ಕ್ಲಾಸೆನ್‌ ಅಬ್ಬರದ ಶತಕ – ಇಂಗ್ಲೆಂಡ್‌ ವಿರುದ್ಧ ಆಫ್ರಿಕಾಗೆ 229 ರನ್‌ ಭರ್ಜರಿ ಜಯ

Public TV
3 Min Read

ಹೆನ್ರಿಕ್ ಕ್ಲಾಸೆನ್ (Heinrich Klaasen) ಅಬ್ಬರದ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ (England) ವಿರುದ್ಧ ದಕ್ಷಿಣ ಆಫ್ರಿಕಾ (South Africa) 229 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗೆ 7 ವಿಕೆಟ್‌ ನಷ್ಟಕ್ಕೆ 399 ರನ್‌ ಗಳಿಸಿತು. 400 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಕೇವಲ 170 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಹೀನಾಯ ಸೋಲನುಭವಿಸಿತು. ಇದನ್ನೂ ಓದಿ: World Cup 2023: ಡಚ್ಚರಿಗೆ ಡಿಚ್ಚಿ ಕೊಟ್ಟು ಗೆಲುವಿನ ಖಾತೆ ತೆರೆದ ಸಿಂಹಳಿಯರು – ಲಂಕಾಗೆ 5 ವಿಕೆಟ್‌ಗಳ ಜಯ

ಆಫ್ರಿಕಾ ಬೌಲರ್‌ಗಳ ದಾಳಿಗೆ ಇಂಗ್ಲೆಂಡ್‌ ಬ್ಯಾಟರ್‌ಗಳು ಮಂಕಾದರು. ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದ ಆರಂಭಿಕ ಬ್ಯಾಟರ್‌ಗಳು ತರಗೆಲೆಯಂತೆ ಉದುರಿ ಹೋದರು. ಜಾನಿ ಬೈರ್ಸ್ಟೋವ್ (10), ಡೇವಿಡ್ ಮಲನ್ (6), ಜೋ ರೂಟ್ (2), ಬೆನ್ ಸ್ಟೋಕ್ಸ್ (5), ಹ್ಯಾರಿ ಬ್ರೂಕ್ (17), ಜೋಸ್ ಬಟ್ಲರ್ (15), ಡೇವಿಡ್ ವಿಲ್ಲಿ (12), ಆದಿಲ್ ರಶೀದ್ (10) ರನ್‌ಗಳಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಕೆಳ ಕ್ರಮಾಂಕದ ಬ್ಯಾಟರ್‌ಗಳಾದ ಗಸ್ ಅಟ್ಕಿನ್ಸನ್ (35 ರನ್‌, 21 ಬಾಲ್‌, 7 ಫೋರ್), ಮಾರ್ಕ್‌ ವೂಡ್‌ (43 ರನ್‌, 17 ಬಾಲ್‌, 2 ಫೋರ್‌, 5 ಸಿಕ್ಸ್‌) ಉತ್ತಮ ಪ್ರದರ್ಶನ ನೀಡಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರೀಸ್ ಟೋಪ್ಲಿ ಗಾಯದ ಸಮಸ್ಯೆಯಿಂದ ಆಟದಿಂದ ಹೊರಗುಳಿದರು.

ಇಂಗ್ಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೋಟ್ಜಿ 3 ವಿಕೆಟ್‌ ಕಬಳಿಸಿ ಮಿಂಚಿದರು. ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್ ತಲಾ ಎರಡು ಹಾಗೂ ಕಗಿಸೊ ರಬಾಡ, ಕೇಶವ ಮಹಾರಾಜ್ ತಲಾ ಒಂದು ವಿಕೆಟ್‌ ಕಿತ್ತು ತಂಡದ ಗೆಲುವಿಗೆ ಕಾರಣರಾದರು. ಇದನ್ನೂ ಓದಿ: ಎಲ್ಲಿ ಹೋಯ್ತು ಬಾಬರ್‌ನ ಬೆಂಕಿ ಬ್ಯಾಟಿಂಗ್? – ಮತ್ತೆ ಗಂಭೀರ್ ಕೆಣಕಿದ ಕೊಹ್ಲಿ ಫ್ಯಾನ್ಸ್

ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ್ದ ದಕ್ಷಿಣ ಆಫ್ರಿಕಾ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಕ್ವಿಂಟನ್ ಡಿ ಕಾಕ್ ಕೇವಲ 4 ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿಕೊಂಡಿದ್ದು ತಂಡಕ್ಕೆ ಆರಂಭಿಕ ಆಘಾತ ನೀಡಿತ್ತು. ಆದರೆ ನಂತರದ ಬ್ಯಾಟರ್‌ಗಳು ಇಂಗ್ಲೆಂಡ್‌ ಬೌಲರ್‌ಗಳನ್ನು ಚೆಂಡಾಡಿದರು. ರೀಜಾ ಹೆಂಡ್ರಿಕ್ಸ್ 75 ಬಾಲ್‌ಗಳಿಗೆ 85 ರನ್‌ ಗಳಿಸಿ (9 ಫೋರ್‌, 3 ಸಿಕ್ಸರ್‌) ಮಿಂಚಿದರು.

ಕ್ಲಾಸೆನ್‌ ಮಿಂಚು
ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ (60), ಐಡೆನ್ ಮಾರ್ಕ್ರಾಮ್ (42) ಸಮಯೋಚಿತ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ತಂಡದ ಮೊತ್ತ ಹೆಚ್ಚಿಸುವಲ್ಲಿ ಪಾತ್ರ ವಹಿಸಿದರು. ನಂತರ ಬಂದ ಹೆನ್ರಿಕ್ ಕ್ಲಾಸೆನ್ ಅಬ್ಬರದ ಶತಕ ಸಿಡಿಸಿ ಮಿಂಚಿದರು. ಕೇವಲ 67 ಬಾಲ್‌ಗೆ 109 ರನ್‌ (12 ಫೋರ್‌, 4 ಸಿಕ್ಸರ್‌) ಬಾರಿಸಿದರು. ಡೇವಿಡ್ ಮಿಲ್ಲರ್ ಕೇವಲ 6 ರನ್‌ ಗಳಿಸಿ ಔಟಾದರು. ಏಳನೇ ಕ್ರಮಾಂಕದ ಬ್ಯಾಟರ್‌ ಮಾರ್ಕೊ ಜಾನ್ಸೆನ್ ಕೂಡ ಅಬ್ಬರಿಸಿದರು. ಔಟ್‌ ಆಗದೇ 42 ಬಾಲ್‌ಗೆ 75 ರನ್‌ಗಳಿಸಿ (3 ಫೋರ್‌, 6 ಸಿಕ್ಸರ್‌) ಸಿಡಿಸಿ ಸವಾಲಿನ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದನ್ನೂ ಓದಿ: ಪಾಕಿಸ್ತಾನ್‌ ಜಿಂದಾಬಾದ್‌ ಅನ್ನದೇ ಇನ್ನೇನು ಹೇಳ್ಬೇಕು? – ಪೊಲೀಸ್‌ ಅಧಿಕಾರಿ ಜೊತೆ ಪಾಕ್‌ ಅಭಿಮಾನಿ ವಾಗ್ವಾದ

ದಕ್ಷಿಣ ಆಫ್ರಿಕಾ ವಿರುದ್ಧ ರೀಸ್ ಟೋಪ್ಲಿ 3, ಗಸ್ ಅಟ್ಕಿನ್ಸನ್ ಹಾಗೂ ಆದಿಲ್ ರಶೀದ್ ತಲಾ 2 ವಿಕೆಟ್‌ ಉರುಳಿಸಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್