ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಸೆಮಿಸ್ಟರ್ ಪರೀಕ್ಷೆಗೆ ಗೈರು

Public TV
1 Min Read

ಮಂಡ್ಯ: ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆ ಕೂಗುವ ಮೂಲಕ ವಿಶ್ವಾದ್ಯಂತ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಇಂದು ಪರೀಕ್ಷೆಗೆ ಗೈರಾಗಿದ್ದಾಳೆ.

ಹಿಜಬ್ ಸಂರ್ಘದ ವೇಳೆ ಫೆ.8 ರಂದು ಪಿಇಎಸ್ ಕಾಲೇಜಿನಲ್ಲಿ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರೆ ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಳು. ಈ ಘಟನೆ ನಡೆದ ಬಳಿಕ ಮುಸ್ಕಾನ್ ಕಾಲೇಜಿಗೆ ಆಗಮಿಸಿರಲಿಲ್ಲ. ಇದನ್ನೂ ಓದಿ:  ಅಲ್ಲಾಹು ಅಕ್ಬರ್‌ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ ತಮಿಳುನಾಡಿನಿಂದ ಪ್ರಶಸ್ತಿ ಪ್ರಕಟ

ಇಂದು ಮೈಸೂರು ವಿಶ್ವವಿದ್ಯಾಲಯದ ಎರಡನೇ ವರ್ಷದ ಬಿಕಾಂನ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದೆ. ಮುಸ್ಕಾನ್ ಕೂಡ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ಮೂರನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಿಲ್ಲ. ಅಲ್ಲದೇ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕೂಡ ತೆಗೆದುಕೊಂಡಿಲ್ಲ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಐಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

ಮುಸ್ಕಾನ್ ಪಾಸ್‍ಪೋರ್ಟ್ ಪರಿಶೀಲನೆಗೆ ತೆರಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಮುಸ್ಲಿಂ ನಾಯಕರು ಮನೆಗೆ ಬಂದು ನಗದು ಬಹುಮಾನ ಪ್ರಕಟಿಸಿದ್ದರು.

ಶಿಕ್ಷಣಕ್ಕಿಂತ ನಮಗೆ ಹಿಜಬ್ ಮುಖ್ಯ ಎಂದು ಹೇಳಿ ಈಗಾಗಲೇ ಕರ್ನಾಟಕದ ಹಲವು ಕಡೆ ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿನಿಯರು ಗೈರಾಗುತ್ತಿದ್ದಾರೆ. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್‌

 

Share This Article
Leave a Comment

Leave a Reply

Your email address will not be published. Required fields are marked *