ಕೆಟ್ಟ-ಕೆಟ್ಟ ಪದಗಳಿಂದ ಬೈದ್ರೆ ಈ ಊರಿನಲ್ಲಿ ಜನರಿಗೆ ಒಲಿಯುತ್ತೆ ದೇವರು

Public TV
2 Min Read

ಮಡಿಕೇರಿ: ನಾವು ದೇವರನ್ನು ಏನಂತಾ ಬೇಡ್ತೀವಿ, ಒಳ್ಳೆ ಬುದ್ಧಿ ಕೊಡಪ್ಪಾ ಅಥವಾ ನಾನು ಮಾಡುವ ಕೆಲಸದಲ್ಲಿ ಯಶಸ್ಸುಗಳಿಸುವಂತೆ ಮಾಡಪ್ಪ ಅಂತಾ ಕೇಳ್ಕೋತೀವಿ. ಅವರು ಬೇಡಿಕೊಂಡಿದ್ದು ನಡೆದ್ರೆ, ಕೋಳಿಯನ್ನು ಮೇಲಕ್ಕೆ ಎಸೆಯುವ ಮೂಲಕ ಹರಕೆ ತೀರಿಸುತ್ತಾರೆ. ಆದ್ರೆ ಇಲ್ಲಿ ವಿವಿಧ ವೇಷ ಹಾಕಿಕೊಂಡು ದೇವರನ್ನು ಬೈದ್ರೆ ದೇವ್ರು ಒಲಿಯುತ್ತೆ ಎಂದು ಜನರು ನಂಬಿದ್ದಾರೆ.

ಕೊಡಗು ಜಿಲ್ಲೆ ಪೋನ್ನಂಪೇಟೆ ತಾಲೂಕಿನ ಗೋಣಿಕೊಪ್ಪದ ದೇವರ ಪುರದಲ್ಲಿ ಪ್ರತಿ ವರ್ಷ ಶ್ರೀ ಅಯ್ಯಪ್ಪ ಭದ್ರಕಾಳಿ ದೇವಸ್ಥಾನದಲ್ಲಿ ‘ಕುಂಡೆ ಹಬ್ಬ’ ಆಚರಿಸಲಾಗುತ್ತೆ. ಈ ಭದ್ರಕಾಳಿ ದೇವರಿಗೆ ವಿವಿಧ ವೇಷ ತೊಟ್ಟು ಕೆಟ್ಟ ಪದಗಳಿಂದ ಬೈದ್ರೆ ದೇವರು ಒಲಿಯುತ್ತದೆ ಅನ್ನೋ ನಂಬಿಕೆ ಇಲ್ಲಿನ ಜನ್ರದ್ದು. ತಿತಿಮತಿ, ಪಾಲಿಬೆಟ್ಟ, ಗೋಣಿಕೊಪ್ಪಲು, ಸಿದ್ದಾಪುರ ಕುಟ್ಟ ಇಲ್ಲಿನ ಸುತ್ತಮುತ್ತಲಿನ ಆದಿವಾಸಿಗಳು ಈ ಹಬ್ಬವನ್ನ ಆಚರಿಸ್ತಾರೆ. ಇದನ್ನೂ ಓದಿ: ಯೋಗ ಕೇವಲ ವ್ಯಾಯಾಮವಲ್ಲ, ಯೋಗ ವಿಜ್ಞಾನದ ನಾಲ್ಕನೇ ಆಯಾಮ: ಥಾವರ್ ಚಂದ್ ಗೆಹ್ಲೋಟ್ 

ಹೀಗೆ ಅಂಗಡಿಗಳಿಗೆ ಹೋಗಿ ಮತ್ತು ಆದಿ ಬೀದಿಯಲ್ಲಿ ಹೋಗೋ ಜನ್ರನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುವುದು ಈ ಹಬ್ಬದ ವಿಶೇಷತೆ. ಹುಡುಗರು, ಹುಡುಗಿ ತರಹ ವಿವಿಧ ವೇಷಭೂಷಣ ತೊಟ್ಟು ಕುಣಿದು ಕುಪ್ಪಳಿಸುತ್ತಾ ದೇವರನ್ನ ಬೈದು ಹರಕೆ ತೀರಿಸುತ್ತಾರೆ ಕೊನೆಯಲ್ಲಿ ಜೀವಂತ ಕೋಳಿಯನ್ನು ಮೇಲಕ್ಕೆ ಎಸೆಯುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ.

ಹುಡುಗರೆಲ್ಲಾ ಹುಡುಗಿಯ ವೇಷತೊಟ್ಟು ಅಂಗಡಿಗಳಲ್ಲಿ ಹಾಗೂ ಸಾರ್ವಜನಿಕರನ್ನ ಅಡ್ಡಕಟ್ಟಿ ಭಿಕ್ಷೆ ಬೇಡುವುದು ಇಲ್ಲಿನ ಸಂಪ್ರದಾಯ. ಹುಡುಗಿ, ಹೆಂಗಸರು, ಮುದುಕಿ, ಇನ್ನಿತರ ವೇಷಭೂಷಣಗಳನ್ನು ಧರಿಸುತ್ತಾರೆ. ಡಬ್ಬಗಳು, ಡೋಲು, ಪಾತ್ರೆ ಸೋರೆಕಾಯಿ ಬುರುಡೆ ಸೇರಿದಂತೆ ಇನ್ನಿತರ ವಸ್ತುಗಳಿಂದ ವಿವಿಧ ರೀತಿಯ ಸಂಗೀತ ಬರುವಂತೆ ಮ್ಯೂಸಿಕ್ ಬಾರಿಸುತ್ತಾ ಕೆಟ್ಟಕೆಟ್ಟ ಪದಗಳಿಂದ ಸಿಕ್ಕ-ಸಿಕ್ಕವರನ್ನು ನಿಂದಿಸುತ್ತಾರೆ.

ಆದಿವಾಸಿಗಳು ತಮ್ಮ ಸಾಕುಪ್ರಾಣಿಗಳಿಗೆ ಹಾಗೂ ತಮಗೆ ಆರೋಗ್ಯದಲ್ಲಿ ವ್ಯತ್ಯಾಸವಾದ್ರೆ, ಈ ಭದ್ರಕಾಳಿ ದೇವರ ಮೊರೆ ಹೋಗಿ ಹರಕೆ ಹೊತ್ತುಕೊಳ್ಳುತ್ತಾರೆ. ಆ ಹರಕೆ ತೀರಿಸಲು ವರ್ಷಕ್ಕೊಂದು ಬಾರಿ ನಡೆಯುವ ಈ ಕುಂಡೆ ಹಬ್ಬದಲ್ಲಿ ಹುಡುಗರು ಹುಡುಗಿ ವೇಷಧರಿಸಿ ಕೆಟ್ಟ ಪದಗಳಿಂದ ಬೈದರೆ ದೇವರು ಒಲಿಯುತ್ತೆ, ಒಳ್ಳೆಯದಾಗುತ್ತದೆ ಎನ್ನುವುದು ಇಲ್ಲಿನ ಜನ್ರ ನಂಬಿಕೆ. ಇದನ್ನೂ ಓದಿ:  ತಮಿಳು ಭಾಷೆಯನ್ನು ಕೇಂದ್ರದ ಅಧಿಕೃತ ಭಾಷೆಯಾಗಿ ಘೋಷಿಸಿ: ಸ್ಟಾಲಿನ್ ಒಟ್ಟಾರೆ ಈ ಆದಿವಾಸಿಗಳ ಆಚರಣೆಯಂತೂ ವಿಭಿನ್ನವಾಗಿದೆ. ಕಾಡಿನೊಳಗೆ ಹಾಗೂ ಕಾಫಿತೋಟಗಳಲ್ಲಿ ವರ್ಷಪೂರ್ತಿ ಕೂಲಿ ಕಾರ್ಮಿಕರಾಗಿ ದುಡಿಯುವ ಈ ಜನ ವರ್ಷಕ್ಕೊಂದು ಬಾರಿ ಬಿಡುವು ಮಾಡಿಕೊಂಡು ಇಂತಹ ಆಚರಣೆ ಮಾಡ್ತಿದ್ದಾರೆ. ಅಲ್ಲದೇ ತಮ್ಮ ಹಿರಿಯರು ನಡೆಸಿಕೊಂಡು ಬಂದ ಪದ್ದತಿ ಆಚಾರ ವಿಚಾರ ರೂಢಿ ಸಂಪ್ರದಾಯವನ್ನ ಮರೆಯದೇ ಈಗಲೂ ಆಚರಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *