ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ – ಜನಸಾಗರ, ಡಿಜೆ ಸದ್ದಿಗೆ ಯುವ ಸಮೂಹ ಭರ್ಜರಿ ಡ್ಯಾನ್ಸ್

Public TV
2 Min Read

ಚಿತ್ರದುರ್ಗ: ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಗಣೇಶನ ಶೋಭಾಯಾತ್ರೆ (Ganesha Procession) ಇಂದು ಚಿತ್ರದುರ್ಗದಲ್ಲಿ (Chitradurga) ನಡೆದಿದ್ದು, ಶೋಭಾಯಾತ್ರೆಗೆ ಜನಸಾಗರವೇ ಹರಿದುಬಂದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನರು ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು, ಡಿಜೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿ ಎಂಜಾಯ್ ಮಾಡಿದರು.

ಇಂದು ಏಷ್ಯಾದಲ್ಲಿಯೇ ಅತಿ ಪ್ರಸಿದ್ಧಿಯಾದ ಹಿಂದೂ ಮಹಾಗಣಪತಿ (Hindu Mahaganapathi) ಬೃಹತ್ ಶೋಭಾಯಾತ್ರೆ ಅದ್ಧೂರಿಯಾಗಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಜರುಗಿತು. ಬೆಳಗ್ಗೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ ದೊರಕಿತು. ಬಳಿಕ ಶುರುವಾದ ಬೃಹತ್ ಶೋಭಾಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂದಿತು. ಅದರಲ್ಲಂತೂ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಕರು ರಸ್ತೆಯುದ್ದಕ್ಕೂ ಜೈ ಶ್ರೀರಾಮ್, ಜೈ ಭಜರಂಗಿ ಎಂದು ಘೋಷ ವಾಕ್ಯ ಕೂಗುವ ಮೂಲಕ ಭರ್ಜರಿ ಸ್ಟೆಪ್ ಹಾಕಿದರು. ಪ್ರತೀ ವರ್ಷದಂತೆಯೇ ಈ ವರ್ಷವೂ ಅದ್ಧೂರಿ ಶೋಭಾಯಾತ್ರೆ ನಡೆಯುತ್ತಿದ್ದು, ನೆಂಟರಿಷ್ಟರು ವಿವಿದೆಡೆಗಳಿಂದ ಆಗಮಿಸಿ ನಮ್ಮ ಜಿಲ್ಲೆಯಲ್ಲಿ ಐತಿಹಾಸಿಕ ಉತ್ಸವದಲ್ಲಿ ಭಾಗಿಯಾಗೋದು ನಮಗೆ ಹೆಮ್ಮೆ ಅಂತಾರೆ ಸ್ಥಳೀಯರು. ಇದನ್ನೂ ಓದಿ: ಭಕ್ತರಿಗೆ ಸಿಹಿಸುದ್ದಿ; ಮಾದಪ್ಪನ ದರ್ಶನಕ್ಕೆ ತಿರುಪತಿ ಮಾದರಿ ವ್ಯವಸ್ಥೆ

ಇನ್ನು ಜೈನ ಧಾಮದ ಸಿಂಧೂರ ಮಟಂಪದ ಬಳಿಯಿಂದ ಹೊರಟ ಬೃಹತ್ ಮೆರವಣಿಗೆ ಮದಕರಿ ವೃತ್ತ, ಗಾಂಧಿ ಸರ್ಕಲ್, ಕನಕ ಸರ್ಕಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಇನ್ನೂ ಸರಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಜನರು ಶೋಭಾಯಾತ್ರೆಯಲ್ಲಿ ಸೇರಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೋಡಲು ಎರಡು ಕಣ್ಣು ಸಾಲದು. ಇದನ್ನೂ ಓದಿ: ಸ್ಥಳೀಯರೊಂದಿಗೆ ಚರ್ಚಿಸಿ ಆನೆ ವಿಹಾರಧಾಮ ಸ್ಥಾಪನೆ: ಈಶ್ವರ ಖಂಡ್ರೆ

ಇನ್ನೂ ಶೋಭಾಯಾತ್ರೆ ಉದ್ಘಾಟನೆ ವೇಳೆ ಮಾತನಾಡಿದ ಮಾದಾರ ಚನ್ನಯ್ಯ ಶ್ರೀಗಳು, 3 ದಿನದಿಂದ ಉತ್ಸವಕ್ಕೆ ಏನೆಲ್ಲ ಅಡಚಣೆ ಆಯಿತು ನಿಮಗೂ ಗೊತ್ತಿದೆ. ಈ ಹಿಂದೂ ಮಹಾಗಣಪತಿಗೆ ಒಂದು ಶಕ್ತಿ ಇದೆ. ಏನೇ ಅಡಚಣೆ ಆದರೂ ಅದೆಲ್ಲವೂ ನಿವಾರಣೆ ಆಗಲಿದೆ ಈ ಮಾತಿಗೆ ಶೋಭಾಯಾತ್ರೆಗೆ ಸೇರಿದ ಲಕ್ಷಾಂತರ ಜನರೇ ಸಾಕ್ಷಿ. ಈ ಉತ್ಸವ ಮಧ್ಯ ಕರ್ನಾಟಕದ ಪ್ರಸಿದ್ದ ಉತ್ಸವ, ಈ ಉತ್ಸವಕ್ಕೆ ಅಧಿಕಾರಿಗಳು ಸಹಕರಿಸಲಿ ಎಂದರು. ಇದನ್ನೂ ಓದಿ: ಕುಟುಂಬ ರಾಜಕಾರಣದಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

ಬಳಿಕ ಮಾತನಾಡಿದ ಶರಣ್ ಪಂಪ್‌ವೆಲ್, ಕಳೆದ 18 ವರ್ಷಗಳಿಂದ ಹಿಂದೂ ಗಣಪತಿ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡುವ ಮೂಲಕ ದೇಶಕ್ಕೆ ಸಂದೇಶ ಸಾರಿದೆ. ನಾವೆಲ್ಲರೂ ಒಂದೂ ನಾವೆಲ್ಲರೂ ಹಿಂದೂ ಎನ್ನುವ ಸಂದೇಶ ನಮ್ಮದು ಎಂದರು. ಒಟ್ಟಾರೆ ಪ್ರತಿ ವರ್ಷಕ್ಕಿಂತ ಈ ವರ್ಷ ಶೋಭಾಯಾತ್ರೆಗೆ ವಿಶೇಷವಾಗಿ ತರಿಸಿದ್ದ ಆಕರ್ಷಕವಾದ ಡಿಜೆಗಳ ಸದ್ದಿಗೆ ಯುವಕ ಯುವತಿಯರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಇದನ್ನೂ ಓದಿ: ಟ್ರಾಫಿಕ್‌ ಫೈನ್‌ 50% ಡಿಸ್ಕೌಂಟ್‌ಗೆ ವಾಹನ ಸವಾರರಿಂದ ಭರ್ಜರಿ ರೆಸ್ಪಾನ್ಸ್‌; ಬರೋಬ್ಬರಿ 106 ಕೋಟಿ ದಂಡ ಸಂಗ್ರಹ

Share This Article