ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಾಲಯ ಜು.29 ಹಾಗೂ 30 ರಂದು ಬಂದ್ ಆಗಲಿದೆ.
ದೇವಾಲಯಕ್ಕೆ ತೆರಳುವ ಒಂದು ಕಡೆ ರಸ್ತೆ ಪಕ್ಕದ ಪ್ಯಾರಪಿಟ್ ವಾಲ್ ಕುಸಿದಿರುವ ಕಾರಣ ಲೋಕೋಪಯೋಗಿ ಇಲಾಖೆ ದುರಸ್ತಿ ಕಾರ್ಯವನ್ನು ಎರಡು ದಿನಗಳ ಕಾಲ ನಡೆಸಲಿದೆ. ಇದರಿಂದ ಬೆಟ್ಟದ ಮೇಲಿರುವ ದೇವಾಲಯ ತೆರೆಯುವುದಿಲ್ಲ. ಅಲ್ಲದೇ ಈ ಎರಡೂ ದಿನ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಪ್ರವಾಸಿಗರು ಹಾಗೂ ಭಕ್ತರಿಗೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಿಮವದ್ ಗೋಪಾಲಸ್ವಾಮಿಯ ದರ್ಶನ ಪಡೆದು, ಪ್ರಸಾದ ತಿಂದು ಹೋಗುತ್ತಿದೆ ಒಂಟಿ ಸಲಗ – ಎಲ್ಲರಿಗೂ ಅಚ್ಚರಿಯೋ ಅಚ್ಚರಿ!
ಗುಂಡ್ಲುಪೇಟೆ ಭಾಗದಲ್ಲಿ ಭಾರೀ ಮಳೆಯಾಗಿದ್ದರಿಂದ ಕಲ್ಲುಗಳು ಕುಸಿದಿದ್ದವು. ಇಲ್ಲಿ ಎರಡು ದಿನ ದುರಸ್ತಿ ಕಾರ್ಯ ಹಿನ್ನಲೆ ನಿರ್ಬಂಧ ವಿಧಿಸಿ ಚಾಮರಾಜನಗರ ಡಿಸಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಕಾಶ್ಮೀರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ಬಂದ್