ಬಿಗ್ ಬಾಸ್ ಮನೆಯಲ್ಲಿ ಹೈಡ್ರಾಮಾ: ಸಂಗೀತಾ ವಾಪಸ್ಸು

Public TV
1 Min Read

ಚಾರ್ಲಿ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ (Sangeeta) ನಿನ್ನೆ ಸ್ವತಃ ಬಿಗ್ ಬಾಸ್ (Bigg Boss Kannada) ಗೆ ಶಾಕ್ ನೀಡಿದ್ದರು. ಬ್ರಹ್ಮಾಂಡ ಗುರೂಜಿಗಾಗಿ ತೆರೆದಿದ್ದ ಬಾಗಿಲುನ್ನು ಕ್ರಾಸ್ ಮಾಡಿ, ತಾವೂ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಹಠ ಹಿಡಿದಿದ್ದರು. ಅವರ ಈ ನಡೆ ಭಾರೀ ಹೈಡ್ರಾಮಾಗೆ ಸಾಕ್ಷಿಯಾಗಿತ್ತು.

ತನ್ನ ಸ್ನೇಹಿತರಿಂದ ದೂರವಾಗಿ ವಿನಯ್ ತಂಡ ಸೇರಿಕೊಂಡಿದ್ದ ಸಂಗೀತಾ, ಕಾರ್ತಿಕ್‌ ತಲೆಬೋಳಿಸಿಕೊಳ್ಳುವ ಸವಾಲ್‌ ಹಾಕಿದ್ದರು. ಅದರಂತೆ ಕಾರ್ತಿಕ್ ಮತ್ತು ತುಕಾಲಿ ತಲೆ ಬೋಳಿಸಿಕೊಂಡಿದ್ದರು.  ಹಾಗೆಯೇ ತನಿಷಾ ಮೆಣಸಿನಕಾಯಿ ಮತ್ತು ವರ್ತೂರು ಸಂತೋಷ್ ಗೆ  ತಿನ್ನಲೂ ಕಾರಣರಾಗಿದ್ದರು. ಈ ಎರಡು ಘಟನೆಗಳು ಸಂಗೀತಾರನ್ನು ಕಾಡಲು ಶುರು ಮಾಡಿದ್ದವು.

ಸ್ನೇಹಿತರ ನೋವಿಗೆ ಕಾರಣರಾದ ಬಗ್ಗೆ ಅವರಲ್ಲಿ ಪಶ್ಚಾತ್ತಾಪ ಹುಟ್ಟಿತ್ತು.  ಅದೇ ಅವರು ಮನೆಯಿಂದ ಹೊರಬರಲೂ ಪ್ರೇರೇಪಿಸುತ್ತಿತ್ತು. ‘ನಾನು ನಾನಲ್ದೆ, ಬೇರೆ ಯಾರೋ ಆಗ್ತಿದೀನಿ ಅನಿಸ್ತಿದೆ’ ಎಂದು ನಿನ್ನೆ ಸಂಗೀತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಲೆಯೊಳಗೆ ಪ್ರೆಷರ್ ಜಾಸ್ತಿ ಆಗ್ತಿದೆ ಎಂದು ಫ್ರೆಸ್ಟ್ರೇಟ್ ಆಗಿದ್ದಾರೆ. ಅವರನ್ನು ಸಮಾಧಾನ ಮಾಡಲು ಬಂದ ಕಾರ್ತಿಕ್‌ಗೆ ಕೈ ಮುಗಿದಿದ್ದಾರೆ.  ‘ನಿಮಗೆ ಬೇಕಾದಾಗ ಜಗಳ ಆಡ್ತೀರಾ. ಬೇಕಾದಾಗ ಸಮಾಧಾನ ಮಾಡ್ತೀರಾ?’ ಎಂದು ಕಾರ್ತಿಕ್ ಅವರನ್ನು ಕುಟುಕಿದ್ದಾರೆ. ಅದನ್ನು ಕೇಳಿ ಸಂಗೀತಾ ಬಳಿಯಿಂದ ಕಾರ್ತಿಕ್ ಎದ್ದು ಹೋಗಿದ್ದರು.

 

‘ನನಗೆ ಈ ಗೇಮ್ ಆಡಲು ಇಷ್ಟವಿಲ್ಲ’ ಎಂದು ಸಂಗೀತಾ ಬಿಗ್‌ಬಾಸ್ ಬಳಿಯಲ್ಲಿ ಬಿಕ್ಕಿ ಬಿಕ್ಕಿ ವಿನಂತಿಸಿಕೊಂಡಿದ್ದರು.  ಎರಡು ದಿನದ ಮಟ್ಟಿಗೆ ಬಿಗ್ ಬಾಸ್ ಮನೆಗೆ ಬಂದಿದ್ದ ಬ್ರಹ್ಮಾಂಡ ಗುರೂಜಿಗಾಗಿ ದೊಡ್ಮನೆ ಬಾಗಿಲು ತೆರೆದಾಗ, ಬಾಗಿನಿಂದ ಓಡುವ ಪ್ರಯತ್ನ ಮಾಡಿದರು. ಆದರೆ, ಮನೆಯವರೆಲ್ಲ ಸೇರಿ, ಆಕೆಯನ್ನು ಸಮಾಧಾನಿಸಿ ಮತ್ತೆ ಮನೆಯಲ್ಲಿ ಉಳಿಯುವಂತೆ ಮಾಡಿದ್ದಾರೆ.

Share This Article