ಹಿಂದೂ ಯುವಕರ ಮೇಲೆ ಹಲ್ಲೆ ಪ್ರಕರಣ – ಎಲ್ಲಾ ಆರೋಪಿಗಳ ಬಂಧನ

2 Min Read

– ಹಿಂದೂ ಸಂಗಮ ಕಾರ್ಯಕ್ರಮ ಪ್ರಚಾರ ವೇಳೆ ಹಲ್ಲೆ
– ಪ್ರಭಾವಿ ಕಾಂಗ್ರೆಸ್ ಮುಖಂಡನ ಪುತ್ರನೂ ಶಾಮೀಲು?

ಮಡಿಕೇರಿ: ಕೊಡಗು (Kodagu) ಜಿಲ್ಲೆಯ ನಾಪೋಕ್ಲುವಿನಲ್ಲಿ ಇಂದು ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮದ ಕುರಿತು ನಿನ್ನೆ ವಾಹನದಲ್ಲಿ ಪ್ರಚಾರ ಮಾಡುತ್ತಿದ್ದ ಗೌತಮ್ ಎಂಬಾತನ ಮೇಲೆ ಮುಸ್ಲಿಂ ಯುವಕರು (Muslims Youth) ಮಾರಣಾಂತಿಕ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ.

ಘಟನೆ ಸಂಬಂಧ ಹಲ್ಲೆ ನಡೆಸಿದ ಎಲ್ಲಾ ನಾಲ್ವರು ಆರೋಪಿಗಳನ್ನ (Accused) ಬಂಧಿಸಿರುವುದಾಗಿ ಕೊಡಗು ಎಸ್ಪಿ ಬಿಂದು ಮಣಿ ಮಾಹಿತಿ ನೀಡಿದ್ದಾರೆ. ಸಿದ್ದಿಕ್, ಸುಹೆಲ್, ನಾಭಿ, ರಶೀದ್ ಬಂಧಿತರು. ಇದನ್ನೂ ಓದಿ: ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದಕ್ಕೆ ಹೆದರಿ ನೇಣಿಗೆ ಕೊರಳೊಡ್ಡಿದ್ರಾ ಟೆಕ್ಕಿ?

ಏನಾಗಿತ್ತು?
ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಹಿಂದೂ ಸಂಗಮ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೀತಿವೆ. ಮಡಿಕೇರಿ ತಾಲೂಕಿನ ಬಲ್ಲಮಾವಟಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ ಅಂತ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗ್ತಿತ್ತು. ನಾಪೋಕ್ಲು ಪಟ್ಟಣದಲ್ಲಿ ಹಿಂದೂ ಯುವಕರು ಪಿಕಪ್ ವಾಹನದಲ್ಲಿ ಸೌಂಡ್ ಬಾಕ್ಸ್ ಕಟ್ಟಿಕೊಂಡು ಪ್ರಚಾರ ನಡೆಸುತ್ತಿದ್ರು. ಈ ವೇಳೆ ಕೆಲ ಮುಸ್ಲಿಂ ಯುವಕರು ಈ ಭಾಗದಲ್ಯಾಕೆ ಪ್ರಚಾರ ಮಾಡ್ತಿದ್ದೀರಾ ಎಂದು ಪ್ರಶ್ನೆ ಮಾಡಿ ಜಗಳ ಶುರು ಮಾಡಿದ್ದಾರೆ. ಹಿಂದೂ ಯುವಕರು-ಮುಸ್ಲಿಂ ಯುವಕರಿಗೆ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ, ಕೊನೆಗೆ ಗೌತಮ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಗೌತಮ್‌ನ ಕೂಡಲೇ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ಈ ಹಲ್ಲೆ ಪ್ರಕರಣದಲ್ಲಿ ನಾಪೋಕ್ಲು ಭಾಗದ ಪ್ರಭಾವಿ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಭಾಗಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಕೆರಳಿದ ಹಿಂದೂ ಕಾರ್ಯಕರ್ತರು ಮತ್ತು ಮುಖಂಡರು ನಾಪೋಕ್ಲು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. ಹಲ್ಲೆ ಮಾಡಿದ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ರು. ನಾಪೋಕ್ಲು ಪೊಲೀಸ್ ಠಾಣೆಯ ಮುಂಭಾಗ ಸಾವಿರಾರು ಕಾರ್ಯಕರ್ತರು ಜಮಾಯಿಸಿ ಧರಣಿ ನಡೆಸಿದ್ರು.

ಇಡೀ ಘಟನೆ ಗಂಭೀರತೆ ಅರಿತ ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ ಬೋಪಯ್ಯ ತಕ್ಷಣವೇ ನಾಪೋಕ್ಲು ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಪ್ರತಿಭಟನಾ ನಿರತ ಕಾರ್ಯಕರ್ತರನ್ನ ಭೇಟಿ ಮಾಡಿ ಮಾಹಿತಿ ಪಡೆದ ಅವರು, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ರು. ಇದನ್ನೂ ಓದಿ: ಚಾಕುವಿನಿಂದ ಇರಿದು ವಿವಾಹಿತ ಪ್ರಿಯತಮೆ ಕೊಂದ ಪ್ರಿಯಕರ – ಪುಟ್ಟ ಮಕ್ಕಳಿಬ್ಬರು ಅನಾಥ!

ಈ ಬೆನ್ನಲ್ಲೇ ಹಲ್ಲೆ ಆರೋಪಿಗಳಾದ ರಶೀದ್ ಸಿದ್ದಿಕ್, ಸುಹೇಲ್ ರಾಫಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಇಂದು ಸಂಜೆ ಒಳಗೆ ಬಂಧನ ಮಾಡಬೇಕು ಎಂದು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಅದರಂತೆ ಎಲ್ಲಾ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Share This Article