ಹಿಜಬ್ ಪರಿಸ್ಥಿತಿ ಬಿಗಡಾಯಿಸಲು ಕಾಂಗ್ರೆಸ್ ನಾಯಕರು ಕಾರಣ: ಬಿಸಿ ನಾಗೇಶ್

Public TV
3 Min Read

ಬೆಂಗಳೂರು: ಕಾಂಗ್ರೆಸ್‍ನ ಹಲವು ನಾಯಕರು ಪ್ರಚೋದನೆ ಮಾಡಿದ ಬಳಿಕ ಹಿಜಬ್ (Hijab) ಪರಿಸ್ಥಿತಿ ಬಿಗಡಾಯಿಸಿದೆ. ಆರಂಭದಲ್ಲಿ ಯಾವುದೇ ರಾಜಕೀಯ ಪಕ್ಷ ಇದರಲ್ಲಿ ಇರಲಿಲ್ಲ. ನಂತರ ಕೆಲವು ರಾಜಕೀಯಪಕ್ಷಗಳು ನುಸುಳಿ ಇದನ್ನು ಈ ಹಂತಕ್ಕೆ ತಂದಿವೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಕಿಡಿಕಾರಿದ್ದಾರೆ.

ಹಿಜಬ್ ವಿವಾದದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪಿನ ಬಳಿಕ ಸರ್ಕಾರ ಮುಂದೆ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೆ. ಅಲ್ಲಿಯವರೆಗೆ ಈಗಿನ ನಿಯಮಾವಳಿಯಂತೆ ಶಾಲೆಗೆ ಬನ್ನಿ. ಈಗಿನ ನಿಯಮ ಪಾಲಿಸಿ. ದಯವಿಟ್ಟು ಶಾಲೆಗೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್

ಹೈಕೋರ್ಟ್‍ನಿಂದ ತೀರ್ಪು ಬರಬಹುದು ಅನ್ನೋ ನಿರೀಕ್ಷೆ ಇತ್ತು. ಅದು ವಿಸ್ತೃತ ಪೀಠಕ್ಕೆ ವರ್ಗಾವಣೆ ಆಗಿದೆ. ಯಾವುದೇ ಮಧ್ಯಂತರ ಆದೇಶವೂ ಆಗಿಲ್ಲ. ಸರ್ಕಾರದ ಸುತ್ತೋಲೆ ಈಗಲೂ ಚಾಲೂ ಇದೆ. ಶಾಲೆಗೆ ಮಕ್ಕಳು ಬರುವ ಸಂದರ್ಭದಲ್ಲಿ 1995ರ ರೂಲ್ಸ್ ಅನುಸಾರ ಎಲ್ಲ ಮಕ್ಕಳು ಫಾಲೋ ಮಾಡಬೇಕು. ಶಾಂತಿ ಕಾಪಾಡಬೇಕು. ಏಪ್ರಿಲ್‍ನಲ್ಲಿ ಆರಂಭವಾಗುವ ಪರೀಕ್ಷೆಗೆ ಮಕ್ಕಳು ಸಿದ್ಧರಾಗಬೇಕು ಎಂದರು.

ರಜೆ ಮುಂದುವರಿಸುವ ಬಗ್ಗೆ ಇವತ್ತು ನಿರ್ಣಯ ತಗೆದುಕೊಳ್ಳಲ್ಲ. ಸಿಎಂ ಹಾಗೂ ಗೃಹ ಸಚಿವರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ. ಆರು ಮಕ್ಕಳ ಸಣ್ಣ ವಿಷಯವನ್ನು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋಗಿ ಇಷ್ಡು ದೊಡ್ಡದು ಮಾಡಿದ್ದಾರೆ. ಪಾಪ ಮಕ್ಕಳು ಯಾರದ್ದೋ ಪ್ರಚೋದನೆಗೆ ಒಳಗಾಗಿ ಶಾಲೆ ಬಾಯ್ಕಾಟ್ ಮಾಡುವ ನಿರ್ಣಯ ತೆಗೆದುಕೊಂಡಿದ್ದಾರೆ. ಈ ಘಟನೆಯನ್ನು ಬಳಕೆ ಮಾಡಿಕೊಂಡು ಕೆಲ ಸಂಘಟನೆಗಳು ಕುಮ್ಮಕ್ಕು ಕೊಟ್ಟವು. ಕೆಲ ರಾಜಕೀಯ ಪಕ್ಷಗಳು ಇದನ್ನೂ ಬಳಸಿಕೊಂಡವು. ರಾಜ್ಯದ ಪರಿಸ್ಥಿತಿ ಗೃಹ ಸಚಿವರಿಗೆ ಸಿಗುತ್ತದೆ ಹೀಗಾಗಿ ಅವರ ಜೊತೆ ಚರ್ಚೆ ಮಾಡ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು ಭಯ ಯಾಕೆ ಪಡಬೇಕು, ಧರ್ಮ ಪಾಲನೆ ಮಾಡಿದ್ದೇನೆ: ಮಂಡ್ಯ ವಿದ್ಯಾರ್ಥಿನಿ

ನಾಳೆ, ಶುಕ್ರವಾರ ಎಕ್ಸಾಂ ಮಾಡಬೇಡಿ ಅಂತಾರೆ. ಕುರಾನ್ ಪ್ರಕಾರ ಕೆಲ ಸಬ್ಜೆಕ್ಟ್ ಇರಬಾರದು ಅಂತಾರೆ. ಹಾಗೆ ಮಾಡೋದಕ್ಕೆ ಸಾಧ್ಯಾನಾ? ಸರ್ಕಾರ ಇರೋದು ಸಂವಿಧಾನದ ಪ್ರಕಾರ ಆಡಳಿತ ನಡೆಸುವುದಕ್ಕೆ. ಕೋರ್ಟ್ ಏನು ನಿರ್ಣಯ ತೆಗೆದುಕೊಳ್ಳುತ್ತದೋ ಆ ಪ್ರಕಾರ ಸರ್ಕಾರ ನಡೆದುಕೊಳ್ಳುತ್ತದೆ. ಡಿಸೆಂಬರ್‍ನಿಂದ ಇದು ಶುರುವಾಗಿದೆ, ಬೇಕಾದಷ್ಡು ಸಲ ಸ್ಪಷ್ಟನೆ ಕೊಟ್ಟಿದ್ದೀನಿ. ಮೊದಲು ಇದು ಆರು ಮಕ್ಕಳ ಸಮಸ್ಯೆ ಮಾತ್ರ ಆಗಿತ್ತು. ಸಮಾಜದ ಮುಖಂಡರು ಸೇರಿ ಆರು ಮಕ್ಕಳ ಜೊತೆ ಚರ್ಚೆ ಮಾಡಿ ಬಗೆಹರಿಸಲು ಮುಂದಾಗಿದ್ದರು. ಆದರೆ ಕೆಲವು ರಾಜಕೀಯ ಪಕ್ಷಗಳು ಎಂಟ್ರಿ ಆದಾಗ ಇದು ರಾಜ್ಯದ ಬೇರೆ ಬೇರೆ ಭಾಗಕ್ಕೆ ಹರಡಿತು. ಅಲ್ಲಿ ತನಕ ಕೇಸರಿ ಶಾಲೂ ಬಂದಿರಲಿಲ್ಲ, ನೀಲಿ ಶಾಲೂ ಬಂದಿರಲಿಲ್ಲ. ರಾಜಕೀಯ ಪಕ್ಷಗಳ ನಾಯಕರು ಬಂದ ಮೇಲೆ ಹಿಜಬ್ ಕೇಸರಿ ಸಂಘರ್ಷ ನಡೆದಿತ್ತು. ಯಾರು ಜವಾಬ್ದಾರಿ ಯುತ ಸ್ಥಾನದಲ್ಲಿ ಇದ್ದಾರೋ ಅವರೇ ಮೂಲಭೂತ ಹಕ್ಕು ಅಂತ ಹೇಳಿದರು. ಅನೇಕ ಕಾಂಗ್ರೆಸ್ ನಾಯಕರು ಈ ವಿಚಾರ ಮಾತನಾಡಿದಾಗ ಇದು ರಾಜ್ಯಕ್ಕೆ ಹಬ್ಬಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಾನು ಸ್ಪಷ್ಟವಾಗಿ ಹೇಳ್ತಿದ್ದೀನಿ:
ಫೆಬ್ರವರಿ 1ರ ತನಕ ಯಾವುದೇ ರಾಜಕೀಯ ವಾಸನೆ ಇದರಲ್ಲಿ ಇರಲಿಲ್ಲ. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹೇಳಿದಾಗಲೇ ಇದು ರಾಜಕೀಯ ವಾಸನೆ ಕಾಣಿಸಿದೆ. ನಮ್ಮ ಯಾವುದೇ ಮಂತ್ರಿಗಳು ಸಿದ್ದರಾಮಯ್ಯ ಹೇಳಿಕೆ ಕೊಡುವ ಮೊದಲು ಹೇಳಿಕೆ ಕೊಟ್ಟಿಲ್ಲ. ಸಿದ್ದರಾಮಯ್ಯ ರಿಯಾಕ್ಷನ್‍ಗೆ ನಮ್ಮ ಮಂತ್ರಿಗಳು ರಿಯಾಕ್ಷನ್ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ, ರಾಹುಲ್ ಗಾಂಧಿ, ರಮ್ಯಾ, ಪ್ರಿಯಾಂಕಾ – ಇದೆಲ್ಲವೂ ಭಾರತ ವಿರೋಧಿ ಟೂಲ್ ಕಿಟ್ ಗ್ಯಾಂಗ್

Share This Article
Leave a Comment

Leave a Reply

Your email address will not be published. Required fields are marked *