ಮೃತರ ಕುಟುಂಬಕ್ಕೆ ಸಹಾಯ ಮಾಡುವೆ: ನಟ ನಾಗಭೂಷಣ್

Public TV
2 Min Read

ಪಘಾತದ (Car Accident) ಬಳಿಕ ನಟ ನಾಗಭೂಷಣ್ (Nagabhushan) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರವಾಗಿ ನಿನ್ನೆ ಸುದ್ಧಿಗೋಷ್ಠಿ ಆಯೋಜಿಸಿದ್ದು ಘಟನೆ ಬಗ್ಗೆ ವಿವರಿಸಿದರು. ಆ ಕುಟುಂಬಕ್ಕೆ ಆದ ನೋವು ಎನ್ನುವುದು ನನಗೆ ಅರಿವಿದೆ. ಅವರ ಕುಟುಂಬದ ಹತ್ತಿರದವರ ಜೊತೆ ಮಾತನಾಡಿದ್ದೇವೆ. ಆ ಕುಟುಂಬಕ್ಕೆ ಏನು ಸಹಾಯ ಬೇಕಿದ್ದರೂ ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ನಾಗಭೂಷಣ್ ಜೊತೆ ಅವರ ಪರ ವಕೀಲರಾದ ದಿಲೀಪ್ ಪತ್ರಿಕಾಗೋಷ್ಠಿಯಲ್ಲಿದ್ದರು. ನಾಗಭೂಷಣ್  ಮಾತನಾಡಿ, ಹಿಟ್ ಅಂಡ್ ರನ್ ಅಂತ ಹೇಳಬೇಡಿ, ಅಪಘಾತ ಬಳಿಕ ನಾನೇ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದು ಎಂದು ಭಾವುಕರಾದರು. ಘಟನೆ ನಡೆದು ಅನೇಕ ದಿನಗಳ ಬಳಿಕ ನಿಮ್ಮ ಮುಂದೆ ಬಂದಿದ್ದೀನಿ, ನನಗೆ ಆ ಘಟನೆ ಅರಗಿಸಿಕೊಳ್ಳಲು ಇನ್ನೂ ಸಮಯ ಬೇಕು. ಹಾಗಾಗಿ ನಾನು ತಡವಾಗಿ ಮಾತನಾಡುತ್ತಿದ್ದೀನಿ ಎಂದು ಹೇಳಿದರು.

‘ಕೋಣನಕುಂಟೆ  ಕ್ರಾಸ್ ಬಳಿ ಘಟನೆ ನಡೆದಿದ್ದು, ಅವರು ನನ್ನ ಕಾರಿಗೆ ದಿಢೀರ್ ಅಂತ ಅಡ್ಡ ಬಂದರು ಅಪಘಾತವಾಯಿತು ಬಳಿಕ ನಾನೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದೆ. ಆಸ್ಪತ್ರೆಗೆ ಹೋಗುವಾಗ ಪೋಲಿಸರಿಗೆ ನಾನೆ ಫೋನ್ ಮಾಡಿ ಘಟನೆ ಬಗ್ಗೆ ವಿವರಿಸಿದೆ’ ಎಂದು ಹೇಳಿದರು. ಪೊಲೀಸರು ಗಾಯಾಳುಗಳ ಸಂಬಂಧಿಗಳ ಮುಂದೆಯೇ ಆಲ್ಕೋಹಾಲ್ ಪರೀಕ್ಷೆ ಹಾಗೂ ರಕ್ತ ಪರೀಕ್ಷೆ ಮಾಡಿಸಿದರು ನಂತರ ನಾನು ಆಸ್ಪತ್ರೆಯಿಂದ ಪೊಲೀಸ್ ಸ್ಟೇಷನ್‌ಗೆ ಹೋದೆ ಬೆಳಗ್ಗೆ ಸ್ಟೇಷನ್ ಬೇಲ್ ಮೂಲಕ ಹೊರಬಂದೆ’ ಎಂದು ಘಟನೆ ವಿವರಿಸಿದರು.

ದುರಂತ ಎಂದರೆ ನಾಗಭೂಷಣ್ ತಂದೆ ಕೂಡ ಹಿಟ್ ಅಂಡ್ ರನ್ ಪ್ರಕರಣಲ್ಲಿಯೇ ನಿಧನಹೊಂದಿದ್ದು. ತಂದೆಯ ಸಾವನ್ನು ನೆನಪಿಸಿಕೊಂಡ ನಾಗಭೂಷಣ್ ‘ಕಳೆದುಕೊಂಡ ನೋವು ಏನು ಅಂತ ನನಗೆ ಗೊತ್ತಿದೆ. ನನ್ನ ತಂದೆ ಕೂಡ ಅಪಘಾತದಲ್ಲಿಯೇ ನಿಧನರಾಗಿದ್ದು. ಅವರನ್ನು ಸಾಯಿಸಿದ್ದು ಯಾರು ಅಂತ ಇವತ್ತಿಗೂ ನಮಗೆ ಗೊತ್ತಿಲ್ಲ. ಆದರೀಗ ನಾನು ಅವರ ನೋವಿನಲ್ಲಿ ಭಾಗಿಯಾಗಿದ್ದೀನಿ’ ಎಂದು ಭಾವುಕರಾದರು.

ಅವರ ಕುಟುಂಬದ ಜೊತೆ ಸಂಪರ್ಕದಲ್ಲಿದ್ದೇವೆ. ನನ್ನ ಕೈಯಲ್ಲಿ ಏನು ಸಹಾಯ ಮಾಡಲು ಸಾಧ್ಯವಾಗುತ್ತೊ ನಾನು ಖಂಡಿತ  ಮಾಡುತ್ತೇನೆ. ಈ ಸಮಯದಲ್ಲಿ ನಾನು ಇನ್ನೇನು ಮಾಡಲು ಸಾಧ್ಯ ಎಂದು ನಾಗಭೂಷಣ್ ಭಾವುಕರಾದರು.  ಇದೇ ಸಮಯದಲ್ಲಿ ಅಪಘಾತ ಮಾಡಿದರೆ ದಯವಿಟ್ಟು ಯಾರು ಓಡಿ ಹೋಗಬೇಡಿ ಎಂದು ಮನವಿಮಾಡಿದರು. ಇದರಿಂದ ಹೊರಬರಲು ನನಗೆ ಸಮಯ ಬೇಕು . ನಂತರ ಮತ್ತೆ ನಿಮಗೆ ಸಿಗುತ್ತೇನೆ ಎಂದರು

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್