ಪ್ರೀತಿ ತಿರಸ್ಕರಿಸಿದ್ದಕ್ಕೆ ಹುಬ್ಬಳ್ಳಿಯಲ್ಲಿ ಹಿಂದೂ ಯವತಿಯ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ

By
2 Min Read

– ಮುಸ್ಲಿಂ ಗೆಳತಿಯಿಂದ ಯುವಕನ ಪರಿಚಯ
– ನೇಹಾ ಪ್ರಕರಣದಿಂದ ಸ್ನೇಹ ಕಡಿತಗೊಳಿಸಲು ಮುಂದಾಗಿದ್ದ ಯುವತಿ

ಹುಬ್ಬಳ್ಳಿ: ಕಾಂಗ್ರೆಸ್ ಕಾರ್ಪೋರೇಟರ್‌ ನಿರಂಜನ್ ಪುತ್ರಿ ನೇಹಾ ಹಿರೇಮಠ್‌ (Neha Hiremath) ಹತ್ಯೆ ಮಾಸುವ ಮುನ್ನವೇ, ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಮತ್ತೊಂದು ಅದೇ ಮಾದರಿ ದೌರ್ಜನ್ಯ ಪ್ರಕರಣ ಇಂದು ನಡೆದಿದೆ. ಹಿಂದೂ (Hindu) ಯುವತಿ ಮೇಲೆ ಮುಸ್ಲಿಂ (Muslim) ಯುವಕನಿಂದ ಹಲ್ಲೆ ಆರೋಪ ಕೇಳಿ ಬಂದಿದೆ.

ಕೇಶ್ವಾಪುರ ಟ್ರಾಫಿಕ್ ಪೊಲೀಸ್ ಠಾಣೆ ಎದುರು ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಅಫ್ತಾಬ್ ಶಿರಹಟ್ಟಿ ಹಲ್ಲೆ ನಡೆಸಿದ್ದಾನೆ. ಸ್ಥಳೀಯರು ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವತಿ ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧನ ಮಾಡಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಕೋರ್ಟ್‌ ಆರೋಪಿಗೆ 1 ವಾರ ನ್ಯಾಯಾಂಗ ಬಂಧನ ವಿಧಿಸಿದೆ. ಘಟನೆ ಬಗ್ಗೆ ನೊಂದು ಯುವತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬಳಿಕ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಇದನ್ನೂ ಓದಿ: ಬಂಡಾಯವೆದ್ದ ಈಶ್ವರಪ್ಪ ಬಿಜೆಪಿಯಿಂದ ಉಚ್ಚಾಟನೆ

 

ಯುವತಿ ಹೇಳಿದ್ದೇನು?
ಹಲ್ಲೆ ಮಾಡಿರುವ ಅಫ್ತಾಬ್ ನನಗೆ ಎರಡು ವರ್ಷದಿಂದ ಪರಿಚಯ ಇತ್ತು. ಪ್ರೀತಿ (Love) ಮಾಡು ಎಂದು ಎರಡು ವರ್ಷದಿಂದ ನನ್ನ ಬಿದ್ದಿದ್ದ. ಆದರೆ ಅವನ ಮತ್ತು ನನ್ನ ನಡುವೆ ಗೆಳೆತನ ಇತ್ತು. ನನ್ನ ಮುಸ್ಲಿಂ ಗೆಳತಿ ಅಫ್ತಾಬ್ ನನ್ನು ಪರಿಚಯ ಮಾಡಿಕೊಟ್ಟಿದ್ದಳು. ನಾನು ಪಿಯುಸಿ ಓದುತ್ತಿದ್ದಾಗಿಂದಲೂ ಪರಿಚಯ ಇತ್ತು.  ಇದನ್ನೂ ಓದಿ: ಮಿಷನ್‌-100 ಟಾರ್ಗೆಟ್‌; 98ರಲ್ಲಿ ಸೋಲು, 99ನೇ ಚುನಾವಣೆಯಲ್ಲಿ ಮತ್ತೆ ಕಣಕ್ಕೆ – ಈ ಅಭ್ಯರ್ಥಿ ಯಾರು ಗೊತ್ತೆ?

ನನ್ನ ಹುಟ್ಟುಹಬ್ಬ ಮತ್ತು ರಂಜಾನ್ ಗೆ ಬಲವಂತವಾಗಿ ಗಿಫ್ಟ್ ಕೊಟ್ಟಿದ್ದ. ಆದರೆ ನೇಹಾ ಪ್ರಕರಣ ಆದ ಬಳಿಕ ನನಗೆ ಭಯ  ಆಯ್ತು. ಹೀಗಾಗಿ ಅವನ ಗೆಳೆತನ ಕಳೆದುಕೊಳ್ಳಲು ನಿರ್ಧಾರ ಮಾಡಿ ಈ ವಿಚಾರವನ್ನು ಅಫ್ತಾಬ್‌ಗೆ ತಿಳಿಸಿದ್ದೆ. ಇವತ್ತು ಅವನೇ ಕಾಲ್ ಮಾಡಿ ಹಣ್ಣಿನ ಅಂಗಡಿ ಹತ್ತಿರ ಬರಲು ತಿಳಿಸಿದ್ದ ನಾನು ಅವನ ಅಂಗಡಿ ಹತ್ತಿರ ಬಂದು ಅವನು ನೀಡಿದ ಗಿಫ್ಟ್ ವಾಪಸ್‌ ನೀಡಿದೆ.

 

ಗಿಫ್ಟ್‌ ಅನ್ನು ಸುಟ್ಟು ಹಾಕಿದ ಬಳಿಕ ಆತ ಸಿಟ್ಟಿನಿಂದ ನನಗೆ ಹೊಡೆದ. ಕೂಡಲೇ ಅಲ್ಲಿದ್ದ ಸ್ಥಳೀಯರು ಪೊಲೀಸ್ ಠಾಣೆಗೆ ಅವನನ್ನು ಕರೆದುಕೊಂಡು ಬಂದರು. ವಿಚಾರ ನಮ್ಮ ಮನೆಯಲ್ಲಿ ವಿಚಾರ ಗೊತ್ತಾ ಬಾರದು ಅಂತ ನಾನು ಪೊಲೀಸರಿಗೆ ಮನವಿ ಮಾಡಿಕೊಂಡೆ. ಹೀಗಾಗಿ ಇಂದು ಹಣ್ಣಿನ ಅಂಗಡಿ ಮುಂದೆ ಹಲ್ಲೆ ಅಂತ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ

ನನ್ನ ಹೊಡೆಯುವ ಅಧಿಕಾರ ಕೊಟ್ಟವರು ಯಾರು ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ. ಇನ್ನೂ ಸ್ಥಳೀಯರ ಹೇಳಿಕೆ ಪ್ರಕಾರ ಅಫ್ತಾಬ್ ಕೈ ಚಾಕು ಹಿಡಿದು ನಿಂತಿದ್ದ ಅಂತ ತಿಳಿದು ಬಂದಿದ್ದು, ಯುವತಿ ಕುಟುಂಬಸ್ಥರು ಮತ್ತೊಂದು ಹೆಚ್ಚುವರಿ ದೂರು ದಾಖಲಿಸಿದ್ದಾರೆ.

Share This Article