ಕೊಪ್ಪಳ: ಮುಸ್ಲಿಂ (Muslim) ಮಹಿಳೆ ಜೊತೆ ಹಿಂದೂ (Hindu) ಯುವಕನನ್ನು ನೋಡಿದ ಮುಸ್ಲಿಂ ಯುವಕರು ಹಿಂದೂ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೊಪ್ಪಳದಲ್ಲಿ (Koppal) ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ (Gangavati) ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ವೆಂಕಟೇಶ್ ಎನ್ನುವ ಯುವಕನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಲಾಗಿದೆ. ಬಸಾಪಟ್ಟಣ ಗ್ರಾಮದ ಅಜ್ಮೀರ್, ಆಫೀಯಾ ದಂಪತಿ ಜಗಳ ಮಾಡುತ್ತಿದ್ದರು. ಈ ವೇಳೆ ಪಕ್ಕದ ಮನೆಯಲ್ಲಿ ವಾಸವಿದ್ದ ವೆಂಕಟೇಶ್ ಇಬ್ಬರ ಜಗಳ ಬಿಡಿಸಲು ಹೋಗಿದ್ದಾರೆ. ಗಂಡನ ಜೊತೆ ಜಗಳವಾಡಿ ಮನೆಬಿಟ್ಟು ಮಕ್ಕಳ ಸಮೇತ ಹೋಗಿದ್ದ ಆಫೀಯಾರನ್ನು ಮನವೊಲಿಸಿ ಕರೆತರಲು ಅಸೀಫ್ ವೆಂಕಟೇಶ್‌ಗೆ ಹೇಳಿದ್ದ. ಇದನ್ನೂ ಓದಿ: ಕೇರಳದ ಮೆಡಿಕಲ್ ಕಾಲೇಜು ಬಳಿ ಸ್ಫೋಟಕ ತುಂಬಿದ 100 ಕ್ಕೂ ಹೆಚ್ಚು ಬಾಕ್ಸ್ ವಶಕ್ಕೆ – ಬೆಚ್ಚಿಬಿದ್ದ ಜನ
ಗಂಗಾವತಿ ಬಸ್ ನಿಲ್ದಾಣದಲ್ಲಿ ಆಫೀಯಾ ಹಾಗೂ ಆಕೆಯ ಮಕ್ಕಳನ್ನು ಮನವೊಲಿಸಲು ವೆಂಕಟೇಶ್ ಮುಂದಾಗಿದ್ದರು. ಈ ವೇಳೆ ವೆಂಕಟೇಶ್‌ನನ್ನು ಆಫೀಯಾ ಜೊತೆ ನೋಡಿದ ಮುಸ್ಲಿಂ ಯುವಕರು ತಪ್ಪಾಗಿ ಭಾವಿಸಿ ವೆಂಕಟೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಜ್ಮೀರ್, ಆಫೀಯಾ ಕುಟುಂಬದವರು ವೆಂಕಟೇಶ್‌ದು ತಪ್ಪಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಲಂಚ ನೀಡಲು ಹಣವಿಲ್ಲ, ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ – ತಾಲೂಕು ಕಚೇರಿ ಮುಂದೆ ಮೈಕ್‌ನಲ್ಲಿ ಅನೌನ್ಸ್ ಮಾಡಿದ ರೈತ
ವೆಂಕಟೇಶ್ ಮೇಲೆ ಹಲ್ಲೆ ಮಾಡಿದ ಅಮೀರ್, ಖಾಜಾಫೀರ್, ಇಂದ್ರಾವಲಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಓರ್ವ ಎಸ್‌ಡಿಪಿಐ ಮುಖಂಡ ಇರುವುದಾಗಿ ಎಸ್‌ಡಿಪಿಐ ಸದಸ್ಯರು ವೆಂಕಟೇಶ್ ಮೇಲೆಯೂ ಪ್ರತಿದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಪಾಕ್ ಪಂದ್ಯವಾಡಲ್ಲ: ಶೆಹಾಬಾಜ್ ಷರೀಫ್

