು ಮುಸ್ಲಿಮರಲ್ಲಿ ಮನವಿ ಮಾಡಿದ್ದಾರೆ.

ಆರ್‌ಎಸ್‌ಎಸ್‌ನ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಕೆಲವರು ಹಿಂದೂ ರಾಜ್ ಮಾಡಲು ಪ್ರಯತ್ನಿಸುವ ಮೂಲಕ ಹಿಂದೂಸ್ತಾನವನ್ನು ಕೊನೆಗೊಳಿಸಲು ಬಯಸಿದ್ದಾರೆ. ಅವರ ಕನಸಿನಲ್ಲಿಯೂ ಹಿಂದೂ ರಾಜ್ ಎಂದಿಗೂ ನಿಜವಾಗುವುದಿಲ್ಲ. ಅವರು ಈ ದೇಶದಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ನಡುವಿನ ಏಕತೆಯನ್ನು ಒಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಕ್ರೀದ್‌ ಆಚರಣೆ; ಪ್ರಾಣಿ ಬಲಿಗೆ ಹಲವು ನಿರ್ಬಂಧ – ಸರ್ಕಾರದ ಮಾರ್ಗಸೂಚಿಯಲ್ಲೇನಿದೆ?

ಈದ್‌ನಲ್ಲಿ ಒಂದು ದಿನ ಹಸು ತಿನ್ನದಿದ್ದರೆ ನೀವು ಸಾಯುವುದಿಲ್ಲ. ಈ ಹಬ್ಬವನ್ನು ನಾವು ಹಿಂದೂ ಸಹೋದರರೊಂದಿಗೆ ಆಚರಿಸೋಣ. ನಮ್ಮ ಪೂರ್ವಜರೆಲ್ಲರೂ ಹಿಂದೂಗಳು. ಇಸ್ಲಾಂನಲ್ಲಿ ಮೌಲ್ಯಗಳಿರುವುದರಿಂದ ಅವರು ಧರ್ಮಕ್ಕೆ ಬಂದಿದ್ದಾರೆ. ಏಕೆಂದರೆ ಅದು ವಿಶೇಷ ಗುಣಗಳನ್ನು ಹೊಂದಿದೆ. ಇಸ್ಲಾಂ ಇತರ ಧರ್ಮಗಳ ಭಾವನೆಗಳನ್ನು ಗೌರವಿಸುತ್ತದೆ ಎಂದು ತಿಳಿಸಿದ್ದಾರೆ.

ಸಾಂರ್ಭಿಕ ಚಿತ್ರ

ಭಾರತ ವೈವಿಧ್ಯಮಯ ಸಮುದಾಯಗಳು, ಜನಾಂಗೀಯ ಗುಂಪುಗಳು ಮತ್ತು ಧರ್ಮಗಳ ಜನರ ದೇಶವಾಗಿದೆ. ಭಾರತದ ಹೆಚ್ಚಿನ ನಿವಾಸಿಗಳು ಸನಾತನ ಮೇಲೆ ನಂಬಿಕೆಯಿಟ್ಟವರು. ಸನಾತನ ಧರ್ಮ, ಹಸು ಪ್ರಾಣಿ ಎಂದು ಗೌರವಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಶಿರಚ್ಛೇದನದ ಬೆದರಿಕೆ – ಯುಪಿಯಲ್ಲಿ ಆರೋಪಿ ಅರೆಸ್ಟ್

ನೂಪುರ್‌ ಶರ್ಮಾ ವಿವಾದ ಕುರಿತು ಮಾತನಾಡಿ, ಮುಸ್ಲಿಮರು ಈ ಬಗ್ಗೆ ಪ್ರತಿಕ್ರಿಯಿಸಬಾರದು. ಬದಲಿಗೆ, ದೇವರು ನೂಪುರ್ ಶರ್ಮಾ ಅವರಂತಹವರಿಗೆ ಬುದ್ದಿಯನ್ನು ನೀಡಬೇಕೆಂದು ಪ್ರಾರ್ಥಿಸಬೇಕು. ಶಿರಚ್ಛೇದ ಮಾಡುತ್ತೇನೆ ಎನ್ನುವುದು ಮೂರ್ಖತನದ ಪರಮಾವಧಿ ಎಂದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *