ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಳೆದೆರಡು ವರ್ಷದಿಂದ ಸರಳವಾಗಿ ಹುಟ್ಟುಹಬ್ಬ ಆಚರಿಸುತ್ತೇನೆ ಎಂದು ಹೇಳುತ್ತಿದ್ದರು. ಹಾಗೆಯೇ ಈ ಬಾರಿ ಅಂಬಿ ಅಗಲಿಕೆಯಿಂದ ಮನನೊಂದು ಹುಟ್ಟುಹಬ್ಬ ಸರಳವಾಗಿ ಆಚರಿಸಿ ಎಂದು ಮತ್ತೊಮ್ಮೆ ದರ್ಶನ್ ಹೇಳಿದ್ದಾರೆ. ಆದರೆ ಅಂಬಿ ಅಗಲಿಕೆಯ ಜೊತೆ ದರ್ಶನ್ ಹುಟ್ಟುಹಬ್ಬ ಸರಳವಾಗಿ ಆಚರಿಸಿ ಎಂದು ಅಭಿಮಾನಿಗಳಿಗೆ ಕೇಳಿಕೊಂಡಿದ್ದರ ಹಿಂದೆ ಇನ್ನೊಂದು ಕಾರಣವಿದೆ.
ಇತ್ತೀಚೆಗೆ ದರ್ಶನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಂಬಿ ಅಪ್ಪಾಜಿ ತಮ್ಮಿಂದ ದೂರವಾದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿ ಎಂದು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಈ ಸಂಭ್ರಮಾಚಾರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ತೊಂದರೆ ಕೊಡುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂ ಕುಂಡಗಳನ್ನು ಬೀಳಿಸುವುದು, ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ತೋರಬಾರದು, ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವು ನನ್ನ ಕೋರಿಕೆಯನ್ನು ಈಡೇರಿಸುತ್ತೀರಾ ಎನ್ನವ ನಂಬಿಕೆ ಇದೆ ಎಂದು ಪೋಸ್ಟ್ ಮಾಡಿದ್ದರು.
ದರ್ಶನ್ ಪಕ್ಕದ ಮನೆಯಲ್ಲಿ ಸಾಹಿತಿಯೊಬ್ಬರು ಇದ್ದಾರೆ. ಅವರ ಮೇಲಿನ ಪ್ರೀತಿಗಾಗಿ ದರ್ಶನ್ ಈ ಸಾಲನ್ನು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಳೆದ ವರ್ಷವೂ ಇದೇ ಸಾಹಿತಿಗಾಗಿ ದರ್ಶನ್ ಅಭಿಮಾನಿಗಳಿಗೆ ನನ್ನ ಹುಟ್ಟುಹಬ್ಬ ಆಚರಿಸಬೇಡಿ ಎಂದು ಕೇಳಿಕೊಂಡಿದ್ದರು.
ದರ್ಶನ್ ಮನೆಯ ಪಕ್ಕದಲ್ಲಿಯೇ ಹಿರಿಯ ಸಾಹಿತಿ ಗೋ.ರು ಚೆನ್ನಬಸಪ್ಪನವರ ಮನೆಯಿದೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮ ಅಂದರೆ ಅಭಿಮಾನಿಗಳು ಮುಗಿಲು ಮುಟ್ಟುವಂತಹ ಅಬ್ಬರದ ಸದ್ದಿನೊಂದಿಗೆ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಆದರೆ ಪಟಾಕಿ ಸದ್ದಿನ ತೀವ್ರತೆಯಿಂದಾಗಿ ಗೋ.ರು ಶ್ರವಣದೋಷ ಸಮಸ್ಯೆಗೆ ತುತ್ತಾಗಿದ್ದರು. ಕೂಡಲೇ ಸಾಹಿತಿ ದರ್ಶನ್‍ಗೊಂದು ಪತ್ರ ಬರೆದು ಪೋಸ್ಟ್ ಮಾಡಿದ್ದರು. ಹಿರಿಯ ಸಾಹಿತಿಯ ಪತ್ರ ದರ್ಶನ್ ಕೈ ಸೇರಿದ್ದೇ ತಡ ದರ್ಶನ್ ಅಭಿಮಾನಿಗಳ ಅಚಾತುರ್ಯಕ್ಕೆ ಮನನೊಂದರು.
???????? pic.twitter.com/HicckaPmHw
— Darshan Thoogudeepa (@dasadarshan) January 16, 2019
ಇದಕ್ಕಾಗಿ ಕಳೆದ ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಹಾಗೂ ತನ್ನ ಮನೆಯ ಮುಂದೆ ಅಭಿಮಾನಿಗಳಿಗೆ ನನ್ನ ಹುಟ್ಟುಹಬ್ಬಕ್ಕೆ ಪಟಾಕಿ ಹೊಡೆಯಬೇಡಿ, ಪಕ್ಕದ ಮನೆಯವರಿಗೆ ತೊಂದರೆ ಕೊಡಬೇಡಿ ಎಂದು ದಾಸ ಕೋರಿಕೆಯ ಮನವಿಯನ್ನು ಮಾಡಿಕೊಂಡಿದ್ದಾರೆ. ದರ್ಶನ್ ಬಗ್ಗೆ ಕೊಂಚವೂ ಬೇಸರಿಸಿಕೊಳ್ಳದ ಸಾಹಿತಿ ಕೂಡ ಅಭಿಮಾನಿಗಳ ಕರುನಾಡಿನ ರತ್ನ ದರ್ಶನ್ ಗೌರವಕ್ಕೆ ಚ್ಯುತಿ ಬಾರದಂತೆ ವರ್ತಿಸಬೇಕು ಎಂದು ಹೇಳಿದ್ದರು. ನಾನು ಕೂಡ ದರ್ಶನ್ ಅಭಿಮಾನಿ ಎಂದು ಖುಷಿಯಿಂದ ಹೇಳಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv