ಏರ್ ಶೋನಿಂದ ಟ್ರಾಫಿಕ್ ಬಿಸಿ – 1 ಕಿ.ಮೀ ಜಾಮ್

Public TV
2 Min Read

ಬೆಂಗಳೂರು: ಇಂದಿನಿಂದ ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ ಶೋ ಆರಂಭವಾಗಿದ್ದು, ಇದರಿಂದ ಟ್ರಾಫಿಕ್‍ಗೂ ಬಿಸಿ ತಟ್ಟಿದೆ.

ಯಲಹಂಕ ಏರ್ ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಯಲಹಂಕ ವಾಯನೆಲೆ ಹತ್ತಿರ ಒಂದು ಕಿಲೋ ಮೀಟರ್ ಟ್ರಾಫಿಕ್ ಜಾಮ್ ಆಗಿದೆ. ವಾಹನಗಳು ಬೆಂಗಳೂರು ನಗರ ಮತ್ತು ಬೇರೆ ಬೇರೆ ಕಡೆಗಳಿಂದ ಏರೋ ಶೋ ಕಡೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಇಂದು ಏರ್ ಶೋ 2019ಕ್ಕೆ ಚಾಲನೆ- ಹೇಗಿರಲಿದೆ ಇಂದಿನ ಏರ್ ಶೋ?

ಏರ್ ಪೋರ್ಟ್ ರಸ್ತೆ ಯಲಹಂಕ ವಾಯನೆಲೆ ಹತ್ತಿರ ಗಣ್ಯ, ಅತಿಗಣ್ಯ, ತುರ್ತು ವಾಹನ, BMTC, KSRTC ಹೊರತುಪಡಿಸಿ ಸಾರಿಗೆ ಸಂಚಾರಕ್ಕೆ ನಿಷೇಧ ಮಾಡಲಾಗಿದೆ. ಇತ್ತ ಹೆಬ್ಬಾಳ ಫ್ಲೈಓವರ್ ನಿಂದ MVIT ಜಂಕ್ಷನ್‍ವರೆಗೂ ಭಾರೀ ವಾಹನ ಸಂಚಾರವನ್ನು ನಿಷೇಧಿಸಿದ್ದು, ಲಾರಿ, ಟ್ರಕ್, ಖಾಸಗಿ ಬಸ್ ಇತರೆ ಭಾರೀ ಸರಕು ಸಾಗಾಣೆ ವಾಹನ ನಿಷೇಧ ಮಾಡಲಾಗಿದೆ.

ಬೆಂಗಳೂರು, ಹೈದರಾಬಾದ್, ಚಿಕ್ಕಬಳ್ಳಾಪುರ ಕಡೆಗಳಿಂದ ಹೋಗುವ ಬರುವ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಇತ್ತ ಏರ್ ಪೋರ್ಟ್ ರಸ್ತೆ, ದೊಡ್ಡಬಳ್ಳಾಪುರ ರಸ್ತೆಗಳ ರಸ್ತೆ ಬದಿ ವಾಹನಗಳನ್ನು ಪಾರ್ಕಿಂಗ್ ಮಾಡುವಾಗಿಲ್ಲ. ನಾಗೇನಹಳ್ಳಿ ಗೇಟ್‍ನಿಂದ ಗಂಟಿಗಾನಹಳ್ಳಿ ಮೂಲಕ ಆ್ಯಂಬಿಯನ್ಸ್ ಡಾಬಾವರೆಗೆ ರಸ್ತೆ ಬದಿ ವಾಹನಗಳ ಪಾರ್ಕಿಂಗ್ ನನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸುಗಮ ಸಂಚಾರ ವ್ಯವಸ್ಥೆಗಾಗಿ 3 ಡಿಸಿಪಿ, 7 ಎಸಿಪಿ, 33 ಪೊಲೀಸ್ ಇನ್ಸ್ ಪೆಕ್ಟರ್ಸ್, 137 ಪಿಎಸ್‍ಐ, 211 ಎಸ್‍ಡಿಐ, 447 ಹೆಡ್ ಕಾನ್ಸ್ ಟೇಬಲ್ ಮತ್ತು 648 ಪಿಸಿಗಳು ಸೇರಿದಂತೆ ಒಟ್ಟು 1478 ಜನ ಸಂಚಾರಿ ಪೊಲೀಸರ ನಿಯೋಜನೆಯನ್ನು ಮಾಡಲಾಗಿದೆ.

ಪರ್ಯಾಯ ಮಾರ್ಗ:
ಮೇಖ್ರಿ, ಹೆಬ್ಬಾಳ ಭಾಗದಲ್ಲಿ ಟ್ರಾಫಿಕ್ ಬಿಸಿ ತಟ್ಟೋದ್ರಿಂದ ಕೆಐಎಎಲ್‍ಗೆ ಹೋಗುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮ ಭಾಗದಿಂದ ಕೆಂಪೇಗೌಡ ಏರ್ ಪೋರ್ಟ್ ಗೆ ಹೋಗುವವರು ಗೊರುಗುಂಟೆ ಪಾಳ್ಯ, ಬಿಇಎಲ್ ಮಾರ್ಗ, ಗಂಗಮ್ಮ ಸರ್ಕಲ್, ದೊಡ್ಡಬಳ್ಳಾಪುರ ರಸ್ತೆಯಿಂದ ಹೋಗಬಹುದು. ಪೂರ್ವ ಭಾಗ, ಕೆಆರ್ ಪುರಂ, ಹೆಣ್ಣೂರು ಮಾರ್ಗವಾಗಿ ಸಾಗಬಹುದು. ದಕ್ಷಿಣ ಭಾಗ ಮೈಸೂರು ರಸ್ತೆ ನಾಯಂಡಹಳ್ಳಿ ಮಾರ್ಗವಾಗಿ ಬಿಇಎಲ್ ಮಾರ್ಗವಾಗಿ ಕೆಐಎಎಲ್‍ಗೆ ತಲುಪಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *