ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಬಿಲ್‌ಗೆ ಪರಿಷತ್‌ನಲ್ಲಿ ಸೋಲು; ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ

Public TV
2 Min Read

– ಮೇಲ್ಮನೆಯಲ್ಲಿ ದೋಸ್ತಿಗಳಿಂದ ಜೈಶ್ರೀರಾಮ್ ಘೋಷಣೆ
– ಕಾಂಗ್ರೆಸ್ ಶಾಸಕರು, ಸಚಿವರಿಂದ ಜೈಭೀಮ್, ಭಾರತ್ ಮಾತಾಕಿ ಜೈ ಘೋಷಣೆ

ಬೆಂಗಳೂರು: ಬಿಜೆಪಿ-ಕಾಂಗ್ರೆಸ್ (BJP – Congress) ನಡುವೆ ಸಂಘರ್ಷಕ್ಕೆ ಕಾರಣವಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ ಪರಿಷತ್‌ನಲ್ಲಿ (Legislative Council) ತಿರಸ್ಕೃತಗೊಂಡಿದ್ದು, ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.

ಸರ್ಕಾರದ ತಿದ್ದುಪಡಿ ಮಸೂದೆ ತಿರಸ್ಕೃತಗೊಳ್ಳುತ್ತಿದ್ದಂತೆ ಬಿಜೆಪಿ ಸದಸ್ಯರು ಜೈಶ್ರೀರಾಮ್ (Jai Sriram) ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಲ್ಲಿದ್ದ ಬೆರಳೆಣಿಕೆಯಷ್ಟು ಕಾಂಗ್ರೆಸ್ ಸದಸ್ಯರು ಜೈಭೀಮ್, ಭಾರತ್ ಮಾತಾಕಿ ಜೈ ಎಂಬ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಗೋಧ್ರಾ ಮಾದರಿಯಲ್ಲಿ ರೈಲು ಸುಟ್ಟು ಹಾಕುವುದಾಗಿ ಬೆದರಿಕೆ: ಸಮಗ್ರ ತನಿಖೆಗೆ ಸಿ.ಟಿ.ರವಿ ಆಗ್ರಹ

ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಈ ಮಸೂದೆಯನ್ನು ಮಂಡಿಸುತ್ತಲೇ ನಿರೀಕ್ಷೆಯಂತೆಯೇ ಬಿಜೆಪಿ-ಜೆಡಿಎಸ್ ಶಾಸಕರು ತೀವ್ರವಾಗಿ ವಿರೋಧಿಸಿದ್ರು. ಒಂದು ಕೋಟಿ ರೂ.ಗಿಂತಲೂ ಅಧಿಕ ಆದಾಯ ಬರುವ ದೇವಾಲಯಗಳಲ್ಲಿ 10% ಹಣ ಪಡೆಯೋ ಸರ್ಕಾರದ ನಿಲುವು ಸರಿಯಲ್ಲ. ಅಸಲಿಗೆ ದೇವಾಲಯದ ಹಣ ಯಾಕೆ ಪಡೆದುಕೊಳ್ತೀರಾ? ಸರ್ಕಾರವೇ 100 ಕೋಟಿ ಹಣ ಬಿಡುಗಡೆ ಮಾಡಲಿ ಎಂದು ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು. ಇದನ್ನೂ ಓದಿ: ಅಯೋಧ್ಯೆ ಯಾತ್ರಿಕರ ರೈಲು ಗಲಾಟೆ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದ ಫಲ: ಪ್ರಹ್ಲಾದ್ ಜೋಶಿ

ಜೆಡಿಎಸ್ ಸದಸ್ಯ ಶರವಣ, ಈ ಸರ್ಕಾರ ದೇವರ ಹಣದಲ್ಲೂ ಪರ್ಸೆಂಟೇಜ್ ಪಡೆಯೋಕೆ ಹೋಗ್ತಿದೆ ಎಂದು ಆರೋಪಿಸಿದರು. ಇದಕ್ಕೆ ಆಡಳಿತ ಪಕ್ಷದಿಂದ ತೀವ್ರ ಆಕ್ರೋಶ ವ್ಯಕ್ತವಾಯ್ತು. ಆದ್ರೂ ತಗ್ಗದ ವಿಪಕ್ಷಗಳು ಈ ಮಸೂದೆಯನ್ನ ವಾಪಸ್ ಪಡೆಯಬೇಕು, ಇಲ್ಲವೇ ಮತಕ್ಕೆ ಹಾಕಬೇಕು ಎಂದು ಪಟ್ಟು ಹಿಡಿದು ಕುಳಿತವು. ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ತಣ್ಣಗಾದರು. ಕೆಲ ತಿದ್ದುಪಡಿಗಳೊಂದಿಗೆ ಸೋಮವಾರ ಮತ್ತೆ ಮಂಡಿಸುತ್ತೇವೆ ಎಂಬ ಸಚಿವರ ಮಾತಿಗೆ ಉಪಸಭಾಪತಿಗಳು ಆಕ್ಷೇಪ ವ್ಯಕ್ತಪಡಿಸಿದರು. ಹಾಗೆ ಮಾಡಲು ಆಗಲ್ಲ ಎಂದು ಸೂಚನೆ ನೀಡಿದರು. ಕೊನೆಗೆ ಉಪಸಭಾಪತಿಗಳು ಮಸೂದೆಯನ್ನು ಮತಕ್ಕೆ ಹಾಕಿದ್ದು, ಸರ್ಕಾರಕ್ಕೆ ಸೋಲಾಯಿತು.

ಸರ್ಕಾರದ ವಿರುದ್ಧವೇ ಖಂಡನಾ ನಿರ್ಣಯ:
ಕೇಂದ್ರದ ವಿರುದ್ಧ ಎರಡು ನಿರ್ಣಯಗಳನ್ನು ಮಂಡಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಗುರುವಾರ ವಿಪಕ್ಷಗಳಿಗೆ ಶಾಕ್ ನೀಡಿತ್ತು. ಶುಕ್ರವಾರ ರಾಜ್ಯ ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಮಂಡಿಸುವ ಮೂಲಕ ಬಿಜೆಪಿ ಟಕ್ಕರ್ ನೀಡಿದೆ. ಸರ್ಕಾರದ ಹಣಕಾಸು ನೀತಿ ಸರಿಯಿಲ್ಲ ಮತ್ತು ಕೇಂದ್ರದ ವಿರುದ್ಧ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ಆರೋಪಿಸಿ ವಿಪಕ್ಷ ನಾಯಕ ಅಶೋಕ್ ಖಂಡನಾ ನಿರ್ಣಯ ಮಂಡಿಸಿದರು. ಇದನ್ನೂ ಓದಿ: ಡಾ.ಮಂಜುನಾಥ್ ಏನು ತೀರ್ಮಾನ ಮಾಡ್ತಾರೆ ಎಂದು ಸಮಯ ಬಂದಾಗ ನೋಡೋಣ: ಹೆಚ್‍ಡಿಕೆ

Share This Article