ಹಿಜಬ್ ವಿವಾದ: ಕೊಡಗಿನ ವಿವಿಧ ಪದವಿ ಕಾಲೇಜಿನ 94 ವಿದ್ಯಾರ್ಥಿನಿಯರು ಗೈರು

Public TV
1 Min Read

ಮಡಿಕೇರಿ: ಜಿಲ್ಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳು ಪುನಾರಂಭಗೊಂಡಿದ್ದರೂ, ಹಿಜಬ್‍ಗಾಗಿ ಹೋರಾಟ ನಡೆಸುತ್ತಿರುವ ವಿವಿಧ ಪದವಿ ಪೂರ್ವ ಕಾಲೇಜಿನ 94 ವಿದ್ಯಾರ್ಥಿನಿಯರು ಕಾಲೇಜಿಗೆ ಗೈರಾಗಿದ್ದಾರೆ.

ರಾಜ್ಯದಲ್ಲಿ ಹಿಜಬ್ ಕೇಸರಿ ಸಂಘರ್ಷ ನಡೆಯುತ್ತಿದ್ದು, ಕೋರ್ಟ್‌ ಆದೇಶಕ್ಕಾಗಿ ಪೋಷಕರು ಪ್ರತಿದಿನ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಹಿಜಬ್ ಧರಸಿಯೇ ಕಾಲೇಜುಗಳಿಗೆ ಬರುತ್ತೇವೆ, ಇಲ್ಲ ಕಾಲೇಜಿನ ಗೇಟಿನ ಮುಂದೆಯೇ ಮೌನ ಪ್ರತಿಭಟನೆ ಮಾಡುತ್ತೇವೆ ಎಂದು ಕೊಡಗು ಜಿಲ್ಲೆಯ ವಿವಿಧ ಕಾಲೇಜು ಆವರಣದಲ್ಲಿ ಇಂದಿಗೂ ವಿದ್ಯಾರ್ಥಿನಿಯರು ಹೈಡ್ರಾಮ ನಡೆಸುತ್ತಿದ್ದಾರೆ.

ತರಗತಿಗೆ ಒಳಗೆ ಬರದೆ ಇದ್ದರೂ ಹಾಜರಾತಿ ಕೊಡಬೇಕು. ಆನ್‍ಲೈನ್ ಶಿಕ್ಷಣದ ಅವಶ್ಯಕತೆ ನಮಗಿಲ್ಲ. ಕಾಲೇಜಿಗೆ ನಾವು ಶುಲ್ಕ ಕಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಪರೀಕ್ಷೆ ಆರಂಭವಾದರೂ ಗೇಟಿನ ಮುಂಭಾಗದಲ್ಲೇ ಪರೀಕ್ಷೆ ಪತ್ರಿಕೆಯನ್ನು ನೀಡಿ. ಇಲ್ಲೇ ಬರೆದು ಹೋಗುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಹಿಜಬ್ ಇಲ್ಲದೇ ತರಗತಿ ಒಳಗೆ ಹೋಗುವುದಿಲ್ಲ ಎಂದು ಕಾಲೇಜುಗಳ ಮುಂಭಾಗದಲ್ಲಿ ಇರುವ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ:  ಜಮೀನು ಮಾರಿ ಹಣ ಜೊತೆ ಎಸ್ಕೇಪ್ ಆಗಿದ್ದ ಮಗನಿಗಾಗಿ ತಾಯಿ ಹುಡಕಾಟ!

ಈ ರೀತಿಯಲ್ಲಿ ಕೊಡಗು ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಹಿಜಬ್‍ಗೆ ವಿದ್ಯಾರ್ಥಿನಿಯರು ಪಟ್ಟು ಹಿಡಿದ ಪರಿಣಾಮ ಜಿಲ್ಲೆಯ ಒಟ್ಟು 94 ವಿದ್ಯಾರ್ಥಿನಿಯರು ತರಗತಿಗಳಿಗೆ ಗೈರು ಆಗುತ್ತಿದ್ದಾರೆ. ಜಿಲ್ಲೆಯ ನೆಲ್ಯಹುದಿಕೇರಿ ಪದವಿ ಕಾಲೇಜಿನಲ್ಲಿ 34, ಸುಂಟಿಕೊಪ್ಪ ಕಾಲೇಜಿನಲ್ಲಿ 10, ಕೂಡಿಗೆ ಪದವಿ ಕಾಲೇಜಿನಲ್ಲಿ 10, ಮಡಿಕೇರಿ ಪದವಿ ಕಾಲೇಜಿನಲ್ಲಿ 20, ಶನಿವಾರಸಂತೆ ಪದವಿ ಕಾಲೇಜಿನಲ್ಲಿ 10 ಹಾಗೂ ಸದಾಶಿವ ಸ್ವಾಮಿ ಪದವಿ ಕಾಲೇಜು ಕಿರಿಕೊಡ್ಲಿ 10 ವಿದ್ಯಾರ್ಥಿನಿಯರು ಹಿಜಬ್ ಸಂಘರ್ಷ ಆರಂಭವಾದ ಬಳಿಕ ಕಾಲೇಜಿಗೆ ಗೈರು ಆಗುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದ ಎಷ್ಟೇ ಮನವರಿಕೆ ಮಾಡಿದರೂ ವಿದ್ಯಾರ್ಥಿನಿಯರು ಮತ್ತು ಪೋಷಕರು ಧರ್ಮವೇ ಹೆಚ್ಚು ಎಂದು ಹೇಳಿ ತರಗತಿಗೆ ಗೈರಾಗುತ್ತಿದ್ದಾರೆ ಎಂದು ಪಿಯು ಉಪನಿರ್ದೇಶಕ ಪುಟ್ಟರಾಜು ತಿಳಿಸಿದ್ದಾರೆ. ಇದನ್ನೂ ಓದಿ: ಸಿಂಪಲ್ಲಾಗೊಂದ್ ಲವ್ ಸ್ಟೋರಿಯಲ್ಲಿ ನಟಿಸಿದ್ದ ಆರ್.ಜೆ ರಚನಾ

Share This Article
Leave a Comment

Leave a Reply

Your email address will not be published. Required fields are marked *