ಹೈಕೋರ್ಟ್ ತೀರ್ಪಿನಿಂದ ನಿರಾಸೆ: ಒಮರ್ ಅಬ್ದುಲ್ಲಾ

Public TV
2 Min Read

ಶ್ರೀನಗರ: ಹಿಜಬ್ ಇಸ್ಲಾಂನ ಅಗತ್ಯವಾದ ಆಚರಣೆ ಅಲ್ಲ ಎಂಬ ಹೈಕೋರ್ಟ್ ತೀರ್ಪಿನಿಂದಾಗಿ ತೀವ್ರ ನಿರಾಸೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ.

ಇಂದು ಹೈಕೋರ್ಟ್‍ನ ತ್ರಿಸದಸ್ಯ ಪೀಠವು ಹಿಜಬ್ ಕುರಿತಾಗಿ ತೀರ್ಪು ಪ್ರಕಟಿಸಿದ್ದು, ಹಿಜಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆಯ ಭಾಗವಾಗಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?:
ಕರ್ನಾಟಕದ ಉಚ್ಚ ನ್ಯಾಯಾಲಯದ ತೀರ್ಪಿನಿಂದ ಬಹಳ ನಿರಾಸೆಯಾಗಿದೆ. ಹಿಜಬ್ ಬಟ್ಟೆಯು ವಸ್ತುವಾಗಿಲ್ಲ, ಇದು ಮಹಿಳೆಯ ಆಯ್ಕೆಯಾಗಿದೆ. ಇದನ್ನು ಧರಿಸಲು ಮಹಿಳೆ ಇಷ್ಟಪಡುತ್ತಾಳೆ. ಇದರಿಂದಾಗಿ ಮಹಿಳೆಯ ಹಕ್ಕಿನ ಬಗ್ಗೆ ನೀಡಿದ ತೀರ್ಪು ಇದಾಗಿದೆ. ನ್ಯಾಯಾಲಯವು ಈ ಮೂಲಭೂತ ಹಕ್ಕನ್ನು ಎತ್ತಿಹಿಡಿಯದಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉರ್ದು ಶಾಲೆಗಳು ಕಾನೂನು ಪಾಲನೆ ಮಾಡಬೇಕು: ಬಿ.ಸಿ. ನಾಗೇಶ್

ಐತಿಹಾಸಿಕ ತೀರ್ಪು?: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ. ಇದನ್ನೂ ಓದಿ: ಹಿಜಬ್ ವಿಚಾರವನ್ನ ಅನಗತ್ಯವಾಗಿ ವಿವಾದ ಮಾಡದೆ ಸ್ವಾಗತಿಸಬೇಕು: ಬಿಎಸ್‍ವೈ

Share This Article
Leave a Comment

Leave a Reply

Your email address will not be published. Required fields are marked *