ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರಗ್ಸ್ ವಶ – ಆರೋಪಿಗಳ ಬಗ್ಗೆ ಸಿಕ್ಕಿಲ್ಲ ಸುಳಿವು

Public TV
1 Min Read

ಜೈಪುರ: ಸೋಮವಾರ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿರುವ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಬಳಿ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಎರಡು ಡ್ರಗ್ಸ್ ಪ್ಯಾಕೆಟ್‍ಗಳನ್ನು ವಶಪಡಿಸಿಕೊಂಡಿದೆ.

ಬಿಎಸ್‍ಎಫ್ ತಂಡಕ್ಕೆ ಶ್ರೀಕರಣಪುರ ಗಡಿಯಲ್ಲಿರುವ ಮುಕ್ಕನ್ ಗ್ರಾಮದಲ್ಲಿ ಡ್ರಗ್ಸ್ ಇದೆ ಎಂಬ ಮಾಹಿತಿ ಸಿಕ್ಕಿದೆ. ಈ ಜಾಲವನ್ನು ಹುಡುಕಿಕೊಂಡು ಹೋದ ಬಿಎಸ್‍ಎಫ್ ತಂಡಕ್ಕೆ ಮುಕ್ಕನ್ ಗ್ರಾಮದ ಜಮೀನಿನಲ್ಲಿ ಎರಡು ಡ್ರಗ್ಸ್ ಪ್ಯಾಕೆಟ್‍ಗಳು ಪತ್ತೆಯಾಗಿವೆ. ಇದನ್ನೂ ಓದಿ: ರಾಜ್ಯದ ಜನರಿಗೆ ಕರೆಂಟ್ ಶಾಕ್ – ಜು. 1ರಿಂದ ವಿದ್ಯುತ್ ದರ ಏರಿಕೆ

ಕೇಂದ್ರದ ಬಿಎಸ್ ಎಫ್ ನಿರ್ಧಾರದ ವಿರುದ್ಧ ನಿರ್ಣಯ ಅಂಗೀಕರಿಸಿದ ಬಂಗಾಳ- Kannada Prabha

ಪಾಕ್ ಸ್ಮಗ್ಲರ್‌ಗಳು ಈ ಡ್ರಗ್ಸ್ ಪ್ಯಾಕೆಟ್‍ಗಳನ್ನು ಕಳುಹಿಸಿದ್ದಾರೆ ಎಂದು ಬಿಎಸ್‍ಎಫ್‍ಗೆ ಮಾಹಿತಿ ಸಿಕ್ಕಿದೆ. ಆದರೆ ಇದನ್ನು ಹೇಗೆ ಕಳುಹಿಸಿದರು? ಯಾವ ತಂಡ ಕಳುಹಿಸಿತು? ಎಂಬುದರ ಬಗ್ಗೆ ಬಿಎಸ್‍ಎಫ್ ತನಿಖೆ ಮಾಡುತ್ತಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *