ಬೆಂಗಳೂರು: ರಾಜ್ಯದಲ್ಲಿ ಹಿಜಬ್ ಸಂಘರ್ಷದ ನಡುವೆ ಹೈಕೋರ್ಟ್‍ನಿಂದ ಶಾಲೆಗಳನ್ನು ಆರಂಭಿಸಲು ಆದೇಶ ಬಂದ ಹಿನ್ನೆಲೆ ಸೋಮವಾರದಿಂದ ಹತ್ತನೇ ತರಗತಿ ವರೆಗೆ ಎಲ್ಲಾ ಶಾಲೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ.
ಶಕ್ತಿ ಭವನದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಶಾಲೆಗಳ ಡ್ರೆಸ್ ಕೋಡ್ ವಿವಾದ ಶುರುವಾಗಿತ್ತು. ಬಳಿಕ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ನ್ಯಾಯಾಲಯ ನೀಡಿರುವ ಸೂಚನೆಯನ್ನು ಸರ್ಕಾರ ಗೌರವಿಸುತ್ತದೆ. ಮೊದಲ ಹಂತವಾಗಿ 10ನೇ ತರಗತಿ ವರೆಗೆ ಶಾಲೆಗಳನ್ನು ಸೋಮವಾರದಿಂದ ಆರಂಭಿಸುತ್ತಿದ್ದೇವೆ ಎಂದರು. ಇದನ್ನೂ ಓದಿ: ಹಿಜಬ್ ನಮ್ಮ ಕುಟುಂಬದ ವಿವಾದ ಪಾಕಿಸ್ತಾನ ತಲೆಹಾಕಬಾರದು: ಫಾತಿಮಾ ಹುಸೇನ್ ಆಕ್ರೋಶ
ಶಾಲಾ ಮಕ್ಕಳು ಸಂಯಮದಿಂದ ವರ್ತಿಸುತ್ತಿದ್ದಾರೆ ಅವರಿಗೆ ಪ್ರೀತಿಯ ಅಭಿನಂದನೆ ಸಲ್ಲಿಸುತ್ತೇನೆ. ಮೊದಲ ಹಂತದಲ್ಲಿ ಹತ್ತನೇ ತರಗತಿವರೆಗೆ ಆರಂಭದ ಬಳಿಕ ಎರಡನೇ ಹಂತದಲ್ಲಿ ಪಿಯುಸಿ ಮತ್ತು ಡಿಗ್ರಿ ಕಾಲೇಜ್‍ಗಳನ್ನು ಆರಂಭಿಸುತ್ತೇವೆ. ನಾಳೆ ಸಂಜೆ ಸಚಿವರ ಜೊತೆ ಸೇರಿ ವೀಡಿಯೋ ಕಾನ್ಫರೆನ್ಸ್ ಮಾಡುತ್ತೇನೆ ನಂತರ ಕಾಲೇಜುಗಳ ಆರಂಭದ ಬಗ್ಗೆ ಪ್ರಕಟಣೆ ಹೊರಡಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಶಿಕ್ಷಣ ಕೊಡಿ ಅಂದ್ರೆ ಮಂತ್ರಿ ಮಗನೇ ಕೇಸರಿ ಶಾಲು ಹಂಚಲು ಹೋಗಿದ್ದಾರೆ: ರೇವಣ್ಣ ಟೀಕೆ
ಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಗೃಹ ಸಚಿವ ಆರಗ ಜ್ಞಾನೇಂದ್ರ, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಅಡ್ವೋಕೆಟ್ ಜನರಲ್ ಪ್ರಬುಲಿಂಗ ನಾವಡಗಿ ಭಾಗವಹಿಸಿದ್ದರು.