ತಾನು ಸಿಂಗಲ್ ಆಗಿರಲು ಈ ನಟನೇ ಕಾರಣ ಎಂದ ನಟಿ ತಬು

Public TV
1 Min Read

ಮುಂಬೈ: ಬಾಲಿವುಡ್ ಸಹಜ ಸುಂದರಿ ತಬು ತಾನೇಕೆ ಇನ್ನು ಸಿಂಗಲ್ ಆಗಿದ್ದೇನೆ ಎಂಬ ರಹಸ್ಯವನ್ನು 25 ವರ್ಷಗಳ ನಂತರ ಬಿಚ್ಚಿಟ್ಟಿದ್ದಾರೆ. ಬಾಲಿವುಡ್ ಸಿಂಗಂ ನಟ ಅಜಯ ದೇವಗನ್ ನಾನು ಸಿಂಗಲ್ ಆಗಿರಲು ಕಾರಣ ಎಂದು ಹೇಳಿ ತಬು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಅಜಯ ದೇವಗನ್ ನನಗೆ ಹಲವು ವರ್ಷಗಳಿಂದ ಪರಿಚಯ. ಅಜಯ್ ಮತ್ತು ನನ್ನ ಸಂಬಂಧಿ ಸಮೀರ್ ಇಬ್ಬರೂ ನಮ್ಮ ಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಇಬ್ಬರೂ ನನಗೆ ಒಳ್ಳೆಯ ಗೆಳೆಯರು ಹಾಗು ಅಂದು ಇಬ್ಬರೂ ನನ್ನ ಮೇಲೆ ಕಣ್ಣಿಟ್ಟಿದ್ರು. ಯಾರಾದ್ರೂ ನನ್ನ ಭೇಟಿಯಾಗಲು ಬಂದರೆ ಅವರಿಗೆ ಧಮಕಿ ಹಾಕಿ ಮತ್ತೊಮ್ಮೆ ಬರದಂತೆ ಹೇಳಿ ಕಳಿಸುತ್ತಿದ್ದರು. ಹಾಗಾಗಿ ನಾನಿನ್ನು ಸಿಂಗಲ್ ಆಗಿದ್ದೇನೆ ಎಂದು ಪತ್ರಿಕೆಯೊಂದಕ್ಕೆ ತಬು ತಿಳಿಸಿದ್ದಾರೆ.

ಅಜಯ ದೇವಗನ್ ಮತ್ತು ತಬು 25 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ `ಗೋಲ್ಮಾಲ್ ಅಗೇನ್’ ಚಿತ್ರದಲ್ಲಿ ತಬು ಮತ್ತು ಅಜಯ ಮತ್ತೊಮ್ಮೆ ಜೋಡಿಯಾಗಿದ್ದಾರೆ. ಈ ಮೊದಲು 1994ರಲ್ಲಿ `ವಿಜಯಪಥ್’ ಸಿನಿಮಾದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ತಮ್ಮ ಕೆಮಿಸ್ಟ್ರಿ ಮೂಲಕ ಮೋಡಿ ಮಾಡಿದ್ದರು. ಇನ್ನೂ ಗೋಲ್ಮಾಲ್ ಚಿತ್ರದಲ್ಲಿ ಇವರಿಬ್ಬರ ನಡುವೆ ರೋಮ್ಯಾನ್ಸ್ ಸೀನ್‍ಗಳಿವೆ ಎಂದು ಹೇಳಲಾಗುತ್ತಿದೆ.

ಅಜಯ್ ಮತ್ತು ತಬು ಇವರೆಗೂ ತಕ್ಷಕ್, ಫಿತೂರ್, ದೃಶ್ಯಂ ಮತ್ತು ವಿಜಯಪಥ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗೋಲ್ಮಾಲ್ ಅಗೇನ್ ಸಿನಿಮಾದಲ್ಲಿ ಅರ್ಷದ್ ವಾರ್ಸಿ, ಪರಿಣಿತಿ ಚೋಪಡಾ, ಕುಣಾಲ್ ಖೇಮು ಮತ್ತು ತುಷಾರ್ ಕಪೂರ್ ನಟಿಸುತ್ತಿದ್ದಾರೆ.

https://www.youtube.com/watch?v=kkzv_AFUPfM

Share This Article
Leave a Comment

Leave a Reply

Your email address will not be published. Required fields are marked *