ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ

Public TV
2 Min Read

ನವದೆಹಲಿ: ಕ್ಯಾನ್ಸರ್ ಬಂದ್ರೆ ಜೀವನವೇ ಮುಗಿಯಿತು ಎಂದು ತಿಳಿದುಕೊಳ್ಳುವ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ಛಲ ಬಿಡದೆ ಇಂಟರ್ವ್ಯೂ ಅಟೆಂಡ್ ಮಾಡಿರುವ ಸುದ್ದಿ ಎಲ್ಲಕಡೆ ವೈರಲ್ ಆಗಿದೆ.

ಕ್ಯಾನ್ಸರ್ ರೋಗಿಯೊಬ್ಬರು ತಮ್ಮ ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ರೂ ಉದ್ಯೋಗಕ್ಕಾಗಿ ಇಂಟರ್ವ್ಯೂ ಅಟೆಂಡ್ ಮಾಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸುದ್ದಿ ವೈರಲ್ ಆಗುತ್ತಿದೆ. ಜಾರ್ಖಂಡ್ ಮೂಲದ ಐಟಿ ವೃತ್ತಿಪರ ಅರ್ಶ್ ನಂದನ್ ಪ್ರಸಾದ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕೀಮೋಥೆರಪಿಯಲ್ಲಿದ್ದಾರೆ. ಈ ವೇಳೆ ಅವರಿಗೆ ಇಂಟರ್ವ್ಯೂಗೆ ಕಾಲ್ ಬಂದಿದೆ. ಈ ಹಿನ್ನೆಲೆ ಪ್ರಸಾದ್ ಅವರು ನಾನು ನನ್ನನ್ನು ಪ್ರೂವ್ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದಾರೆ. ಅದಕ್ಕೆ ಆಸ್ಪತ್ರೆ ಬೆಡ್‍ನಿಂದಲೇ ತಮ್ಮ ಲ್ಯಾಪ್‍ಟಾಪ್ ಮೂಲಕ ಇಂಟರ್ವ್ಯೂ ಅಟೆಂಡ್ ಮಾಡಿದ್ದಾರೆ. ಇದನ್ನೂ ಓದಿ: ಸೂರ್ಯ-ಚಂದ್ರ ಇರುವವರೆಗೂ ಹಿಂದೂ ಧರ್ಮ, ಮಾತೃ ಭಾಷೆ ಶಾಶ್ವತವಾಗಿರುತ್ತೆ: ಕಾರಜೋಳ

ಓಪನ್‍ಟುವರ್ಕ್ ಎಂಬ ಬ್ಯಾಡ್ಜ್ ಹೊಂದಿರುವ ಪ್ರಸಾದ್, ತಮ್ಮ ಆರೋಗ್ಯ ಸಮಸ್ಯೆಯಿಂದಾಗಿ ಉದ್ಯೋಗ ಪಡೆದುಕೊಳ್ಳಲು ಎಷ್ಟೂ ಕಷ್ಟವಾಗುತ್ತಿತ್ತು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ವೇಳೆ ಅವರು, ನೀವು ಸಂದರ್ಶನಗಳಲ್ಲಿ ಅತ್ಯುತ್ತಮವಾದದ್ದನ್ನು ನೀಡಿದ್ರೂ, ನಿಮ್ಮ ಇಂಟರ್ವ್ಯೂ ಪಾಸ್ ಆಗುವುದಿಲ್ಲ. ಆಗ ಈ ಕಂಪನಿಗಳು ಎಷ್ಟು ಮುಂದುವರೆದಿದೆ ಎಂಬುದನ್ನು ತೋರಿಸುತ್ತದೆ. ಆದರೆ ನಾನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ ಎಂದು ನೇಮಕಾತಿದಾರರಿಗೆ ತಿಳಿಯುತ್ತಿದ್ದಂತೆ, ಅವರಲ್ಲಿ ಆಗುವ ಬದಲಾವಣೆಯನ್ನು ನಾನು ನೋಡುತ್ತೇನೆ. ಆದರೆ ನನಗೆ ನಿಮ್ಮ ಸಹಾನುಭೂತಿ ಬೇಕಾಗಿಲ್ಲ. ನನ್ನನ್ನು ನಾನು ಸಾಬೀತುಪಡಿಸಲು ನಾನು ಇಲ್ಲಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಸ್ಫೂರ್ತಿ ನೀಡುವ ಪೋಸ್ಟ್
ಈ ಪೋಸ್ಟ್ ನೋಡಿದ ನೆಟ್ಟಿಗರು, ನೀವು ಅನೇಕರಿಗೆ ಸ್ಫೂರ್ತಿ ನೀಡಿದ್ದೀರಿ. ನೀವು ಹೆಚ್ಚು ಶಕ್ತಿ ಮತ್ತು ಬದ್ಧತೆಯನ್ನು ತೋರಿಸುತ್ತಿದ್ದೀರಿ. ಇದರಿಂದ ಇತರರನ್ನು ಬಲಶಾಲಿಯಾಗುವಂತೆ ಮಾಡುತ್ತದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ, ನಿಮಗೆ ಅರ್ಹವಾದ ಪೋಸ್ಟ್ ನಿಮಗೆ ಸಿಗಲಿ ಎಂಬುದು ನನ್ನ ಪ್ರಾರ್ಥನೆ. ನಿಮ್ಮ ಮೌಲ್ಯಗಳು, ಕೌಶಲ್ಯಗಳು ಮತ್ತು ವೈಯಕ್ತಿಕ ಗುರಿಗಳೊಂದಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುವ ಸ್ಥಾನವನ್ನು ನೀವು ಕಂಡುಕೊಳ್ಳುತ್ತೀರಿ. ನೀವು ತಲೆ ಎತ್ತಿ ನಡೆಯಿರಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಮದುವೆಯಾಗಿ ಒಂದೇ ವರ್ಷಕ್ಕೆ ಯುವತಿ ಅನುಮಾನಾಸ್ಪದ ಸಾವು 

ಏನಾಯಿತು?
ಅರ್ಶ್ ತನ್ನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಬಳಿಕ ಮಹಾರಾಷ್ಟ್ರ ಮೂಲದ ಟೆಕ್ ಕಂಪನಿ ಅಪ್ಲೈಡ್ ಕ್ಲೌಡ್ ಕಂಪ್ಯೂಟಿಂಗ್‍ನ ಸ್ಥಾಪಕ ಮತ್ತು ಸಿಇಒ ನೀಲೇಶ್ ಸತ್ಪುಟೆ ಅವರು ಉದ್ಯೋಗ ಆಫರ್ ಕೊಟ್ಟಿದ್ದಾರೆ. ಈ ವೇಳೆ ಸತ್ಪುಟೆ ಅವರು, ಪ್ರಸಾದ್ ನಿಮ್ಮ ಚಿಕಿತ್ಸೆ ಮುಗಿದ ಬಳಿಕ ಕೆಲಸಕ್ಕೆ ಬಂದು ಸೇರಿಕೊಳ್ಳಬಹುದು. ನೀನು ಒಬ್ಬ ಯೋಧ. ಪ್ರಸ್ತುತ ನೀವು ನಿಮ್ಮ ಚಿಕಿತ್ಸೆ ಕಡೆ ಗಮನಕೊಡಿ. ಬೇರೆ ಇಂಟರ್ವ್ಯೂ ಅಟೆಂಡ್ ಮಾಡುವುದನ್ನು ನಿಲ್ಲಿಸಿ ಎಂದು ಬರೆದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *