ಈಗಲೂ ಸಮಯವಿದೆ ಹಿಂದೆ ಸರಿದುಬಿಡಿ – ಲೆಬನಾನ್‌ಗೆ ಇಸ್ರೇಲ್‌ ಪ್ರಧಾನಿ ಎಚ್ಚರಿಕೆ

Public TV
2 Min Read

– ಇಸ್ರೇಲ್‌ ಯುದ್ಧವನ್ನು ಕೊನೆಗೊಳಿಸಲು ನಿರ್ಧರಿಸಿದೆ

ಟೆಲ್‌ ಅವೀವ್‌: ಇರಾನ್ ಬೆಂಬಲಿತ ಹಿಜ್ಬುಲ್ಲಾ ಭಯೋತ್ಪಾದಕ ಗುಂಪಿನೊಂದಿಗೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu), ಲೆಬನಾನ್‌ಗೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.

ದಕ್ಷಿಣ ಲೆಬನಾನ್‌ (Lebanon) ಮೇಲೆ ಇಸ್ರೇಲ್‌ ದಾಳಿ ನಡೆಸಿದ ಕೆಲ ಗಂಟೆಗಳ ನಂತರ ನೆತನ್ಯಾಹು ವೀಡಿಯೋವೊಂದರಲ್ಲಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಪ್ರಾಕೃತಿಕ ಸೌಂದರ್ಯ, ಸಹಿಷ್ಣುತೆಗೆ ಹೆಸರುವಾಸಿಯಾಗಿದ್ದ ಮಧ್ಯಪ್ರಾಚ್ಯ ಈಗ ಹಿಜ್ಬುಲ್ಲಾ (Hezbollah) ಮದ್ದು ಗುಂಡುಗಳನ್ನು ಸಂಗ್ರಹಿಸಿದ್ದು, ಇರಾನಿನ ಮಿಲಿಟರಿ ನೆಲೆಯಾಗಿ ಮಾರ್ಪಟ್ಟಿದೆ. ಹಾಗಾಗಿ ಕೂಡಲೇ ನಿಮ್ಮ ದೇಶವನ್ನು ಕೂಡಲೇ ಹಿಂತೆಗೆದುಕೊಳ್ಳಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ‘ಜೆನ್ನಾರಿಸ್ ಬಯೋನಿಕ್ ವಿಷನ್ ಸಿಸ್ಟಮ್’ – ಅಂಧರ ಪಾಲಿಗೆ ಭರವಸೆಯ ಬೆಳಕು!

ಇದು ಲೆಬನಾನ್ ಜನತೆಗೆ ನಮ್ಮ ಸಂದೇಶ. ನಿಮ್ಮ ದೇಶವನ್ನು ಮಧ್ಯಪ್ರಾಚ್ಯದ ಮುತ್ತು ಎಂದು ಕರೆಯುತ್ತಿದ್ದದ್ದು ನೆನಪಿದೆಯಾ? ಈಗ ಲೆಬನಾನ್‌ಗೆ ಏನಾಯಿತು? ನಿರಂಕುಶಾಧಿಕಾರಿಗಳು ಮತ್ತು ಭಯೋತ್ಪಾದಕರ ಗುಂಪು ಅದನ್ನು ನಾಶಪಡಿಸಿದರು. ಒಂದು ಕಾಲದಲ್ಲಿ ಲೆಬನಾನ್ ಸಹನೆ, ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು. ಇಂದು ಅದು ಅವ್ಯವಸ್ಥೆಯ ಸ್ಥಳವಾಗಿದೆ, ಯುದ್ಧದ ಕೇಂದ್ರವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಕೆಣಕಿ ತಪ್ಪು ಮಾಡಿತೇ ಇರಾನ್‌? – ಉಭಯ ರಾಷ್ಟ್ರಗಳ ಸೇನಾ ಸಾಮರ್ಥ್ಯ ನೋಡಿದ್ರೆ ಮೈ ನಡುಗುತ್ತೆ!

ನಾವು ಗಾಜಾದಲ್ಲಿ ನೋಡುವಂತೆ ವಿನಾಶ ಮತ್ತು ದುಃಖಕ್ಕೆ ಕಾರಣವಾಗುವ ಸುದೀರ್ಘ ಯುದ್ಧದ ಪ್ರಪಾತಕ್ಕೆ ಬೀಳುವ ಮೊದಲು ಎಚ್ಚೆತ್ತುಕೊಳ್ಳಬೇಕು. ಈಗಲೂ ಲೆಬನಾನ್‌ ತಮ್ಮ ರಾಷ್ಟ್ರವನ್ನು ಉಳಿಸಿಕೊಳ್ಳಬಹುದು. ನೀವು ನಿಮ್ಮ ಹಿಂತಿರುಗಿದರೆ, ಯುದ್ಧವನ್ನು ನಿಲ್ಲಿಸಿದ್ರೆ, ಶಾಂತಿ ಸಮೃದ್ಧ ಹಾದಿಗೆ ಮರಳಬಹುದು. ನೀವು ಮಾಡದಿದ್ದರೆ, ಹಿಜ್ಬುಲ್ಲಾ ಮಂದುವರಿಯುತ್ತದೆ. ನಿಮ್ಮ ನೇತೃತ್ವ ಖರ್ಚು ವೆಚ್ಚದಲ್ಲಿ ಇಸ್ರೇಲ್‌ ವಿರುದ್ಧ ಹೋರಾಡಲು ಪ್ರಯತ್ನಿಸಿ, ಲೆಬನಾನ್‌ ಅನ್ನು ಯುದ್ಧಕ್ಕೆ ಎಳೆದು ತರುತ್ತಾರೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಳ್ಳಿ ಎಂದು ಖಡಕ್ಕಾಗಿ ಹೇಳಿದ್ದಾರೆ.

ಇಸ್ರೇಲ್ ಯುದ್ಧವನ್ನು ಕೊನೆಗಾಣಿಸಲು ನಿರ್ಧರಿಸಿದೆ. ನಮ್ಮ ಜನರನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ಹಿಂದಿರುಗಿಸಲು ಅಗತ್ಯವಿರುವ ಎಲ್ಲವನ್ನೂ ಮಾಡಲು ನಾವು ನಿರ್ಧರಿಸಿದ್ದೇವೆ. ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ. ಇಸ್ರೇಲ್‌ಗೆ ಗೆಲ್ಲುವ ಛಲವೂ ಇದೆ, ಗೆಲ್ಲುತ್ತದೆ ಎಂದಿರುವ ಅವರು, ಹಿಜ್ಬುಲ್ಲಾವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಪ್ರತಿಜ್ಞೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಇಸ್ರೇಲ್‌ ಹಿಜ್ಬುಲ್ಲಾದ 120 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಹಿಜ್ಬುಲ್ಲಾದ ಮತ್ತೊಬ್ಬ ಟಾಪ್‌ ಲೀಡರ್‌ನನ್ನ ಹತ್ಯೆಗೈದಿತ್ತು. ಇದನ್ನೂ ಓದಿ: 120ಕ್ಕೂ ಹೆಚ್ಚು ಉಗ್ರ ತಾಣಗಳು ಧ್ವಂಸ – ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾದ ಮತ್ತೊಬ್ಬ ಟಾಪ್‌ ಲೀಡರ್‌ ಹತ್ಯೆ

Share This Article