ಭಾರತ ದೇಶದ ಸಂಪತ್ತು ಎಷ್ಟು ಲೂಟಿ ಮಾಡಿದರೂ ಕರಗಲ್ಲ: ಹೆಚ್‌ಡಿಕೆ

Public TV
2 Min Read

ರಾಮನಗರ: ಭಾರತ ದೇಶದಲ್ಲಿ ಭಗವಂತ ಕೊಟ್ಟಿರುವ ಸಂಪತ್ತು ಎಷ್ಟು ಲೂಟಿ ಮಾಡಿದರೂ ಕರಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಮೈಲನಾಯಕನಹೊಸಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜಮಹಾರಾಜರ ಕಾಲದಲ್ಲಿ ಒಂದು ರೀತಿಯ ಗುಲಾಮಗಿರಿ ಇತ್ತು. ಆ ನಂತರ ಬಂದ ಮೊಘಲರ ಕಾಲದಲ್ಲಿ ಇನ್ನೊಂದು ರೀತಿಯ ಗುಲಾಮಗಿರಿ ಇತ್ತು. ನಂತರ ಬಂದ ಈಸ್ಟ್ ಇಂಡಿಯಾ ಕಂಪನಿಯವರು ನಮ್ಮ ದೇಶವನ್ನೇ ಆಳಿದರು. ವ್ಯಾಪಾರ ಮಾಡಲು ಬಂದು ದೇಶವನ್ನೇ ಲೂಟಿ ಮಾಡಿಕೊಂಡು ಹೋದ್ರು. ನಮ್ಮ ದೇಶದಲ್ಲಿ ನಾವೇ ಅವರಿಗೆ ತೆರಿಗೆ (Tax) ಕಟ್ಟಬೇಕಾಯಿತು. ಅದೇ ರೀತಿ ಈಗಿನ ರಾಷ್ಟ್ರೀಯ ಪಕ್ಷಗಳು ಒಂದು ರೀತಿಯ ಈಸ್ಟ್ ಇಂಡಿಯಾ ಕಂಪನಿಯಂತಾಗಿವೆ. ಇದು ನಮ್ಮ ದೇಶದ ಸಂಸ್ಕೃತಿ, ನಮ್ಮದು ಸಂಪದ್ಭರಿತವಾದ ದೇಶ. ಈ ದೇಶದಲ್ಲಿ ಭಗವಂತ ಕೊಟ್ಟಿರುವ ಸಂಪತ್ತು ಎಷ್ಟು ಲೂಟಿ ಮಾಡಿದರೂ ಕರಗಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.

ಪರ್ಸೆಂಟೇಜ್ ಲೆಕ್ಕಾಚಾರ ಶುರುವಾಗುತ್ತೆ:
ಕಾಂಗ್ರೆಸ್‌ನಲ್ಲೂ (Congress) ಈಗ ಪರ್ಸೆಂಟೇಜ್ ಲೆಕ್ಕಾಚಾರ ಶುರುವಾಗುತ್ತೆ. ಅದರಲ್ಲಿ ಯಾವುದೇ ಅನುಮಾನ ಬೇಡ. ರೇಟ್ ಫಿಕ್ಸ್ ಮಾಡುವ ಸಲುವಾಗಿ ಎಲ್ಲಾ ಕೆಲಸಗಳನ್ನ ನಿಲ್ಲಿಸಿದ್ದಾರೆ. ಕಳೆದ 4 ವರ್ಷಗಳಲ್ಲಿ ಆಗಿರುವ ಬೆಂಗಳೂರು ಅಭಿವೃದ್ಧಿ ಬಗ್ಗೆ ತನಿಖೆ ಮಾಡ್ತೀವಿ ಅಂತಾ ಒಬ್ಬ ಮಂತ್ರಿ ಹೇಳ್ತಾರೆ. ಇದು ನಗೆಪಾಟಲಿನ ವಿಚಾರ. 4 ವರ್ಷಗಳ ಅಭಿವೃದ್ಧಿ ಕಾರ್ಯಗಳ ತನಿಖೆ (Investigation) ಯಾವರೀತಿ, ಎಲ್ಲಿಂದ ಮಾಡಲು ಸಾಧ್ಯ? ಇವತ್ತು ಬೆಳಿಗ್ಗೆಯಾದ್ರೆ ಯಾವ ಮಂತ್ರಿ ನೋಡಿದ್ರೂ ತನಿಖೆ.. ತನಿಖೆ.. ಅಂತಾರೆ. ಇದು 5 ಗ್ಯಾರಂಟಿಗಳ ಜೊತೆಗೆ ತನಿಖಾ ಜ್ಯೋತಿ ಕೊಡಲು ಹೊರಟಿದ್ದಾರೆ. ಈ ಸರ್ಕಾರದ ಹೇಳಿಕೆ ನೋಡಿದ್ರೆ ಇದು 6ನೇ ಗ್ಯಾರಂಟಿ ಅನ್ನಿಸುತ್ತೆ. ಹಾಗಾಗಿ `ಹಿಂದಿನ ಸರ್ಕಾರದ ತನಿಖಾ ಜ್ಯೋತಿ’ ಅಂತಾ ಸೇರಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಯಾರಿ – ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ

ರಾಜ್ಯದಲ್ಲಿ ಪರಿಶುದ್ಧ ಆಡಳಿತ ತರ್ತಿವಿ ಅನ್ನೋದು ಇವರ ಭ್ರಮೆ. ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಹೊಸ ಹೊಸ ಹೇಳಿಕೆ ಕೊಡ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ

ವರ್ಗಾವಣೆ ದಂಧೆ ಜೋರಾಗಿದೆ:
ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಕುರಿತ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದೇ ಹುದ್ದೆಗೆ ಮುಖ್ಯಮಂತ್ರಿ ಅವರೇ 4 ರಿಂದ 5 ಬಾರಿ ಆದೇಶ ಮಾಡಿದ್ದಾರೆ. ಸಿಎಂ ಕಚೇರಿಯಲ್ಲಿ ಏನೇನು ನಡೆಯುತ್ತಿದೆ? ಒಂದೇ ಹುದ್ದೆಗೆ ಐದು ವ್ಯಕ್ತಿಗಳನ್ನ ನಿಯುಕ್ತಿಗೊಳಿಸಿದ್ದಾರೆ. ಇದನ್ನ ಯಾರು ಆದೇಶ ಮಾಡಿದ್ದಾರೆ? ಕಾಂಗ್ರೆಸ್‌ನಲ್ಲಿ ವರ್ಗಾವಣೆ ದಂಧೆ (Transfer Scam) ದೊಡ್ಡಮಟ್ಟದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಲಂಚ ಮುಟ್ಟಲ್ಲ ಅಂತ ವೀರಾವೇಶದಲ್ಲಿ ಹೇಳ್ತಾರೆ:
ಕಾಂಗ್ರೆಸ್ಸಿನವರು ಹೊರನೋಟಕ್ಕೆ ನಾವು ಲಂಚ ತೆಗೆದುಕೊಳ್ಳಲ್ಲ ಅಂತಾರೆ. ನಾನು ಲಂಚ ಮುಟ್ಟಲ್ಲ, ನೀವು ಮುಟ್ಟಬೇಡಿ ಅಂತ ವೀರಾವೇಶದಲ್ಲಿ ಹೇಳ್ತಾರೆ. ಆದ್ರೆ ಬೆಳಿಗ್ಗೆ ಎದ್ದಕೂಡಲೇ ವರ್ಗಾವಣೆ ದಂಧೆ ನಡೆಯುತ್ತಿದೆ. ಕಾಂಗ್ರೆಸ್‌ನವರು ವರ್ಗಾವಣೆ ಬಿಟ್ರೆ ಬೇರೇನೂ ಕೆಲಸ ಮಾಡ್ತಿಲ್ಲ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳನ್ನ ಬಿಜೆಪಿಗಿಂತ ಕೆಟ್ಟ ರೀತಿ ನಡೆಸಿಕೊಳ್ತಿದ್ದಾರೆ. ಅಧಿಕಾರ ಬಂದಾಗ ತಲೆತಿರುಗದೆ ಗೌರವಯುತವಾಗಿ ಕೆಲಸ ಮಾಡಬೇಕು. ಜನಪ್ರತಿನಿಧಿಗಳು ಮೊದಲ ಸಾರ್ವಜನಿಕವಾಗಿ ಯಾವರೀತಿ ನಡೆದುಕೊಳ್ಳಬೇಕು ಅಂತಾ ಕಲಿಯಬೇಕು ಎಂದು ಕುಟುಕಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್