ಉಡುಪಿ: ನಗರದ ಮಿಲಾಗ್ರೀಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಿಜಬ್ ಧರಿಸಲು ಅವಕಾಶ ನೀಡದ್ದಕ್ಕೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳೂ ತರಗತಿಯಿಂದ ಹೊರ ನಡೆದು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.
ನಮ್ಮ ಧರ್ಮ ಪಾಲನೆ ಮಾಡಬೇಕು ಎಂದು ಸಂವಿಧಾನದಲ್ಲೇ ಬರೆದಿದೆ. ಇದೀಗ ಶಿಕ್ಷಣ ಧರ್ಮಕ್ಕೆ ಅಡ್ಡಯಾಗುತ್ತಿದೆ. ಭಾರತದಲ್ಲಿ ಧರ್ಮ ಪಾಲಿಸಬಾರದು ಎಂದು ಹೇಳಲು ಯಾರಿಗೂ ಹಕ್ಕಿಲ್ಲ ಎಂದು ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿನಿಯರ ಪರವಾಗಿ ಮಾತನಾಡಿದ್ದಾರೆ.
ರಾಷ್ಟ್ರ ಗೀತೆಯಲ್ಲೇ ಇದೆ ಅಣ್ಣ ತಂಗಿಯಂದಿರು ಎಂದು. ಅವರು ಹೊರಗಡೆ ಹೋಗಿ ಕುಳಿತಿರುವಾಗ ನಮಗೆ ಮಾತ್ರ ಒಳಗೆ ತರಗತಿ ನಡೆಸಿದರೆ ಅದು ಸರಿಯಾ? ಹೀಗಾಗಿ ಅವರಿಗೆ ನಾವು ಬೆನ್ನೆಲುಬಾಗಿ ಸಹಾಯ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಹಿಜಬ್ ವಿವಾದ, ನನ್ನ ಆತ್ಮ ಗೌರವಕ್ಕೆ ಧಕ್ಕೆ ಉಂಟಾಗಿದ್ದರಿಂದ ಉಪನ್ಯಾಸಕಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ- ಶಿಕ್ಷಕಿ
ಅವರು ಹೇಳಿದ ತಕ್ಷಣ ಹಿಜಬ್ ತೆಗೆಯಲು ಸಾಧ್ಯವಿಲ್ಲ. ಅದು ತೆಗೆಯಬಾರದು ಎಂದು ಧರ್ಮದಲ್ಲೇ ಇದೆ. ಇದೀಗ ಹಿಜಬ್ ತೆಗಿಬೇಕು ಎಂದು ನಿಯಮ ಮಾಡಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಬಿಡದೆ ಹೊರಗೆ ಕಳುಹಿಸಿದ್ದಾರೆ. ಅವರಿಗೆ ಪರೀಕ್ಷೆ ಬರೆಯಲು ಬಿಡಲ್ಲ ಎಂದಾದರೆ ನಾವೂ ಬರೆಯಲ್ಲ ಎಂದು ವಿದ್ಯಾರ್ಥಿಗಳು ಧರಣಿ ಕೂತಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಹತ್ಯೆ ಮಾಡಲೆಂದೇ ಉಗ್ರರಿಂದ ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟ!
ನಮ್ಮ ಸ್ನೇಹಿತರಿಗೆ ಹಿಜಬ್ ಧರಿಸಿ ತರಗತಿಗೆ ಪ್ರವೇಶ ನೀಡಿದರೆ ನಾವೆಲ್ಲರೂ ಹೋಗಿ ತರಗತಿಯಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಮಿಲಾಗ್ರೀಸ್ ಕಾಲೇಜಿನ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.