ಬ್ಲಾಕ್‌ ಸೀರೆಯಲ್ಲಿ ಕಲರ್‌ಫುಲ್‌ ಆಗಿ ಮಿಂಚಿದ ನಭಾ!

Public TV
1 Min Read

ದಾ ಗ್ಲಾಮರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವ ‘ವಜ್ರಕಾಯ’ (Vajrakaya) ನಟಿ ನಭಾ ನಟೇಶ್‌ (Nabha Natesh), ಈ ಬಾರಿ ಬ್ಲಾಕ್‌ ಸೀರೆಯಲ್ಲಿ ಕಲರ್‌ಫುಲ್‌ ಆಗಿ ಮಿಂಚಿದ್ದಾರೆ. ಸೀರೆಯಲ್ಲಿ ಮೈ ಕೈ ಕಾಣುವ ಹಾಗೆ ಬೆಚ್ಚಗೆ ಪೋಸ್‌ ಕೊಟ್ಟಿರುವ ನಟಿ, ಟ್ರೆಡಿಷನಲ್‌ ಆಗಿಯೂ ಕಣ್ಕುಕ್ಕುವಂತೆ ಕಾಣಿಸಿಕೊಂಡಿದ್ದಾರೆ.

ಕ್ಯಾಮೆರಾ ಮುಂದೆ ಬೆಳ್ಳಿಗೆರೆಯಂತಹ ಸೊಂಟವನ್ನು ಪ್ರದರ್ಶಿಸಿರುವ ನಭಾ, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸೀರೆಯಲ್ಲೂ ಗ್ಲಾಮರ್‌ ಆಗಿ ಮಿಂಚುತ್ತಿರುವ ನಟಿಗೆ, ಸಾಕಷ್ಟು ಕಾಮೆಂಟ್‌ಗಳು ಬಹುಮಾನವಾಗಿ ಸಿಕ್ಕಿವೆ.

 

View this post on Instagram

 

A post shared by Nabha Natesh (@nabhanatesh)

‘ನಾನು ದೋಚುಕುಂಡುವತೆ’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ನಭಾ ನಟೇಶ್, ಯುವ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಅದಾದ ನಂತರ, ‘ಇಸ್ಮಾರ್ಟ್ ಶಂಕರ್’ ಚಿತ್ರದ ಮೂಲಕ ರಾತ್ರೋರಾತ್ರಿ ಕ್ರೇಜ್ ಸೃಷ್ಟಿಸಿದ್ದರು. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ನಭಾ ಅವರ ಸೌಂದರ್ಯಕ್ಕೆ ಯುವ ಲೋಕ ಮಾರುಹೋಗಿದೆ.

ತೆಲುಗಿನಲ್ಲಿ ಸದ್ಯಕ್ಕೆ ಅವರಿಗೆ ಅವಕಾಶಗಳು ಕಡಿಮೆಯಾಗುತ್ತಿದ್ದು, ಸೋಷಿಯಲ್‌ ಮೀಡಿಯಾಗಳಲ್ಲಿ ಸೌಂದರ್ಯ ಲೋಕದ ಸೃಷ್ಟಿಗೆ ಮುಂದಾಗಿದ್ದಾರೆ. ಈ ಮೂಲಕ ನಿರಂತರ ಹಾಟ್ ಲುಕ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದ್ದಾರೆ.

ಈ ಫೋಟೋಗಳನ್ನು ನೋಡಿದರೆ ನಭಾ ತಮ್ಮ ಸೌಂದರ್ಯದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಯಾಕೆಂದರೆ ಹಿಂದಿನ ಫೋಟೋಗಳಿಗೆ ಹೋಲಿಸಿದರೆ ಈ ಫೋಟೋಗಳು ಹೆಚ್ಚು ಕಣ್ಣು ಕುಕ್ಕುವಂತಿವೆ. ಅಷ್ಟೇ ಅಲ್ಲದೇ, ಈ ಫೋಟೋಗಳಿಗೆ ಹೆಚ್ಚಿನ ಲೈಕ್ಸ್‌ ಸಹ ಬರುತ್ತಿವೆ. ಆದರೆ ಈ ಫೋಟೋಶೂಟ್‌ಗಳು ಕೇವಲ ಅವಕಾಶಗಳಿಗಾಗಿ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೆ ಹಳಿಗೆ ಮರಳುವ ಸಲುವಾಗಿ ಅವರು ಈ ಗ್ಲಾಮರ್ ಟ್ರೀಟ್ ನೀಡುತ್ತಿದ್ದಾರೆ. ಈ ಸುಂದರಿ ಐಟಂ ಸಾಂಗ್‌ಗಳಲ್ಲಿ ನಟಿಸಲು ಕೂಡ ಸಿದ್ಧಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article