ಮಸೀದಿಗಳ ಧ್ವನಿವರ್ಧಕ ನಿಷೇಧ ಚರ್ಚೆ – 1990ರಲ್ಲೇ ಕೊಡಗು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ವಿಎಚ್‍ಪಿ ಮುಖಂಡ

Public TV
1 Min Read

ಮಡಿಕೇರಿ: ರಾಜ್ಯದಲ್ಲಿ ಹಿಜಬ್, ಮುಸ್ಲಿಂ ವರ್ತಕರಿಗೆ ನಿರ್ಬಂಧ, ಹಲಾಲ್ ಕಟ್ – ಜಟ್ಕಾ ಕಟ್ ವಿವಾದದ ಬಳಿಕ ಇದೀಗ ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧದ ಬಗ್ಗೆ ಚರ್ಚೆಯಾಗುತ್ತಿದೆ. ಈ ನಡುವೆ ಧ್ವನಿವರ್ಧಕ ನಿಷೇಧ ಈ ಹಿಂದಿನಿಂದಲೇ ಜಾರಿಯಲ್ಲಿತ್ತು. 1990ರಲ್ಲೇ ಕೊಡಗು ಜಿಲ್ಲಾಡಳಿತಕ್ಕೆ ವಿಎಚ್‍ಪಿ ಮುಖಂಡರೊಬ್ಬರು ಮನವಿ ಸಲ್ಲಿಸಿದ್ದರು.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ವಿಎಚ್‍ಪಿ ಮುಖಂಡ ಸೋಮೇಶ್, ಈ ಹಿಂದೆ ಕೊಡಗಿನ ಪಾಲೂರು ದೇವಾಲಯದಲ್ಲಿ ನಡೆದ ಹಿಂದೂ, ಮುಸ್ಲಿಂ ಗಲಭೆಯ ಬಳಿಕ 1990ರಲ್ಲೇ ಅಂದಿನ ಜಿಲ್ಲಾಧಿಕಾರಿಗಳಿಗೆ ಮಸೀದಿಗಳಲ್ಲಿ ಇರುವ ಧ್ವನಿವರ್ಧಕ ನಿಷೇಧ ಮಾಡುವಂತೆ ಮನವಿ ಮಾಡಲಾಗಿತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?

1964ರಲ್ಲಿಯೇ ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ. ಅನುಮತಿ ರಹಿತ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ ಇಷ್ಟು ವರ್ಷ ರಾಜಕೀಯ ತುಷ್ಟೀಕರಣದೊಂದಿಗೆ ಕಾನೂನು ಉಲ್ಲಂಘನೆ ಆಗುತ್ತದೆ. ಇದು ಹೊಸ ಬೆಳವಣಿಗೆ ಅಲ್ಲ. ಬಹು ವರ್ಷಗಳ ಹಿಂದೂಗಳ ಧ್ವನಿ ಆಗಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ಒತ್ತಡದಿಂದ ದಿಟ್ಟ ಹೆಜ್ಜೆ ಇರಿಸಿಲ್ಲ. ಅದು ಮುಸ್ಲಿಂ ಸಮುದಾಯದ ಮುಖಂಡರು ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಎಂದು ಕೂಗುತ್ತ ಗೋರಖ್‍ನಾಥ ದೇವಾಲಯ ಪ್ರವೇಶಿಸಲು ಯತ್ನಿಸಿದ್ದ ಯುವಕ ಬಂಧನ

ಕಾನೂನು ತನ್ನದೇ ರೀತಿಯಲ್ಲಿ ಕೆಲಸ ಮಾಡಬೇಕಿದೆ. 1964ರಲ್ಲಿಯೇ ಸರ್ವೋಚ್ಚ ನ್ಯಾಯಾಲಯ ಆದೇಶದಲ್ಲೇ ಸ್ಪಷ್ಟವಾಗಿ ಇದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೂ ಧ್ವನಿವರ್ಧಕ ಬಳಸುವಂತೆ ಇಲ್ಲ. ಧ್ವನಿವರ್ಧಕ ಬಳಕೆಯಾದರೆ ಮನೆಯಲ್ಲಿ ಇರುವ ಮಕ್ಕಳು, ವಯಸ್ಸಾದ ವೃದ್ಧರಿಗೂ ಸಮಸ್ಯೆ ಅಗುತ್ತದೆ ಎಂದು ಸಾಕಷ್ಟು ಜನರು ಹೇಳಿದ್ರು. ಇದೀಗಾ ಬಹುಶಃ ಕಾಲ ಕೂಡಿ ಬಂದಿದೆ. ಅದಷ್ಟು ಬೇಗ ಸಾರ್ವತ್ರಿಕವಾಗಿ ಸರ್ಕಾರ ದಿಟ್ಟತನದಿಂದ ಧ್ವನಿವರ್ಧಕ ನಿಷೇಧವನ್ನು ಜಾರಿಗೆ ತರಬೇಕು ಇದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *