ಮಹಾಗಣಪತಿ ವಿಸರ್ಜನೆ – ಶಾಲಾ-ಕಾಲೇಜ್‍ಗಳಿಗೆ ರಜೆ, 4 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ

Public TV
1 Min Read

ಚಿತ್ರದುರ್ಗ: ಇಂದು ನಗರದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಪ್ರತಿಷ್ಠಾಪಿಸಿರುವ ಮಹಾಗಣಪತಿ (Mahaganapathi) ವಿಸರ್ಜನೆ & ಶೋಭಾಯಾತ್ರೆ ನಡೆಯಲಿದೆ.

4 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು ಚಿತ್ರದುರ್ಗ (Chitradurga) ನಗರ ಸಂಪೂರ್ಣ ಕೇಸರಿಮಯವಾಗಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರ ಪಥ ಸಂಚಲನ ನಡೆಸಲಾಯಿತು. ವಿಜ್ಞಾನ ಕಾಲೇಜ್‌ ಮುಂಭಾಗದಿಂದ ಆರಂಭವಾಗುವ ಮೆರವಣಿಗೆ ಒಟ್ಟು ಮೂರೂವರೆ ಕಿಲೋಮೀಟರ್ ಕ್ರಮಿಸಿ ಚಂದ್ರವಳ್ಳಿ ಕೆರೆಯಲ್ಲಿ ಮೂರ್ತಿ ವಿಸರ್ಜನೆಯಾಗಿಲಿದೆ. ಇದನ್ನೂ ಓದಿ: ವಿಮಾನದಲ್ಲಿ ಭಾರತಕ್ಕೆ ಬರುತ್ತಿದೆ 8 ಚೀತಾ – ವಿಶೇಷತೆ ಏನು? ತಯಾರಿ ಹೇಗೆ?

ಭದ್ರತೆಗಾಗಿ 8ಕೆಎಸ್‍ಆರ್‌ಪಿ ತುಕಡಿಗಳು, 8 ಡಿಎಆರ್ ತುಕಡಿಗಳು ಸಜ್ಜಾಗಿವೆ. ಯಾವುದೆ ಅಹಿತಕರ ಘಟನೆ ನಡೆಯದಂತೆ ನಗರದ ನಾಲ್ಕು ಕಡೆ ನಾಕಾಬಂದಿ ಹಾಕಲಾಗಿದೆ. ಪ್ರಮುಖ ವೃತ್ತಗಳಲ್ಲಿ ವಾಚ್ ಟವರ್‌ಗಳಲ್ಲಿ ಸಿಸಿಟಿವಿ (CCTV) ಹಾಕಲಾಗಿದೆ. ನಗರದ ಶಾಲಾ-ಕಾಲೇಜುಗಳಿಗೆ (School-College) ಇಂದು ರಜೆ ಘೋಷಿಸಿ ಡಿಡಿಪಿಐ ರವಿಶಂಕರ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *