– ರೈಲು ನಿಲ್ದಾಣದ ಮೇಲ್ವಿಚಾರಕಿ ಅಮಾನತು
ನವದೆಹಲಿ: ಮಥುರಾ ರೈಲ್ವೇ ನಿಲ್ದಾಣದ ಬಳಿ ನಟಿ, ಬಿಜೆಪಿ ಸಂಸದೆ ಹೇಮಮಾಲಿನಿ ಮೇಲೆ ಗೂಳಿ ದಾಳಿ ಮಾಡಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರೈಲ್ವೇ ನಿಲ್ದಾಣದ ಮೇಲ್ವೀಚಾರಕಿ ಕೆ ಎಲ್ ಮೀನಾ ಅವರನ್ನು ಅಮಾನತು ಮಾಡಲಾಗಿದೆ. ರೈಲು ನಿಲ್ದಾಣದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದ್ದಕ್ಕೆ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಮಥುರಾದ ಬಿಜೆಪಿ ಸಂಸದೆಯಾಗಿರೋ ಹೇಮಮಾಲಿನಿ ಅವರು ಇತ್ತೀಚೆಗೆ ರೈಲು ನಿಲ್ದಾಣದ ನವೀಕರಣದ ಕುರಿತು ಪರಿಶೀಲನೆಗೆ ತೆರಳಿದ್ದರು. ನಿಲ್ದಾಣದ ಫ್ಲಾಟ್ ಫಾರಂ ಮೇಲೆ ನಿಂತಿದ್ದ ವೇಳೆ ಏಕಾಏಕಿ ಗೂಳಿಯೊಂದು ಹೇಮಮಾಲಿನಿ ಮೇಲೆ ದಾಳಿ ಮಾಡಲು ನುಗ್ಗಿತ್ತು. ತಕ್ಷಣವೇ ಸಂಸದೆ ಹಿಂದಕ್ಕೆ ಸರಿದಿದ್ದು, ಪರಿಣಾಮ ಭಾರೀ ಅನಾಹುತವೊಂದು ತಪ್ಪಿದೆ.
ಸದ್ಯ ಅಮಾನತಾದ ಕೆ ಎಲ್ ಮೀನಾ ಅವರ ವಿರುದ್ಧ ತನಿಖೆ ನಡೆಸಲು ಆದೇಶಿಸಲಾಗಿದೆ ಎಂಬುದಾಗಿ ವರದಿಯಾಗಿದೆ.