12 ದಿನಗಳ ಹಿಂದೆ ರೈಲಿನಲ್ಲಿ ನಾಪತ್ತೆಯಾಗಿದ್ದ ಹೈಕೋರ್ಟ್‌ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆ!

Public TV
1 Min Read

ಲಕ್ನೋ: 12 ದಿನಗಳ ಹಿಂದೆ ಮಧ್ಯಪ್ರದೇಶದ ರೈಲಿನಿಂದ ನಾಪತ್ತೆಯಾಗಿದ್ದ ಮಹಿಳಾ ತರಬೇತಿ ವಕೀಲೆ ಅರ್ಚನಾ ತಿವಾರಿ (Archana Tiwari) ಉತ್ತರ ಪ್ರದೇಶದ ಲಿಂಖಿಂಪುರ ಖೇರಿ ನಗರದಲ್ಲಿ (Lakhimpur Kheri City) ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೋಪಾಲ್‌ನ (Bhopal) ಸರ್ಕಾರಿ ರೈಲ್ವೆ ಪೊಲೀಸರು (GRP) ಅರ್ಚನಾರನ್ನ ನೇಪಾಳ ಗಡಿಯಲ್ಲಿ ಪತ್ತೆಹಚ್ಚಿದ್ದು, ಭೋಪಾಲ್‌ಗೆ ಕರೆದೊಯ್ದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ `ಆನ್‌ಲೈನ್ ಗೇಮಿಂಗ್ ತಡೆ’ ಮಸೂದೆಗೆ ಅನುಮೋದನೆ

ರಕ್ಷಾಬಂಧನ ಹಬ್ಬಕ್ಕಾಗಿ ಇದೇ ಆಗಸ್ಟ್‌ 7-8ರ ತಡರಾತ್ರಿ ಅರ್ಚನಾ ಇಂದೋರ್‌ನಿಂದ ಕಟ್ನೆಗೆ ರೈಲಿನಲ್ಲಿ ಹೊರಟಿದ್ದರು. ಆದ್ರೆ ತಮ್ಮ ನಿಗದಿತ ಸ್ಥಾನ ತಲುಪದಿದ್ದಾಗ ನಾಪತ್ತೆಯಾಗಿರುವುದು ಗೊತ್ತಾಯಿತು. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ

ವಿಚಾರಣೆ ಬಳಿಕ ಹೊರ ಬರಬೇಕಿದೆ ಸತ್ಯ
ಕಳೆದ 12 ದಿನಗಳಿಂದ ಹುಡುಕಾಟ ನಡೆಸುತ್ತಿದ್ದ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಸಿಬ್ಬಂದಿ ಕೊನೆಗೂ ಅರ್ಚನಾರನ್ನ ಭಾರತ-ನೇಪಾಳ ಗಡಿಯಲ್ಲಿ ಪತ್ತೆಹಚ್ಚಿದ್ದಾರೆ ಎಂದು ರೈಲ್ವೆ ಎಸ್ಪಿ ರಾಹುಲ್ ಕುಮಾರ್ ಲೋಧಾ ಹೇಳಿದ್ದಾರೆ. ಪೊಲೀಸರು ಅರ್ಚನಾರನ್ನ ಭೋಪಾಲ್‌ಗೆ ಕರೆತರುತ್ತಿದ್ದು, ಹೇಳಿಕೆ ದಾಖಲಿಸಿದ ಬಳಿಕವೇ ಇಡೀ ಘಟನಾ ವಿವರ ತಿಳಿಯಲಿದೆ ಎಂದು ತಿಳಿಸಿದ್ದಾರೆ.

ರಕ್ಷಣಾ ಬಂಧನ ಹಬ್ಬಕ್ಕೆ ನರ್ಮದಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟಿದ್ದ ಅರ್ಚನಾ ಇಂದೊರ್‌ನಿಂದ ಹೊರಟಿದ್ದರು, ಕೊನೆಯದಾಗಿ ಇಟಾರ್ಸಿ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹಾಗಾಗಿ ಸಂಪರ್ಕ ಸಾಧ್ಯವಾಗಿರಲಿಲ್ಲ.

ಅರ್ಚನಾ ತಿವಾರಿ ತಿವಾರಿ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠದಲ್ಲಿ ಅಭ್ಯಾಸ ವಕೀಲರಾಗಿದ್ದರು. ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಇದನ್ನೂ ಓದಿ: ರೈಲಿಗೂ ಲಗೇಜ್ ಪಾಲಿಸಿ – ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?

Share This Article