ಶೈಕ್ಷಣಿಕ ಕೇಂದ್ರದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಕ್ರಮ: ಆರಗ ಜ್ಞಾನೇಂದ್ರ

Public TV
1 Min Read

ಬೆಂಗಳೂರು: ಶೈಕ್ಷಣಿಕ ಕೇಂದ್ರಗಳಲ್ಲಿ ಅಶಾಂತಿ ವಾತಾವರಣಕ್ಕೆ ಕಾರಣರಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್-ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಪ್ರತಿಕ್ರಿಯಿಸಿ ಶಾಲಾ ಕಾಲೇಜುಗಳು ರಾಷ್ಟ್ರದ ಭಾವೈಕ್ಯತೆಯ ಕೇಂದ್ರ ಬಿಂದುಗಳು. ರಾಷ್ಟ್ರ ಆಸ್ತಿಯಾಗಬೇಕಾದ ವಿದ್ಯಾರ್ಥಿಗಳು ಮತೀಯ ಶಕ್ತಿಗಳ ಕೈಯಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ಅಸ್ತ್ರಗಳಾಗದಂತೆ ಪೋಷಕರು ಎಚ್ಚರ ವಹಿಸಬೇಕು. ಶೈಕ್ಷಣಿಕ ಕೇಂದ್ರಗಳು, ವಿದ್ಯೆ ಕಲಿಯುವ ಹಾಗೂ ಬೋಧನೆಯ ದೇಗುಲಗಳಾಗಿಯೇ ಉಳಿಯಬೇಕು ಎಂದು ಎಚ್ಚರಿಕೆ ನೀಡಿದರು.

ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ಯೋಚಿಸಬೇಕು. ಕಳೆದ 2 ವರ್ಷಗಳಿಂದ ಶೈಕ್ಷಣಿಕ ಅವಧಿ ಹಾಳಾಗಿದೆ. ಆದರೆ ಈ ಬಾರಿ ಬಹಳ ಚೆನ್ನಾಗಿ ತರಗತಿಗಳು ಆರಂಭವಾಗಿದೆ. ಇದರ ಸದುಪಯಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಕೇಸರಿ ಪೇಟ, ಕೇಸರಿ ಶಾಲಿನೊಂದಿಗೆ ಕಾಲೇಜಿಗೆ ಬಂದ ಎಂಜಿಎಂ ವಿದ್ಯಾರ್ಥಿಗಳು!

ಸಮವಸ್ತ್ರ ಎಂದರೆ ನಮ್ಮ ಸಮಾನತೆಯ ಸಂಕೇತವಾಗಿದೆ. ಧರ್ಮವನ್ನು ಆಚರಿಸುವುದು ವೇಷ ಭೂಷಣವನ್ನು ಪ್ರದರ್ಶಿಸಲು ಅಲ್ಲ. ಪಾಲಕರು ಮಕ್ಕಳಿಗೆ ಬುದ್ಧಿ ಹೇಳಿ ಶಾಂತಿಯುತವಾಗಿ ಕಾಲೇಜು ನಡೆಯುವ ಹಾಗೇ ಸಹಕರಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಧಮ್ ಇದ್ರೆ ಮಸೀದಿಗೆ ಮುಸ್ಲಿಂ ಮಹಿಳೆಗೆ ಪ್ರವೇಶ ಕೊಡಿಸಿ- ಶಾಸಕಿಗೆ ಈಶ್ವರಪ್ಪ ಸವಾಲು

Share This Article
Leave a Comment

Leave a Reply

Your email address will not be published. Required fields are marked *