ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ (Gold Smuggling) ಕೇಸ್‌ನಲ್ಲಿ ಕಾಫಿಪೋಸಾ (Coffeeposa) ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಮತ್ತೆ ಶಾಕ್ ನೀಡಿದೆ.
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಡಿಆರ್‌ಐ ಅಧಿಕಾರಿಗಳು (DRI Officers) ನಟಿ ರನ್ಯಾ ರಾವ್‌ಅನ್ನು ಬಂಧಿಸಿದ್ದರು. ಬಳಿಕ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಅದಾದ ನಂತರ ಡಿಆರ್‌ಐ ರನ್ಯಾ ರಾವ್ ಜಾಮೀನು ಪಡೆಯದಂತೆ ಕಾಫಿಪೋಸಾ ಕಾಯ್ದೆಯನ್ನು ವಿಧಿಸಿತ್ತು. ಇದರಿಂದಾಗಿ ಒಂದು ವರ್ಷ ಜೈಲಿನಲ್ಲಿಯೇ ಇರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಈ ಹಿನ್ನೆಲೆ ರನ್ಯಾ ಕಾಫಿಪೋಸಾ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು (ಡಿ.19) ವಿಚಾರಣೆ ನಡೆಸಿದ ಹೈಕೋರ್ಟ್ (High Court) ಅರ್ಜಿಯನ್ನು ವಜಾಗೊಳಿಸಿದೆ.
ರನ್ಯಾರಾವ್ ಜೊತೆಗೆ ಇನ್ನೂ 4 ಆರೋಪಿಗಳಿಗೂ ಇದೇ ಆದೇಶ ಅನ್ವಯ ಆಗುತ್ತಿದ್ದು, ಎಲ್ಲಾ ಆರೋಪಿಗಳು ಇನ್ನೂ ಒಂದು ವರ್ಷ ಜೈಲಿನಲ್ಲಿಯೇ ಇರಬೇಕಾದ ಪರಿಸ್ಥಿತಿಯಿದೆ. ಇನ್ನೂ ಡಿಆರ್‌ಐ ಈಗಾಗಲೇ ರನ್ಯಾ ರಾವ್‌ಗೆ ಸಂಬಂಧಿಸಿದ 102 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

