ತಲೆ ಮೇಲೆ ಯಾರು ಏನನ್ನೇ ಹಾಕೊಂಡು ಬರಲಿ, ನಾವು ಪ್ರಶ್ನಿಸಲ್ಲ: ಬಿಹಾರ್‌ ಸಿಎಂ

By
1 Min Read

ಪಾಟ್ನ: ಬಿಹಾರ್‌ನಲ್ಲಿ ಹಿಜಬ್‌ ವಿವಾದ ಇಲ್ಲ. ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ತಿಳಿಸಿದ್ದಾರೆ.

ತರಗತಿಗಳಲ್ಲಿ ಯಾರೇ ಆಗಲಿ ತಲೆಯ ಮೇಲೆ ಏನನ್ನಾದರೂ ಹಾಕಿಕೊಂಡರೂ ಅದನ್ನು ಪ್ರಶ್ನಿಸುವ ಅಗತ್ಯವಿಲ್ಲ ಎಂದು ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರಿಗೆ ಸಿಎಂ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್ ಹಾಕಿದ್ರೆ ಸೇಫ್ಟಿ ಅಲ್ವಾ ಅದ್ಕೆ ಹಿಜಬ್ ಹಾಕಿದ್ರೆ ಸೇಫ್ಟಿ ಅಂದಿದ್ದು: ಜಮೀರ್ ಸಮರ್ಥನೆ

ಹಿಜಬ್‌ ವಿವಾದ ಬಿಹಾರದ ವಿಷಯವಲ್ಲ. ನಾವು ಅಂತಹ ವಿಷಯಗಳ ಬಗ್ಗೆ ಗಮನಹರಿಸಬಾರದು. ಇದು ನಿಷ್ಪ್ರಯೋಜಕ ಎಂದು ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಬಿಹಾರದ ಶಾಲೆಗಳಲ್ಲಿ ಮಕ್ಕಳು ಬಹುತೇಕ ಒಂದೇ ರೀತಿಯ ಉಡುಗೆಯನ್ನು ಧರಿಸುತ್ತಾರೆ. ಯಾರಾದರೂ ತಲೆಗೆ ಏನಾದರೂ ಹಾಕಿಕೊಂಡರೆ ಅದಕ್ಕೆ ಕಾಮೆಂಟ್‌ ಮಾಡುವ ಅಗತ್ಯವಿಲ್ಲ. ಅಂತಹ ವಿಷಯಗಳಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ನಾವು ಪರಸ್ಪರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಇವರ ಒತ್ತಡಕ್ಕೆ ಮಣಿಯುತ್ತಾ ಹೋದ್ರೆ ದೇಶವನ್ನೇ ತುಂಡರಿಸುತ್ತಾರೆ – ಖಾದರ್ ವಿರುದ್ಧ ಸಿಂಹ ಕಿಡಿ

ಕರ್ನಾಟಕದ ಉಡುಪಿಯಲ್ಲಿ ಭುಗಿಲೆದ್ದ ಹಿಜಬ್‌ ವಿವಾದ ಈಗ ಇಡೀ ವಿಶ್ವದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ, ಪಾಕಿಸ್ತಾನದಲ್ಲೂ ಹಿಜಬ್‌ ವಿವಾದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಅಂತೆಯೇ ದೇಶದ ಅನೇಕ ರಾಜ್ಯಗಳ ರಾಜಕೀಯ ನಾಯಕರು ಹಿಜಬ್‌ ವಿವಾದ ಕುರಿತು ಪ್ರತಿಕ್ರಿಯಿಸುತ್ತಿದ್ದಾರೆ. ಇದನ್ನೂ ಓದಿ: ಧರ್ಮ ಮುಖ್ಯ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ ಶಿವಮೊಗ್ಗ ವಿದ್ಯಾರ್ಥಿನಿಯರು

Share This Article
Leave a Comment

Leave a Reply

Your email address will not be published. Required fields are marked *